ಪ್ರಶಸ್ತಿ ಪ್ರದಾನಕ್ಕೆ ತಾರಾ ಮೆರುಗು ಪುನೀತ್, ಜಗ್ಗೇಶ್ ಸೇರಿ ಹಲವರು ಸಾಥ್

ಹಿರಿತೆರೆ ಮೀರಿಸುವ ಹಾಗೆ ಕಿರುತೆರೆಯಲ್ಲಿ ಮನರಂಜನೆಗೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ಅದಕ್ಕೆ ಪೂರಕ ಎನ್ನುವಂತೆ ಕಾರ್ಯಕ್ರಮಗಳೂ ಮೂಡಿಬರುವ ಮೂಲಕ ಜನರಿಗೆ ರಂಜನೆಯ ರಸದೌತಣ ನೀಡುತ್ತಿವೆ.
ವರ್ಷಪೂರ ವಿವಿಧ ಧಾರಾವಾಹಿಗಳು ಮತ್ತು ಶೋಗಳಲ್ಲಿ ದುಡಿದ ಮಂದಿಯಲ್ಲಿ ಸಾಧಕರನ್ನು ಗುರುತಿಸಿ ಗೌರವಿಸುವ ಮೂಲಕ ಮತ್ತಷ್ಟು ಜವದ್ಬಾಗಿ ಹೆಚ್ಚಿಸುವ ಕೆಲಸ ಇತ್ತೀಚೆಗೆ ನಿರಂತರವಾಗಿ ನಡೆಯುತ್ತಿದೆ. ದಶಕದ ಹಾದಿ ದಾಟಿ ಮುನ್ನಡೆದಿರುವ ಜೀವಾಹಿನಿ ಕುಟುಂಬ ಅವಾರ್ಡ್ಸ್ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ತಾರಾ ಮೆರಗು ಮತ್ತಷ್ಟು ಕಳೆಕಟ್ಟುವಂತೆ ಮಾಡಿದೆ.
ಪವರ್‌ಸ್ವಾರ್ ಪುನೀತ್ ರಾಜ್‌ಕುಮಾರ್, ಜಗ್ಗೇಶ್ ಮತ್ತಿತರರು ವೇದಿಕೆಯ ಮೇಲೆ ಹಾಡು ಕುಣಿದು ರಸದೌತಣ ನೀಡಿದ್ದಾರೆ. ಅಷ್ಟೇ ಅಲ್ಲ, ಯುವನಟಿ ಸಂಯುಕ್ತ ಹೆಗಡೆ ಹಾಗೂ ವಾಹಿನಿಯ ಸ ರಿಗಮಪ ಲಿಟ್ಲ್ ಚಾಂಪ್ಸ್, ಡ್ರಾಮಾ ಜೂನಿಯರ್‍ಸ್‌ನ ಪುಟಾಣಿಗಳ ಪ್ರತಿಭಾ ಪ್ರದರ್ಶನ ಅನಾವರಣ, ಜೊತೆಗೆ ನಾಗಿಣಿ, ಬ್ರಹ್ಮಗಂಟು, ಜೋಡಿಹಕ್ಕಿ, ಹಾಗೂ ಯಾರೇ ನೀ ಮೋಹಿನಿಯ ಕಲಾವಿದರು ವೀಕ್ಷಕರನ್ನು ವಿಶೇಷ ಪ್ರದರ್ಶನದ ಮೂಲಕ ರಂಜಿಸಲಿದ್ದಾರೆ. ಇವರೊಂದಿಗೆ ಹಿರಿಯ ನಟಿ ಜೂಲಿ ಲಕ್ಷ್ಮಿ, ನಟ ವಿಜಯ್ ರಾಘವೇಂದ್ರ, ಮತ್ತು ನಿರೂಪಕರಾದ ಅನುಶ್ರೀ ಮತ್ತು ಮಾಸ್ಟರ್ ಆನಂದ್ ಕಾರ್ಯಕ್ರಮಕ್ಕೆ ಮೆರಗು ನೀಡಿದ್ದಾರೆ.
ಕನ್ನಡಿಗ ಕುಟುಂಬಗಳನ್ನು ಮನದಲ್ಲಿಟ್ಟುಕೊಂಡು ವೈವಿಧ್ಯಮಯ ಅಲೋಚನೆಗಳ ಕಾರ್ಯಕ್ರಮಗಳಿಗೆ ವೀಕ್ಷಕರಿಂದ ಅಪಾರ ಮನ್ನಣೆ ಸಿಕ್ಕಿದೆ. ಈ ಯಶಸ್ಸಿಗೆ ಶ್ರಮಿಸಿದ ಜೀ ಕುಟುಂಬದ ಎಲ್ಲಾ ಸದಸ್ಯರನ್ನು ಗುರುತಿಸಿ, ಗೌರವಿಸುವುದೇ ಪ್ರಶಸ್ತಿಯ ಉದ್ದೇಶ ಎನ್ನುವುದು ವಾಹಿನಿಯ ಬಿಸಿನೆಸ್ ಹೆಡ್ ರಾಘವೇಂದ್ರ ಹುಣಸೂರು ಅವರದು.
೩೬ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ನೀಡಿದ್ದು. ೭ ಜನಪ್ರಿಯ ವಿಭಾಗಗಳಿಗೆ ವೀಕ್ಷಕರೇ ನಿರ್ಣಾಯಕರಾಗಿದ್ದರು. ಜನಪ್ರಿಯ ಧಾರಾವಾಹಿ, ಜನಪ್ರಿಯ ಜೋಡಿ, ನಾಯಕ ನಟ, ನಟಿ, ರಿಯಾಲಿಟಿ ಶೋ ಸ್ಪರ್ಧಿಗಳು ಹಾಗೂ ನಿರೂಪಕರ ವಿಭಾಗಗಳಿಗೆ ವಾಹಿನಿಯು ವೀಕ್ಷಕರಿಂದ ನೇರವಾಗಿ ಮತಗಳನ್ನು ಪಡೆದು ವಿಜೇತರನ್ನು ಆಯ್ಕೆ ಮಾಡಿದ್ದಾರೆ. ಅಂದಹಾಗೆ ಇದೇ ಶನಿವಾರ ಮತ್ತು ಭಾನುವಾರ ರಾತ್ರಿ ೭.೩೦ಕ್ಕೆ ಕಾರ್ಯಕ್ರಮ ಮೂಡಿ ಬರಲಿದೆ.ಇತ್ತೀಚಿನ ದಿನಗಳಲ್ಲಿ ಕಿರುತೆರೆಯಲ್ಲಿ ಕ್ರಾಂತಿಯ ಜೊತೆಗೆ ಕನ್ನಡ ಕಲಾರಂಗಕ್ಕೆ ಹಲವು ಪ್ರತಿಭೆಗಳನ್ನು ಪರಿಚಯಿಸಿ ಕನ್ನಡಿಗರ ಮೆಚ್ಚುಗೆಗೆ ಕೂಡ ಪಾತ್ರವಾಗಿದೆ.
ಬಾಕ್ಸ್
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಕಿರುತೆರೆಯ ಸಾಧಕರನ್ನು ಗುರುತಿಸಿ ಗೌರವಿಸುವ ಮೂಲಕ ಅವರಲ್ಲಿ ಮತ್ತಷ್ಟು ಆತ್ಮ ವಿಶ್ವಾಶ ಹೆಚ್ಚಿಸುವ ಕೆಲಸ ನಡೆಯುತ್ತಿದೆ. ಅದಕ್ಕೆ ಪೂರಕ ಎನ್ನುವಂತೆ ಕುಟುಂಬ ಅವಾರ್ಡ್ ಪ್ರಶಸ್ತಿ ಇಂಬು ನೀಡಿದೆ.

Leave a Comment