ಪ್ರಾಮಾಣಿಕ ಸೇವೆ ನಿವೃತ್ತಿ ಜೀವನಕ್ಕೆ ಆತ್ಮಸ್ಥೈರ್ಯ

ರಾಯಚೂರು.ಮೇ.31- ಡಯಟ್ ಪ್ರಾಚಾರ್ಯ ಹೆಚ್‌.ಎಮ್. ಮಲ್ಲಿಕಾರ್ಜುನ ಸ್ವಾಮಿ ರಾಯಚೂರು ಇವರ ವಯೋನಿವೃತ್ತಿ ಕಾರ್ಯಕ್ರಮವನ್ನು ಯರಮರಸ್ ಡಯಟ್‌ನಲ್ಲಿ ಮೇ.30 ರಂದು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ನಗರಸಭೆ ಸದಸ್ಯ ಜಯಣ್ಣ ಅವರು ಮಾತನಾಡುತ್ತಾ, ವೃತ್ತಿಯಲ್ಲಿ ನಿವೃತ್ತಿ ಸಹಜ. ವೃತ್ತಿಯಲ್ಲಿ ಇರುವಾಗ ಮಾಡಿದಂತಹ ಕೆಲಸಗಳು ಪ್ರಾಮಾಣಿಕತೆ ಶ್ರದ್ಧೆ ಹಾಗೂ ಜನರಿಗೆ ಪೂರಕವಾದ ನಿರ್ಧಾರಗಳು ಸಮನ್ವಯ. ಇವುಗಳು ನಿವೃತ್ತಿಯ ನಂತರ ದಿನಗಳಲ್ಲಿ ನಮಗೆ ಆತ್ಮಸ್ಥೈರ್ಯ ತುಂಬುತ್ತದೆ. ನಮಗೆ ತೃಪ್ತಿಯನ್ನು ತಂದುಕೊಡುತ್ತದೆ.
ವೃತ್ತಿಯಲ್ಲಿ ಇರುವಾಗ ಜನಪರ ಕೆಲಸಗಳನ್ನು ಹಾಗೂ ಜನರ ಸೇವಕರಾಗಿ ಕೆಲಸ ಮಾಡುವುದು ಬಹಳ ಅವಶ್ಯಕತೆ ಎಂದು ತಿಳಿಸಿದರು. ಮಲ್ಲಿಕಾರ್ಜುನ ಸ್ವಾಮಿಯವರು ಶಿಕ್ಷಣದಲ್ಲಿ ಪರಿಣಿತರು ಮುಂದಿನ ದಿನಗಳಲ್ಲಿ ತಮ್ಮ ಅನುಭವವನ್ನು ಇತರೆ ಸಂಸ್ಥೆಗಳಿಗೆ ಹಂಚಿಕೊಳ್ಳುವ ಜೊತೆಯಲ್ಲಿ ಗುಣಮಟ್ಟದ ಶಿಕ್ಷಣ, ಸರ್ಕಾರಿ ಶಾಲೆ ಬಲವರ್ಧನೆಗೆ ಕೆಲಸ ನಿರ್ವಹಿಸಲಿ ಎಂದು ಆಶಿಸಿದರು. ವೇದಿಕೆಯ ಮೇಲೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಬಿ.ಹೆಚ್ ಗೋನಾಳ ಹಾಗೂ ಉಪನ್ಯಾಸಕರಾದ ಪ್ರಾಣೇಶ್, ರಾಮಚಂದ್ರಪ್ಪ, ಶಿವಂಗಿ ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ಡಯಟ್ ಉಪನ್ಯಾಸಕರಾದ ಮಲ್ಲಿಕಾರ್ಜುನ, ಚಂದ್ರಶೇಖರ ಭಂಡಾರಿ, ಜೀವನಸಾಬ್, ಡಾ.ಈರಣ್ಣ ಕೊಸಗಿ, ಡಾ.ಹತ್ತಿ, ಆರೀಫಾ, ಹಾಗೂ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಆರ್.ಇಂದಿರಾ, ವೆಂಕಟೇಶ ಗುಡಿಹಾಳ, ಅಮರಪ್ಪ, ಚಂದ್ರಶೇಖರ ದೊಡ್ಡಮನಿ.ಚಂದ್ರಶೇಖರ ಹಾಗೂ ಶಿಕ್ಷಣ ಕಿರಣ ಸಂಸ್ಥೆಯ ಅಧ್ಯಕ್ಷರಾದ ಹನುಮಂತಪ್ಪ ಗವಾಯಿ, ಸೈಯದ್ ಹಫೀಜುಲ್ಲಾ, ಮತ್ತು ಜಿಲ್ಲಾ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಸಿರಾಜ್, ತಾಲೂಕ್ ಪ್ರೌಢಶಾಲಾ ಶಿಕ್ಷಕರ ಸಂಘದ ಸಂಘದ ಅಧ್ಯಕ್ಷರಾದ ಮೈನುಲ್ ಹಕ್, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ವೀರಭದ್ರಪ್ಪ, ಹಾಗೂ ಪ್ರೌಢ ಮತ್ತು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

Share

Leave a Comment