ಪ್ರಾಣಿಗಳ ಅವಶೇಷಗಳಿದ್ದ ವಾಹನಕ್ಕೆ ಬೆಂಕಿ

ಮೊರಾದಾಬಾದ್(ಉ.ಪ್ರ),ಆ೨೮- ಈದ್ ಅಲ್-ಅದಾ (ಬಕ್ರೀದ್) ನಿಮಿತ್ತ ಕೊಲ್ಲಲಾದ ಪ್ರಾಣಿಗಳ ಅವಶೇಷಗಳಿದ್ದ ವಾಹನವನ್ನು ಅಪರಿಚಿತರ ಗುಂಪು ಬೆಂಕಿ ಹಾಕಿ ಭಸ್ಮಮಾಡಿದ ಘಟನೆ ಕಟ್‌ಘರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ವಾಹನದಲ್ಲಿದ್ದ ಚಾಲಕ ಹಾಗೂ ಮತ್ತೊಬ್ಬನನ್ನು ಹಿಡಿದು ಥಳಿಸಿದ ಗುಂಪು ವಾಹನಕ್ಕೆ ಬೆಂಕಿ ಹಚ್ಚಿದ್ದಾರೆ. ಕಿಡಿಗೇಡಿಗಳಿಂದ ತಪ್ಪಿಸಿಕೊಂಡು ಸ್ಥಳದಿಂದ ಓಡಿದ ಇಬ್ಬರೂ ಸ್ಥಳೀಯ ಕಟ್‌ಘರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
“ಪ್ರಾಣಿಗಳ ಅವಶೇಷಗಳನ್ನು ಹೊತ್ತು ಸಾಗುತ್ತಿದ್ದ ಕಾರಿಗೆ ಅಪರಿಚಿತರು ಬೆಂಕಿ ಹಚ್ಚಿ ಭಸ್ಮ ಮಾಡಿದ್ದಾರೆ ಎಂಬ ದೂರನ್ನು ಸ್ವೀಕರಿಸಿದ್ದೇವೆ. ಘಟನೆ ಸಂಬಂಧ ಎಫ್‌ಐಆರ್ ದಾಖಲಿಸಿದ್ದು, ಕಿಡಿಗೇಡಿಗಳನ್ನು ಪತ್ತೆಮಾಡಲು ಕಾರ್ಯಾಚರಣೆ ನಡೆಸುತ್ತಿದ್ದೇವೆ,” ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Leave a Comment