ಪ್ರಾಚ್ಯವಸ್ತು ಇಲಾಖೆ ನಿರ್ಲಕ್ಷ್ಯ

ರಾಯಚೂರು.ಅ.16- ಜಿಲ್ಲೆಯ ಐತಿಹಾಸಿಕ ಹಿನ್ನೆಲೆಗಳಿಗೆ ಪುರಾವೆಗಳಂತಿರುವ ಶಿಲಾ ಮೂರ್ತಿಗಳ ಸಂರಕ್ಷಣೆಯಲ್ಲಿ ಪುರಾತತ್ವ ಇಲಾಖೆಯ ನಿರ್ಲಕ್ಷ್ಯೆ ಮಸ್ಕಿಯಲ್ಲಿ ಎಲ್ಲೆಂದರಲ್ಲಿ ಬಿದ್ದಿರುವ ಶಿಲೆಗಳಿಗೆ ಸಾಕ್ಷಿಯಾಗಿವೆ.
ಲಿಂಗಸೂಗೂರು ತಾಲೂಕಿನ ಕರಗಲ್‌ನಲ್ಲಿರುವ ಐತಿಹಾಸಿಕ ವಿಗ್ರಹಗಳಿಗೆ ಸಂರಕ್ಷಣೆಯಿಲ್ಲದಂತಾಗಿದೆ. ಪ್ರಾಚೀನ ಕಾಲದ ಗತ ವೈಭವ ಸಾರುವ ಈ ಮೂರ್ತಿಗಳು ಈಗ ಕಸದ ತೊಟ್ಟಿಯಲ್ಲಿ ಬಿದ್ದು, ಹಾಳಾಗುತ್ತಿದೆ. ಐತಿಹಾಸಿಕ ಸ್ಮಾರಕ ರಕ್ಷಣೆಗೆ ಸರ್ಕಾರ ಕೋಟ್ಯಾಂತರ ರೂ. ಖರ್ಚು ವೆಚ್ಚ ಮಾಡುತ್ತಿದ್ದರೂ, ಜಿಲ್ಲೆಯಲ್ಲಿ ಮಾತ್ರ ಐತಿಹಾಸಿಕ ಶಿಲೆಗಳಿಗೆ ರಕ್ಷಣೆ ಇಲ್ಲದಂತಾಗಿದೆ. ಲಿಂಗಸೂಗೂರು ತಾಲೂಕು ಅತ್ಯಂತ ಐತಿಹಾಸಿಕ ಕೇಂದ್ರವಾಗಿದೆ. ಅಶೋಕನ ಕಾಲದ ಶಿಲಾ ಶಾಸನವೂ ಮಸ್ಕಿಯಲ್ಲಿವೆ.
ಅತ್ಯಾಧಿಕ ಸಂಖ್ಯೆಯಲ್ಲಿ ಐತಿಹಾಸಿಕ ಪುರಾವೆಗಳು ದೊರೆಯುವ ಲಿಂಗಸೂಗೂರು ತಾಲೂಕಿನಲ್ಲಿರುವ ಐತಿಹಾಸಿಕ ವೀರಗಲ್ಲು ಸೇರಿದಂತೆ ಇನ್ನಿತರ ಶಾಸನಗಳ ಸಂರಕ್ಷಣೆ ಕೈಗೊಳ್ಳಬೇಕೆಂದು ಸ್ಥಳೀಯರ ಆಗ್ರಹವಾಗಿದೆ.

Leave a Comment