ಪ್ರಿಯಾಂಕ ಬಳಿಕ ದೀಪಿಕಾ ಹಾಲಿವುಡ್‌ನತ್ತ ಬಾಲಿವುಡ್ ಬೆಡಗಿಯರು

ಬಾಲಿವುಡ್‌ನಲ್ಲಿ ಬಹುಬೇಡಿಕೆಯ ನಟಿಯರಾಗಿ ಗುರುತಿಸಿಕೊಂಡಿರುವ ದೀಪಿಕಾ ಪಡುಕೋಣೆ, ಪ್ರಿಯಾಂಕ ಚೋಪ್ರಾ ಹೀಗೆ ಒಬ್ಬರ ಹಿಂದೆ ಒಬ್ಬರಂತೆ ಹಾಲಿವುಡ್‌ಗೆ ಹಾರುತ್ತಿದ್ದಾರೆ. ಹಾಲಿವುಡ್‌ನಲ್ಲಿ ನಟಿಸುವುದರಿಂದ ವಿಶ್ವಮನ್ನಣೆ ಪಡೆಯುವ ಜೊತೆಗೆ ಕೈ ತುಂಬಾ ಕಾಸು ಮಾಡಬಹುದು ಎನ್ನುವ ಲೆಕ್ಕಾಚಾರ ಬಾಲಿವುಡ್‌ನ ಬೆಡಗಿಯರದು.

ಪ್ರಿಯಾಂಕ ಚೋಪ್ರಾ ಹಾಲಿವುಡ್‌ನಲ್ಲಿ ಹೆಜ್ಜೆ ಇರಿಸಿ ಅದರಲ್ಲಿ ಯಶಸ್ವಿಯಾದ ಬೆನ್ನಲ್ಲೇ ಮೊತ್ತೊಬ್ಬ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅದೇ ಹಾದಿಯಲ್ಲಿ ಸಾಗಿದ್ದಾರೆ. ಈ ನಡುವೆ ಗ್ಲೋಬಲ್ ಗ್ಲೋಬ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಚಿನ್ನದ ಧಿರಿಸಿ ಧರಿಸಿ ಕಂಗೊಳ್ಳಿಸಿದ್ದಾರೆ.

ಪ್ರಿಯಾಂಕ ಚೋಪ್ರಾ ಹಾಲಿವುಡ್‌ನ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡು ಹಾಲಿವುಡ್‌ನಲ್ಲಿ ತನ್ನ ಬೇರು ಭದ್ರ ಪರಿಸಿಕೊಳ್ಳುತ್ತಿದ್ದಾರೆ. ಇಂತಹದುರ ನಡುವೆ ಇದೀಗ ಮತ್ತೊಬ್ಬ ನಟಿ ದೀಪಿಕಾ ಪಡುಕೋಣೆ ಹಾಲಿವುಡ್‌ಗೆ ಹಾರಿದ್ದಾರೆ.
ವಿನ್ ಡೀಸೆಲ್ ಜೊತೆ “ತ್ರಿಬ್ಬಲ್ ಎಕ್ಸ್” ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆ ಚಿತ್ರ ಸದ್ಯದಲ್ಲಿಯೇ ತೆರೆಗೆ ಬರಲಿದೆ. ಚಿತ್ರದ ಟೀಸರ್ ನೋಡಿದ ದೀಪಿಕಾ ಪಡುಕೋಣೆಯ ಅಭಿಮಾನಿಗಳು ಹೆಚ್ಚಿಗೆ ಕಾಣಿಸಿಕೊಳ್ಳದಿದ್ದದಕ್ಕೆ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಬೇಜಾರು ಮಾಡಿಕೊಳ್ಳಬೇಡಿ ಚಿತ್ರ ಬಿಡುಗಡೆಯಾದ ಮೇಲೆ ನಿಮಗೆ ನಿರಾಸೆಯಾಗುವುದಿಲ್ಲ ಎಂದು ಅಭಿಮಾನಿಗಳನ್ನು ಸಮಾಧಾನ ಪಡಿಸಿದ್ದಾರೆ.
ಚೊಚ್ಚಲ ಭಾರಿಗೆ ನಟಿಸಿರುವ ಹಾಲಿವುಡ್ ಚಿತ್ರ ಬಿಡುಗಡೆಗೆ ಮುನ್ನ ಹಾಲಿವುಡ್‌ನಲ್ಲಿ ಮತ್ತೊಂದು ಅವಕಾಶ ಪಡೆದಿದ್ದಾರೆ. ಅದುವೇ “ಎಲೆನ್ ಡೀಜೀನರ್‍ಸ್ ಶೋ”. ಅಮೇರಿಕಾದ ಕಿರುತೆರೆಯಲ್ಲಿ ಪ್ರಸಾರವಾಗುವ ಈ ಶೋಗೆ ಹೆಚ್ಚಿನ ವೀಕ್ಷಕರಿದ್ದಾರೆ. ಹಾಲಿವುಡ್‌ನ ಟಿವಿ ಶೋನಲ್ಲಿ ಕಾಣಿಸಿಕೊಂಡು ಪ್ರಿಯಾಂಕ ಚೋಪ್ರಾ ಹೆಚ್ಚಿನ ಜನಪ್ರಿಯತೆ ಪಡೆದಿದ್ದರು. ಇದೀಗ ಪೀಸಿ ಹಾದಿಯನ್ನು ಡೀಪಿ ತುಳಿದಿದ್ದಾರೆ.
ಸದ್ಯ ಚಿತ್ರೀಕರಣಕ್ಕಾಗಿ ದೀಪಿಕಾ ಪಡುಕೋಣೆ ಮೆಕ್ಸಿಕೋ ನಗರದಲ್ಲಿದ್ದಾರೆ. ಅಮೇರಿಕಾದ ಕಿರುತೆರೆಯಲ್ಲಿ ನಟಿಸುವ ಅವಕಾಶ ಸಿಕ್ಕಿರುವ ಬಗ್ಗೆ ದೀಪಿಕಾ ಪಡುಕೋಣೆ ಹೆಮ್ಮೆ ಮತ್ತು ಖುಷಿ ವ್ಯಕ್ತಪಡಿಸಿದ್ದಾರೆ.
ಹಾಲಿವುಡ್ ನಟ ವಿನ್ ಡೀಸೆಲ್ ಈ ವಾರ ಭಾರತಕ್ಕೆ ಬರಲಿದ್ದು ದೀಪಿಕಾ ಪಡುಕೋಣೆ ಜೊತೆಯಾಗಿ ನಟಿಸಿರುವ “ತ್ರಿಬ್ಬಲ್ ಎಕ್ಸ್” ಚಿತ್ರದ ಪ್ರಚಾರ ನಡೆಸಲಿದ್ದಾರೆ. ಚಿತ್ರದಲ್ಲಿ ದೀಪಿಕಾ ಅವರದು ಸೆರೇನಾ ಎನ್ನುವ ಮಹಿಳೆಯ ಪಾತ್ರ. ಸ್ವತಂತ್ರವಾಗಿ ಬದುಕಬೇಕೆಂದು ಕನಸು ಕಾಣುವ ಹುಡುಗಿ ಆ ನಿಟ್ಟಿನಲ್ಲಿ ಕೆಲಸ ಮಾಡುವ ಹುಡುಗಿಯ ಪಾತ್ರ. ಯಾವುದೇ ನಿರ್ಧಾರಗಳನ್ನು ಕೈಗೊಂಡರೂ ಆಕೆ ಅದನ್ನು ಸಕಾರ ಮಾಡಲು ಪ್ರಯತ್ನಿಸುವ ಮಹಿಳೆಯ ಪಾತ್ರ ಎಂದು ದೀಪಿಕಾ ಪಡುಕೋಣೆ ಹೇಳಿದ್ದಾರೆ.
ಅಮೇರಿಕಾದ ಕಿರುತೆರೆಯ ಶೋ ಹೆಚ್ಚು ಜನಪ್ರಿಯತೆಯನ್ನು ತಂದುಕೊಡಲಿದೆ. ಜೊತೆಗೆ ಅಮೇರಿಕಾ ಸೇರಿದಂತೆ ಜಗತ್ತಿನ ವಿವಿಧ ದೇಶಗಳಲ್ಲಿ ನೆಲೆಸಿರುವ ಭಾರತೀಯರಿಗೆ ಶೋ ಇಷ್ಟವಾಗಲಿದೆ ಎನ್ನುವ ವಿಶ್ವಾಸ ದೀಪಿಕಾ ಪಡುಕೋಣೆ ಅವರದು.
ಹಾಲಿವುಡ್‌ನಲ್ಲಿ ಎಷ್ಟೇ ಜನಪ್ರಿಯತೆ ಪಡೆದರೂ ಬಾಲಿವುಡ್ ಚಿತ್ರರಂಗದಲ್ಲಿ ನಟಿಸುವುದನ್ನು ನಿಲ್ಲಿಸುವುದಿಲ್ಲ. ಭಾರತದಲ್ಲಿ ಬೆಳೆಸಿದ ಅಭಿಮಾನಿಗಳನ್ನು ನಿರಾಸೆ ಮಾಡುವುದಿಲ್ಲ ಎಂದೂ ಹೇಳಿದ್ದಾರೆ.

Leave a Comment