ಪ್ರಸೂತಿ ಸಂಬಂಧಿತ ಕ್ಯಾನ್ಸರ್‌ಗಳ ಅಪಾಯದಿಂದ ಪಾರಾಗುವುದು ಹೇಗೆ

ಒರ್ವ ಮಹಿಳೆಯಾಗಿ ನಾನು ಪ್ರಸೂತಿ ಸಂಬಂಧಿತ ಕ್ಯಾನ್ಸರ್‌ಗಳ ಅಪಾಯದಿಂದ ಹೇಗೆ ಪಾರಾಗಬಹುದು? ನರಗಳ ಸುತ್ತ ನಿಯಂತ್ರಣವಿಲ್ಲದೆ ವ್ಯಾಪಿಸುವ ಕೋಶಗಳ ಖಾಯಿಲೆಗೆ ಕ್ಯಾನ್ಸರ್ ಎಂಬ ಪದ ಬಳಸುತ್ತಾರೆ.ಇದು ಹೊಸ ಖಾಯಿಲೆಯಲ್ಲ. ೩೦೦೦ ವರ್ಷಗಳ ಹಿಂದೆಈಜಿಪ್ಟ್‌ನಲ್ಲಿ ಈ ಖಾಯಿಲೆ ಕುರಿತು ಉಲ್ಲೇಖವಾಗಿತ್ತು.ಕ್ಯಾನ್ಸರ್‌ನಲ್ಲಿ ಹಲವು ವಿಧಗಳಿವೆ. ಪ್ರಸ್ತೂತಿ ತಜ್ಞರಾದನನಗೆ ಪದೇ ಪದೇ ಕೇಳುವ ಕೆಲವುಪ್ರಶ್ನೆಗಳೆಂದರೆ, ವೈದ್ಯರೇ ಮಹಿಳೆಯರಿಗೆ ಬರುವಸಾಮಾನ್ಯ ಕ್ಯಾನ್ಸರ್‌ಗಳು ಯಾವುವು? ನನ್ನ ಈ ಸ್ಥಿತಿಕ್ಯಾನ್ಸರ್ ಆಗಿ ಪರಿವರ್ತನೆಗೊಳ್ಳುತ್ತದೆಯಾ? ನಾನು ಹೇಗೆ ಕ್ಯಾನ್ಸರ್ ಅಪಾಯವನ್ನು ತಗ್ಗಿಸಬಹುದು? ನನಗೆ ಕ್ಯಾನ್ಸರ್‌ಇದ್ದರೆ ಮಗಳಿಗೂ ಬರುತ್ತದೆಯಾ?

ಸ್ತನ, ಗರ್ಭಕೋಶ, ಕರುಳು, ಅಂಡಾಶಯ, ತುಟಿಮತ್ತು ಬಾಯಿ ಕ್ಯಾನ್ಸರ್. ಕೆಲ ವರ್ಷಗಳವರೆಗೂಗರ್ಭಕೋಶದ ಕ್ಯಾನ್ಸರ್ ಭಾರತೀಯ ಮಹಿಳೆಯರಲ್ಲಿ
ಸಾಮಾನ್ಯವಾಗಿತ್ತು. ಮುಂಜಾಗರೂಕತೆಯಿಲ್ಲದೆ ಈಗ ವಿಶೇಷವಾಗಿ ಮೆಟ್ರೊಗಳಲ್ಲಿ ಸ್ತನ ಕ್ತಾನ್ಸರ್ ಈ ಜಾಗವನ್ನು ಆವರಿಸಿದೆ.
ಸ್ತನ ಕ್ಯಾನ್ಸರ್‌ಭಾರತದ ಶೇ.೨೭ರಷ್ಟು ಮಹಿಳೆಯರಲ್ಲಿಕಾಣಿಸಿಕೊಂಡಿರುವ ಕ್ಯಾನ್ಸರ್ ಇದು. ೨೮ರಲ್ಲಿ ಓರ್ವ ಮಹಿಳೆಯಲ್ಲಿ ಜೀವನದಲ್ಲೊಮ್ಮೆ ಈ ಕ್ಯಾನ್ಸರ್‌ಗೆ ತುತ್ತಾಗುತ್ತಾಳೆ. ನಗರ ಪ್ರದೇಶದಲ್ಲಿ ೨೨ರಲ್ಲಿ ಒಬ್ಬರು ಗ್ರಾಮೀಣದಲ್ಲಿ ೬೦ರಲ್ಲಿ ಒಬ್ಬರಿಗೆ ಈ ಕ್ಯಾನ್ಸರ್ ಸಾಮಾನ್ಯ. ೩೦ಕ್ಕೂ ಮೊದಲು ಅಥವಾ ೫೦-೬೪ ವರ್ಷದ ಅವಧಿಯಲ್ಲಿ ಈ ಕ್ಯಾನ್ಸರ್ ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ. ನಾನು ಹೇಗೆ ಈ ಅಪಾಯದಿಂದ ಪಾರಾಗಬಹುದು? ಸ್ತನ ಕ್ಯಾನ್ಸರ್ ಗುಣಪಡಿಸಬಹುದಾ?
ಸ್ತನ ಕ್ಯಾನ್ಸರ್‌ಗೆ ಕಾರಣ ತಿಳಿದಿಲ್ಲ. ಆದರೆ ಇದನ್ನು ಪೂರ್ತಿಯಾಗಿ ಗುಣಪಡಿಸಬಹುದು. ಅಧ್ಯಯನಗಳ ಪ್ರಕಾರ ಸ್ತನ ಕ್ಯಾನ್ಸರ್ ಮತ್ತು ಪಥ್ಯ ಹಾಗೂ ವ್ಯಾಯಾಮಕ್ಕೆ ಸಂಬಂಧವಿದೆ. ನಿತ್ಯ ವ್ಯಾಯಾಮ ಮಾಡಿ
ದೇಹದ ತೂಕ ನಿಯಂತ್ರಿಸಿಕೊಳ್ಳುವ, ಧೂಮಪಾನ ಮಾಡದ, ಮದ್ಯಪಾನ ಮಾಡದ ಮಹಿಳೆಯರಲ್ಲಿ ಈ ಕ್ಯಾನ್ಸರ್‌ನ ಪ್ರಮಾಣ ಕಡಿಮೆ. ಸರಿಯಾಗಿ ಸ್ತನ್ಯಪಾನ ಮಾಡಿಸಿದ ಮಹಿಳೆಯರಲ್ಲೂ ಈ ಕ್ಯಾನ್ಸರ್‌ನ ಪ್ರಮಾಣ ವಿರಳ. ಸ್ತನ ಕ್ಯಾನ್ಸರ್ ತಡೆಯಲು ಸಾಧ್ಯವಿಲ್ಲ. ಆದರೆ ಮುಂಚಿತವಾಗಿ ಗೊತ್ತಾದರೆ ಚಿಕಿತ್ಸೆ ಸುಲಭ. ಹಿಂದೆ,ಕ್ಯಾನ್ಸರ್‌ನ ಪೂರ್ವ ಪತ್ತೆಗಾಗಿ ಸ್ವಯಂ ಸ್ತನ ಪರೀಕ್ಷೆಗೆಸೂಚಿಸುತ್ತಿದ್ದರು. ಆದಾಗ್ಯೂ ಸಂಶೋಧನೆಗಳಪ್ರಕಾರ ಇದರಿಂದ ಸಹಾಯವಾಗಿಲ್ಲ.
ಗರ್ಭಕೋಶದ ಕ್ಯಾನ್ಸರ್
ಭಾರತದಲ್ಲಿ ಗರ್ಭಕೋಶದ ಕ್ಯಾನ್ಸರ್ ಪ್ರಮಾಣ ಶೇ.೨೨.೮೬ರಷ್ಟಿದ್ದು ಭಾರತದಲ್ಲಿ ಮಹಿಳೆಯರಲ್ಲಿ ಕಂಡುಬರರುವ ೨ನೇ ಅತೀ ಸಾಮಾನ್ಯ ಕ್ಯಾನ್ಸರ್ ಇದು.
ಸರಾಸರಿ ೩೮ ವರ್ಷವಾಗಿದ್ದು ೨೧-೬೭ ವರ್ಷದ ಅವಧಿಯಲ್ಲಿ ಈ ಕ್ಯಾನ್ಸರ್ ಕಾಣಿಸಿಕೊಳ್ಳುತ್ತದೆ. ಹ್ಯುಮನ್ ಪ್ಯಾಪಿಲೋಮ ವೈರಸ್(ಎಚ್‌ಪಿವಿ)ನಿಂದ ಲೈಂಗಿಕ ಸಂಪರ್ಕದ ಮೂಲಕ ಈ ಕ್ಯಾನ್ಸರ್ ಕಾಣಿಸಿಕೊಳ್ಳುತ್ತದೆ. ಲೈಂಗಿಕವಾಗಿ ಸಕ್ರಿಯವಾಗಿಲ್ಲದ ಮಹಿಳೆಯರಲ್ಲಿ ಇದು ಸಾಮಾನ್ಯ. ಗ್ರಾಮೀಣ ಪ್ರದೇಶದ ಮಹಿಳೆಯರಲ್ಲಿ ಸಾಮಾನ್ಯವಾಗಿದ್ದು ಮುಸ್ಲೀಂ ಮಹಿಳೆಯರಲ್ಲಿ ಕಡಿಮೆ.ಹೇಗೆ ನಾನು ನನ್ನ ರಿಸ್ಕ್ ಕಡಿಮೆ ಮಾಡಿಕೊಳ್ಳಬಹುದು?
ಗರ್ಭಕೋಶದ ಕ್ಯಾನ್ಸರ್ ತಡೆಗಟ್ಟಬಹುದಾ? ಕಾಂಡೋಮ್ ಬಳಕೆ, ಧೂಮಪಾನ ಮಾಡದಿರುವುದು, ನಿರಂತರ ತಪಾಸಣೆ, ಎಚ್‌ಪಿವಿ ನಿರೋಧಕ ಲಸಿಕೆ ಸೇವನೆ ಹಾಗೂ ಬಹುಜನರೊಂದಿಗೆ ಲೈಂಗಿಕ ಸಂಪರ್ಕ ಹೊಂದದಿರುವುದರಿಂದ ಈ ಕ್ಯಾನ್ಸರ್ ತಡೆಗಟ್ಟಬಹುದು. ಗರ್ಭಕೋಶದ ಕ್ಯಾನ್ಸರ್‌ಗೆ ಪೂರ್ವ ಹಂತದಲ್ಲೇ ಚಿಕಿತ್ಸೆ ಬೇಕು. ಪ್ಯಾಪ್ ಸೀಮಿಯರ್ ಮತ್ತು ಎಚ್‌ಪಿವಿ ತಪಾಸಣೆಯೊಂದಿಗೆ ಈ ಹಂತವನ್ನು ಗುರುತಿಸಬಹುದು. ಮೊದಲೇ ಈ ಕ್ಯಾನ್ಸರ್ ಪತ್ತೆಯಾದರೆ ಚಿಕಿತ್ಸೆ ನೀಡಬಹುದು.
ಪ್ರಸೂತಿ ತಜ್ಞರನ್ನು ಸಂಪರ್ಕಿಸಿ. ಕೊನೆಯದಾಗಿ: ಜೀವನಶೈಲಿ ಅಂಶಗಳಾದ ಸಿಗರೇಟು ಸೇವನೆ, ಆಹಾರ ಸೇವನೆ(ಕರಿದ ಪದಾರ್ಥ, ಕೆಂಪು ಮಾಂಸ), ಮದ್ಯ, ಬಿಸಿಲು, ಪರಿಸರ ಮಾಲಿನ್ಯ, ಸೋಂಕುಗಳು, ಒತ್ತಡ, ಬೊಜ್ಜು ಮತ್ತು ದೈಹಿಕ ನಿಷ್ಕ್ರಿಯತೆ ಶೇ.೯೦-೯೫ರಷ್ಟು ಕ್ಯಾನ್ಸರ್‌ಗೆ ಕಾರಣ. ಕ್ಯಾನ್ಸರ್ ಸಂಬಂಧಿ ಸಾವುಗಳು ಶೇ.೨೫-೩೦ರಷ್ಟು ತಂಬಾಕು ಸೇವನೆಯಿಂದ ಶೇ.೩೦-೩೫ರಷ್ಟು ಆಹಾರ, ಶೇ.೧೫- ೨೦ರಷ್ಟು ಸೋಂಕು ಮತ್ತು ಉಳಿದವು ಮಿಕ್ಕ ಅಂಶಗಳಿಂದ ಬರುತ್ತದೆ. ಧೂಮಪಾನ ಬಿಡುವುದುಹಣ್ಣು-ತರಕಾರಿ ಸೇವನೆ, ವ್ಯಾಯಾಮ ಮೊದಲಾದವುಗಳಿಂದಕ್ಯಾನ್ಸರ್‌ನಿಂದ ನಮ್ಮನ್ನು ರಕ್ಷಿಸಿಕೊಳ್ಳಲು ಸಹಕಾರಿ. ಮುಂಚಿತವಾಗಿ ಕಾ ನ್ಸರ್ ಪತ್ತೆಯಿಂದ ಮಾತ್ರ ಕ್ಯಾನ್ಸರ್ ತಡೆಗಟ್ಟಬಹುದು. ಹೀಗಾಗಿ ಕ್ಯಾನ್ಸರ್ ಬರದಂತೆ ಪೂರ್ವ ಜಾಗೃತಿ ಕ್ಯಾನ್ಸರ್ ಗುಣಪಡಿಸುವುದಕ್ಕಿಂತ ಉತ್ತಮ.
ಡಾ. ಪ್ರತಿಮಾ ರೆಡ್ಡಿ

Leave a Comment