ಪ್ರಿಯಾಂಕ ವಿಶ್ವದ ಎರಡನೇ ಅತ್ಯಂತ ಸುಂದ

ಮುಂಬೈ, ಏ ೩- ಬಾಲಿವುಡ್ ನಟಿ ಪ್ರಿಯಾಂಕ ಛೋಪ್ರಾ ಇದೀಗ ವಿಶ್ವದ ಅತ್ಯಂತ ಸುಂದರಿಯರ ಪಟ್ಟಿಯಲ್ಲಿ ಎರಡನೇ ಸ್ಥಾನ ಗಳಿಸಿ ಎಲ್ಲಾರ ಹುಬ್ಬೆರಿಸುವಂತೆ ಮಾಡಿದ್ದಾರೆ.

ಈ ವಿಚಾರವನ್ನು ಸ್ವತಃ ಪ್ರಿಯಾಂಕ ಅವರೇ ಟ್ವಿಟರ್‌ನಲ್ಲಿ ಖಾತ್ರಿ ಪಡಿಸಿದ್ದು, ಟಾಪ್ ೩೦ರಲ್ಲಿ ವಿಶ್ವದ ಅತ್ಯಂತ ಸುಂದರಿಯರ ಪಟ್ಟಿಯಲ್ಲಿ ಎರಡನೇ ಸ್ಥಾನ ಕಬಳಿಸಿರುವ ಬಗ್ಗೆ ಪ್ರಕಟಿಸಿ ಸಂತಸ ವ್ಯಕ್ತಪಡಿಸಿದ್ದಾರೆ. ಆನ್‌ಲೈನ್ ಮೀಡಿಯಾವಾದ ಬಜ್‌ನೆಟ್‌ನಲ್ಲಿ ಪ್ರಕಟವಾಗಿರುವ ಲೇಖನದಲ್ಲಿ ಪ್ರಿಯಾಂಕ ಅವರು ಎರಡನೇ ಸ್ಥಾನ ಗಳಿಸಿದ್ದು, ಹಾಲಿವುಡ್ ನಟಿಯರಾದ ಏಂಜಲಿನಾ ಜೂಲಿ, ಎಮ್ಮಾ ಸ್ಟೋನ್, ಮಾರ್ಗಾಟ್ ರಾಬಿಯಾ ಅವರನ್ನು ಹಿಂದಿಕ್ಕಿ ಪ್ರಿಯಾಂಕ ಎರಡನೇ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಎಂಬುದನ್ನು ಪ್ರಕಟಿಸಿದೆ.

೨೦೧೭ರ ಸುಂದರಿಯರ ಪಟ್ಟಿಯಲ್ಲಿ ಭಾರತದ ನಟಿ ಪ್ರಿಯಾಂಕ ಛೋಪ್ರ ಇಂತಹ ಅಗ್ರಸ್ಥಾನಕ್ಕೇರಿರುವ ಮೊದಲ ನಟಿ ಎಂದರೆ ತಪ್ಪಗಲಾರದು. ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರ ಕೂಡಾ ಸುಂದರ ಸೆಲೆಬ್ರಿಟಿ. ದೇಶ ಮಾತ್ರವಲ್ಲದೇ ವಿದೇಶದಲ್ಲೂ ತನ್ನ ನಟನೆಯಿಂದ ಬಹುದೊಡ್ಡ ಅಭಿಮಾನಿ ಬಳಗವೇ ಹೊಂದಿದ್ದಾರೆ.

ಈಗಾಗಲೇ ಹಾಲಿವುಡ್‌ನಲ್ಲಿ ತಮ್ಮದೇ ಛಾಪು ಮೂಡಿಸಿರುವ ಪ್ರಿಯಾಂಕ ಛೋಪ್ರಾ ಅವರು ಬೇವಾಚ್ ಚಿತ್ರದ ಮೂಲಕ ಹಾಲಿವುಡ್ ಪ್ರವೇಶ ಮಾಡಿ ತಮ್ಮನ್ನು ಸಾಬೀತುಪಡಿಸಲು ಸಜ್ಜಾಗಿದ್ದಾರೆ. ಇನ್ನು ಹಲವಾರು ರೆಡ್ ಕಾರ್ಪೆಟ್ ಮೇಲೆ ಸಕತ್‌ಗೆ ಮಿಂಚುತ್ತಾ ಗಮನ ಸೆಳೆಯುವಲ್ಲಿ ಕೂಡ ಯಶಸ್ವಿಯಾಗಿದ್ದಾರೆ. ಟಾಫ್ ೩೦ ರಲ್ಲಿ ಪ್ರಿಯಾಂಕ್ ಛೋಪ್ರಾ ಇಡೀ ವಿಶ್ವದ ಸುಂದರಿಯನ್ನು ಹಿಂದಿಕ್ಕಿ ಇದೀಗ ವಿಶ್ವದ ಅತ್ಯಂತ ಸುಂದರಿಯರ ಪಟ್ಟಿಯಲ್ಲಿ ತಮ್ಮ ಸ್ಥಾನವನ್ನು ಗಟ್ಟಿಗೊಳಿಸಿಕೊಂಡಿದ್ದಾರೆ

Leave a Comment