ಪ್ರಿಯಾಂಕಾ ಉಪೇಂದ್ರ ಮಹಾಕಾಳಿ ಭಕ್ತೆಯಂತೆ….

ಸಂದರ್ಶನದಲ್ಲಿ ಬಿಚ್ಚು ಮಾತು
ಖ್ಯಾತ ನಟಿ ಪ್ರಿಯಾಂಕ ಉಪೇಂದ್ರ ಸ್ಯಾಂಡಲ್‌ವುಡ್‌ನಲ್ಲಿ ಮಾತ್ರವಲ್ಲ ಕಿರುತೆರೆ ಮತ್ತು ಸಾಮಾಜಿಕ ಜಾಲ ತಾಣಗಳಲ್ಲಿ ಬ್ಯುಸಿಯಾಗಿದ್ದಾರೆ. ಉಪೇಂದ್ರ ಅಭಿನಯದ ಐ ಲವ್ ಯು ಚಿತ್ರದಲ್ಲಿ ನಟಿ ರಚಿತಾ ರಾಮ್ ಚುರುಕು ಮುಟ್ಟಿಸಿದ್ದು ತೀವ್ರ ಚರ್ಚೆಗೆ ಗ್ರಾಸವಾಗಿದ್ದರು. ಕೊಲ್ಕತ್ತಾದಲ್ಲಿ ತಮ್ಮ ಬಾಲ್ಯದ ದಿನಗಳನ್ನು ಕಳೆದಿರುವ ಈಕೆಗೆ ಮಹಾಕಾಳಿ ನೆಚ್ಚಿನ ದೇವತೆಯಂತೆ. ಈ ದೇವಿ ಪ್ರಿಯಾಂಕಾ ಅವರ ಬದುಕಿನ ಮೇಲೂ ಕಾಳಿ ಪ್ರಭಾವ ಬೀರಿದ್ದಾಳಂತೆ. ಈ ಬಗ್ಗೆ ಫೇಸ್ ಬುಕ್‌ಗೆ ನೀಡಿದ ಸಂದರ್ಶನದಲ್ಲಿ ಈ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.
ಆರ್ಟ್ ಆಫ್ ಲಿವಿಂಗ್ ಫೌಂಡೇಷನ್ನಿನ ಮಹಿಳಾ ಸಬಲೀಕರಣ ಮತ್ತು ಮಕ್ಕಳ ಆರೈಕೆ ಕಾರ್ಯಕ್ರಮಗಳ ನಿರ್ದೇಶಕಿ ಭಾನುಮತಿ ನರಸಿಂಹನ್ ನಡೆಸಿದ ಸಂದರ್ಶನದಲ್ಲಿ ಪ್ರಿಯಾಂಕಾ ಉಪೇಂದ್ರ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.
ಈ ಸಂದರ್ಶನದಲ್ಲಿ ಭಾರತೀಯ ಪುರಾಣ ಕತೆಗಳ ಅರ್ಥವನ್ನು ಬಹಿರಂಗಪಡಿಸುವ ಇತ್ತೀಚಿನ ಪುಸ್ತಕ ಪರಾಶಕ್ತಿ “ಮ್ಯಾಜಿಕಲ್ಸ್ಟೋರೀಸ್ ಆಫ್ ದಿ ಡಿವೈನ್ ಮದರ್’ ಪುಸ್ತಕ ಕರ್ತೃ ಕುರಿತು ಸಂಭಾಷಣೆ ನಡೆಸಿದರು.
ಮಹಿಳೆಯು ದೈನಂದಿನ ಜೀವನದಲ್ಲಿ ಅನೇಕ ಪಾತ್ರಗಳನ್ನು ಅತ್ಯಂತ ಸಮರ್ಥವಾಗಿ ತನ್ನ ಜವಾಬ್ದಾರಿಯನ್ನು ನಿರ್ವಹಿಸುವ ಸಂವೇದನೆಯ ಬಗ್ಗೆ ಪ್ರಿಯಾಂಕಾ ತಮ್ಮದೇ ಶೈಲಿಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದು ವಿಶೇಷವೆನಿಸಿತು.ನಿತ್ಯ ಜೀವನದಲ್ಲಿ ಲೀಲಾ, ಧ್ಯಾನ ಮತ್ತು ಯೋಗವನ್ನಿ ಅಳವಡಿಸಿಕೊಂಡಿರುವ ವ್ಯಕ್ತಿಯ ವಿವರಣೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟರು. ಪ್ರಿಯಾಂಕ ಅವರೊಂದಿಗಿನ ಆಸಕ್ತಿದಾಯಕ ಸಂದರ್ಶನದಲ್ಲಿ ಕೇಳಿದ ಪ್ರಶ್ನೆಗಳಿಗೆ ಪ್ರಬುದ್ಧತೆಯ ರೀತಿಯಲ್ಲಿ ಉತ್ತರ ನೀಡಿ ಗಮನ ಸೆಳೆದರು.
ತಮ್ಮ ಜೀವನದಲ್ಲಿ ಮಹಾ ಕಾಳಿ ಉಗ್ರರೂಪ ತಾಳಿದ ಮಹತ್ವದ ವಿವರಗಳನ್ನು ನೀಡಿದ ಪ್ರಿಯಾಂಕಾ, ಕೊಲ್ಕತ್ತದಲ್ಲಿ ಕಳೆದ ಬಾಲ್ಯದ ಜೀವನವನ್ನು ಮೆಲುಕುಹಾಕಿದರು. ಮಹಾಕಾಳಿ ತಮ್ಮ ಬದುಕಿನಲ್ಲಿ ಪ್ರಭಾವ ಬೀರಿದ್ದಾಳಂತೆ. ಕಾಳಿ ಪ್ರಿಯಾಂಕಾ ಅವರ ಅಚ್ಚುಮೆಚ್ಚಿನ ದೇವತೆ ಎಂಬುದನ್ನು ಹೇಳಲು ಮರೆಯಲಿಲ್ಲ. ಕೊಲ್ಕತ್ತಾದಲ್ಲಿ ಕಾಳಿ ಘಾಟ್‌ಗೆ ಭೇಟಿ ನೀಡಿ ಪೂಜಿಸುತ್ತಿದ್ದ ವಿವರವನ್ನು ಸಂದರ್ಶನದಲ್ಲಿ ವಿವರಿಸಿದರು ಕೊಲ್ಕತ್ತ ಬೆಡಗಿ.
ಮಹಾಕಾಳಿ ಉಗ್ರ ಸ್ವರೂಪ ತಾಳುವ ಹಿಂದಿನ ಪ್ರಾಮುಖ್ಯತೆಯನ್ನು ಕುರಿತು ಭಾನುಮತಿ ಪ್ರತಿಕ್ರಿಯಿಸಿದರು. ಇದರ ಅರ್ಥವನ್ನು ಅರಿತುಕೊಂಡು ಜನರು ಎಲ್ಲ ರೀತಿಯಲ್ಲೂ ಸೌಂದರ್ಯ ಕಾಣಲು ಸಾಧ್ಯವಾಗುವುದಲ್ಲದೆ ಕಾಳಿ ದೇವಿಯ ಮೇಲಿರುವ ಭಕ್ತಿಯನ್ನು ಇನ್ನಷ್ಟು ಗಟ್ಟಿಗೊಳಿಸಲಿದೆ.
ಸೌಂದರ್ಯವನ್ನು ಅನುಭವಿಸುವುದರ ಜೊತೆಗೆ ಕಾಳಿಯ ಅನುಪಸ್ಥಿತಿಯಲ್ಲಿ ಆಕೆಯ ಕೃಪಾಕಟಾಕ್ಷದಿಂದ ಯಾವುದೇ ಭಯವೂ ಇರುವುದಿಲ್ಲವಂತೆ. ತಲೆ ಬುರುಡೆಗಳ ಹಾರವನ್ನು ಧರಿಸುವುದರ ಹಿಂದೆ ಇರುವ ಬುದ್ದಿವಂತಿಕೆಯ ಕುರಿತು ವಿವರಿಸಿದ ಪ್ರಿಯಾಂಕ, ಲೋಲಿಂಗ್ ನಾಕ್ ಇತ್ಯಾದಿಗಳು ಪ್ರೇಕ್ಷಕರ ಮೆಚ್ಚುಗೆ ಗಳಿಸುವಲ್ಲಿ ಸಫಲವಾಯಿತು.
ಆಚರಣೆಗಳ ಅರ್ಥ, ಆಧ್ಯಾತ್ಮಿಕತೆಯ ಪಾತ್ರ, ಮಾಂತ್ರಿಕ ಮತ್ತು ದೈವಿಕ ಶಕ್ತಿಗಳನ್ನು ಹೊಂದಿರುವ ವಿಭಿನ್ನ ಗುಣಗಳ ಕಡೆಗೆ ಕೇಂದ್ರೀಕರಿಸುವುದು ಹೇಗೆ ಹಾಗೂ ವ್ಯಕ್ತಿಯ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಿ ಜೀವನದ ಗುರಿ ತಲುಪುವ ದಿಕ್ಕಿನತ್ತ ವ್ಯಕಿಗೆ ಹೇಗೆ ಸಹಾಯ ಮಾಡುತ್ತದೆ ಎಂಬ ಬಗ್ಗೆಯೂ ಭಾನುಮತಿ ಮತ್ತು ಪ್ರಿಯಾಂಕಾ ಅರ್ಥಪೂರ್ಣವಾಗಿ ವಿವರ ಒದಗಿಸಿದರು.
ಪರಾಶಕ್ತಿ ಎಂಬ ಪುಸ್ತಕದಲ್ಲಿ ’ನೀನೆ ನೀನಾಗಿರು’ ಎಂಬ ವಿಷಯವನ್ನು ಆಸಕ್ತಿದಾಯಕವಾಗಿ ಬಿಂಬಿಸಲಾಗಿದೆ. ನಾವು ನಮ್ಮ ತನವನ್ನು ಹೇಗೆ ಮರೆತು ಬಿಡುತ್ತೇವೆ ಈ ಒಂದು ಸಣ್ಣ ವಿಷಯ ತಮ್ಮ ಮೇಲೆ ಯಾವ ರೀತಿ ಪ್ರಭಾವ ಬೀರುತ್ತದೆ ಎಂಬುದನ್ನು ತಿಳಿಸುತ್ತದೆ ಎಂದು ಭಾನುಮತಿ ಹೇಳಿದರು.
ಪರಾಶಕ್ತಿ ಎಂಬ ಹೆಸರೇ ಹೇಳುವಂತೆ ದೇವಿಯ ಸೌಂದರ್ಯವನ್ನು ಸೂಚಿಸುತ್ತದೆ. ದೈವಿಕ ಚಿಂತನೆಯ ಬದಲು ತನ್ನ ಅಸ್ತಿತ್ವ ಅನುಭವಿಸುವ ಮೂಲಕ ಭಾವಿಸಬಹುದಾದ ಮತ್ತು ಅತ್ಯುನ್ನತ ಶಕ್ತಿಯಾಗಿದೆ ಎಂಬ ಬಗ್ಗೆಯೂ ಸಂದರ್ಶನದಲ್ಲಿ ಬೆಳಕು ಚೆಲ್ಲಲಾಯಿತು.
ಈ ಸಂದರ್ಶನವನ್ನು ದೇಶಾದ್ಯಂತ ೬೫ ರಾಷ್ಟ್ರಗಳಲ್ಲಿ ಜನರು ಲೈವ್ ಚಾಟ್ ಮೂಲಕ ವೀಕ್ಷಿಸಿದರು. ಇದರ ಜೊತೆಗೆ ಪರಾಶಕ್ತಿ ಒಳನೋಟಗಳನ್ನು ಹಂಚಿಕೊಂಡಿದ್ದು ಮೆಚ್ಚುಗೆಗೆ ಪಾತ್ರವಾಯಿತು.

Leave a Comment