ಪ್ರಾಮಾಣಿಕತೆ ಮೆರೆದ ಪೊಲೀಸ್ ಸಿಬ್ಬಂದಿ

ಬಂಟ್ವಾಳ, ಆ.೨೯- ಬಿಸಿರೋಡಿನ ಹೃದಯ ಭಾಗದಲ್ಲಿ ಬಿದ್ದು ಸಿಕ್ಕಿದ ಸಾವಿರಾರು ರೂ ಹಣವನ್ನು ವಾರಸುದಾರರಿಗೆ ಮರಳಿ ಕೈ ಸೇರಿದ ಘಟನೆ ಬಂಟ್ವಾಳ ನಗರ ಠಾಣೆಯಲ್ಲಿ ನಡೆಯಿತು.
ನಿನ್ನೆ ಬೆಳಿಗ್ಗೆ ಸುಮಾರು ೧೦.೩೦ರ ಸಮಯ ಬಿಸಿರೋಡು ರಕ್ತೇಶ್ವರಿ ದೇವಿ ದೇವಸ್ಥಾನ ದ ಮುಂಭಾಗದಲ್ಲಿ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಸಿಬ್ಬಂದಿ ಕುಮಾರ್ ಅಂಗಡಿ ಹಾಗೂ ವೃತ್ತ ನಿರೀಕ್ಷಕರ ಕಚೇರಿಯ ಸಿಬ್ಬಂದಿ ಶ್ರೀಧರ್ ಅವರು ನಡೆದುಕೊಂಡು ಹೋಗುತ್ತಿದ್ದ ವೇಳೆ ಬಿದ್ದಿದ್ದ ೧೧,೦೦೦ ಸಾವಿರ ಹಣವನ್ನು ನಗರ ಠಾಣೆಗೆ ಹಸ್ತಾಂತರ ಮಾಡಿದ್ದರು.
ಅ ಬಳಿಕ ಈ ವಿಷಯವನ್ನು ಮಾಧ್ಯಮಗಳ ಮೂಲಕ ತಿಳಿಸುವ ಕೆಲಸ ಮಾಡಲಾಗಿತ್ತು. ಮಾಧ್ಯಮ ವರದಿಯನ್ನು ಗಮನಿಸಿ ಹಣ ಕಳೆದುಕೊಂಡ ಬಂಟ್ವಾಳ ತಾಲೂಕಿನ ನೆತ್ತರಕೆರೆ ನಿವಾಸಿ ರವಿ ಅವರು ಠಾಣೆಗೆ ಅಗಮಸಿ ಹಣವನ್ನು ಕಳೆದುಕೊಂಡ ಬಗ್ಗೆ ವಿವರವಾಗಿ ತಿಳಿಸಿ ಹಣವನ್ನು ಪಡೆದುಕೊಂಡರು.ಜನಾರ್ದನ ಮಡಿವಾಳ ಅವರು ಜಾಗದ ಸರ್ವೆ ಮಾಡಿಸಲು ಹನ್ನೊಂದು ಸಾವಿರ ಹಣವನ್ನು ರವಿ ಅವರಿಗೆ ನೀಡಿದ್ದರು.
ರವಿ ಅವರು ಯಾವುದೋ ಕೆಲಸಕ್ಕಾಗಿ ಕಿಸೆಯಿಂದ ಹಣ ತೆಗೆದಾಗ ಈ ಹಣ ಬಿದ್ದಿದೆ ಎಂದು ಅವರು ತಿಳಿಸಿದ್ದಾರೆ.
ನಗರ ಠಾಣಾ ಎಸ್ ಐ. ಚಂದ್ರಶೇಖರ್ ಅವರ ಸಮಕ್ಷಮ ಹಣವನ್ನು ವಾರಸುದಾರ ರಿಗೆ ನೀಡಲಾಯಿತು.

Leave a Comment