ಪ್ರವಾಹ ಸಂತ್ರಸ್ತರಿಗೆ ನೆರವಾದ ಸುಧಾಮೂರ್ತಿಗೆ ಮೆಚ್ಚುಗೆ

ಬೆಂಗಳೂರು, ಆ ೨೩- ಎಂದೂ ಕಂಡಹರಿಯದ ರೀತಿಯಲ್ಲಿ  ಬೆಚ್ಚಿ ಬೀಳಿಸಿದ ಕೇರಳ ಹಾಗೂ ಕೊಡಗು ನೆರೆ ಪ್ರವಾಹಕ್ಕೆ ಇಡೀ ದೇಶವೇ ಮರುಗಿದೆ. ಇನ್ಫೋಸಿಸ್ ಫೌಂಡೇಷನ್ ಮೂಲಕ ಸದಾ ಸಮಾಜ ಮುಖಿ ಕಾರ್ಯಗಳಲ್ಲಿ ತೊಡಗಿರುವ ಸುಧಾ ಮೂರ್ತಿ ಅವರು ತಾವೇ ಖುದ್ದು ಸಾಮಾಗ್ರಿಗಳನ್ನು ಪ್ಯಾಕ್ ಮಾಡುವ ಮೂಲಕ ಸಂತ್ರಸ್ಥರಿಗೆ ನೆರವಾಗಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ದೇಶದೆಲ್ಲೆಡೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

ಕೊಡಗು ಹಾಗೂ ಕೇರಳ ನೆರೆ ಪ್ರವಾಹಕ್ಕೆ ಹಲವೆಡೆ ತಮ್ಮ ಕೈಲಾದಷ್ಟು ಸಹಾಯ ಮಾಡಿ, ಹೃದಯ ವೈಶಾಲ್ಯತೆ ಮೆರೆದಿದ್ದಾರೆ. ಇನ್ನೊಂದೆಡೆ ಹಲವಾರು ಸಂಘ ಸಂಸ್ಥೆಗಳು, ಶಾಲೆ-ಕಾಲೇಜು, ನಟ-ನಟಿಯರು ಸೇರಿದಂತೆ  ಅನೇಕರು ನೆರೆ ಪ್ರವಾಹಕ್ಕೆ ನೆರವಾಗಿದ್ದಾರೆ. ಆದರೆ ಸರಳ ವ್ಯಕ್ತಿತ್ವ ಸುಧಾಮೂರ್ತಿ ಅವರು ಖುದ್ದು ಅವರೇ ನಿಂತು, ಅಗತ್ಯ ವಸ್ತುಗಳ ಪ್ಯಾಕಿಂಗ್ ಕಾರ್ಯದಲ್ಲಿ ತೊಡಗಿದ್ದ ವೀಡಿಯೋ ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗಿದೆ.

ಇನ್ಫೋಸಿಸ್ ಫೌಂಡೇಷನ್ ಮೂಲಕ ಕಳುಹಿಸಬೇಕಾದ ಅಗತ್ಯ ವಸ್ತುಗಳನ್ನು ಸಿದ್ಧಪಡಿಸುತ್ತಿರುವ ಉದ್ಯೋಗಿಗಳೊಂದಿಗೆ ಸುಧಾ ಮೂರ್ತಿ ಅವರೂ ಮೇಲುಸ್ತುವಾರಿ ನೋಡಿಕೊಳ್ಳುವುದಲ್ಲದೇ, ತಾವೇ ಬಾಕ್ಸ್, ಬ್ಯಾಗ್ಗಳನ್ನು ಜೋಡಿಸುತ್ತಿದ್ದಾರೆ.  ಸದಾ ಸರಳ, ಸಜ್ಜನಿಕೆಗೆ ಹೆಸರಾದ ಸುಧಾ ಮೂರ್ತಿ ಅವರ ಈ ಕಾರ್ಯವನ್ನು ಜನರು ತುಂಬು ಮನಸ್ಸಿನಿಂದ ಶ್ಲಾಘಿಸಿದ್ದಾರೆ.

ಸುಮ್ಮನೆ  ಬೊಗಳೆ ಬಿಡುವ ಎಲ್ಲರೂ “ನಿಮ್ಮಂಥಹವರಿಂದ” ನಿಜವಾಗಿಯೂ ಕಲಿಯಬೇಕಿದೆ. ಆದರೆ ಕೋಟಿ ಕೋಟಿ ಹಣ ಇರುವವರಿಗೆಲ್ಲ ನಿಮ್ಮಂಥಹ “ಒಳ್ಳೆಯ” ಮನಸ್ಸಿರಬೇಕಲ್ಲ. ದೇಶದ ಎಲ್ಲ ಜನರ ಪರವಾಗಿ ನಿಮಗೆ “ಕೋಟಿ ಕೋಟಿ ನಮನಗಳು” ಎಂದು ನಮನ ಸಲ್ಲಿಸಿದ್ದಾರೆ.

Leave a Comment