ಪ್ರಿಯತಮೆ ಮನೆ ಮುಂದೆ ನೇಣು ಹಾಕಿಕೊಂಡ

ಬಳ್ಳಾರಿ, ಜ.7: ಇಲ್ಲಿನ ಅನಂತಪುರ ರಸ್ತೆಯ ಜನತಾ ಕಾಲೋನಿಯ ಪ್ರಿಯತಮೆ ಮನೆ ಮುಂದೆ ಕಾರು ಚಾಲನೆ ಹೇಳಿ ಕೊಡುತ್ತಿದ್ದ ವ್ಯಕ್ತಿ ನೇಣುಹಾಕಿಕೊಂಡು ಸಾವನ್ನಪ್ಪಿರುವ ಘಟನೆ ನಿನ್ನೆ ನಡೆದಿದೆ.

ಬಸವೇಶ್ವರ ನಗರದ ಮಹಮ್ಮದ್ (25) ಸಾವನ್ನಪ್ಪಿರುವ ವ್ಯಕ್ತಿ. ಈ ಬಗ್ಗೆ ಗ್ರಾಮೀಣ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಲಭ್ಯ ಮಾಹಿತಿ ಪ್ರಕಾರ ವಿವಾಹವಾಗಿ ಎರಡು ಮಕ್ಕಳನ್ನು ಹೊಂದಿದ್ದ ಈತ ಮದುವೆ ಮುನ್ನ ತಾನು ಪ್ರೀತಿಸುತ್ತಿದ್ದ ಬೇರೆ ಜಾತಿಯ ಯುವತಿಯನ್ನು ಈಗ ವಿವಾಹ ಆಗುವಂತೆ ಒತ್ತಾಯಿಸುತ್ತಿದ್ದನಂತೆ. ಇದಕ್ಕೆ ಬೇಸರಗೊಂಡ ಯುವತಿ ಮಹಿಳಾ ಠಾಣೆಗೆ ಮಾಹಿತಿ ನೀಡಿದ್ದಾಳಂತೆ. ಅಲ್ಲಿ ಕರೆದು ಬುದ್ಧಿವಾದ ಹೇಳಿ ಕಳುಹಿಸಿತ್ತು. ಆದರೂ ಆತ ತನ್ನ ಹಠ ಬಿಡದಿದ್ದಾಗ ಯುವತಿ ದೂರು ನೀಡುವುದಾಗಿ ಹೇಳಿದ್ದರಿಂದ ಆಕೆಯ ಮನೆ ಮುಂದೆಯೇ ಮೊನ್ನೆ ರಾತ್ರಿ ತೆರಳಿ ನೇಣು ಹಾಕಿಕೊಂಡಿದ್ದಾನೆ.

Leave a Comment