ಪ್ರವಾಹ ಪೀಡಿತರಿಗೆ ನೆರವು

ದಾವಣಗೆರೆ, ಆ. 27- ಶ್ರೀ ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನದ ಕಮಿಟಿ ವತಿಯಿಂದ ಭಕ್ತಾದಿಗಳು ದೇವಸ್ಥಾನಕ್ಕೆ ನೀಡಿದಂತ ದವಸಧಾನ್ಯಗಳನ್ನು ಉತ್ತರ ಕರ್ನಾಟಕ ನೆರೆಹಾವಳಿಯಿಂದ ಹಾನಿಗೀಡಾದ ಪ್ರವಾಹ ಪೀಡಿತ ನೆರೆ ಸಂತ್ರಸ್ಥರಿಗೆ ಕೊಡಲು ತೀರ್ಮಾನಿಸಲಾಗಿದೆ ಎಂದು ಕಮಿಟಿಯ ಕಾರ್ಯದರ್ಶಿ ಆರ್ ವಾಸುದೇವ್ ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿಂದು ಮಾತನಾಡಿದ ಅವರು, ಆ. 23 ರಂದು ಜಾಲಿನಗರ, 2ನೇ ಮುಖ್ಯರಸ್ತೆಯಲ್ಲಿರುವ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನದ 13ನೇ ವರ್ಷದ ವಾರ್ಷಿಕೋತ್ಸವದ ಕಾರ್ಯಕ್ರಮದಲ್ಲಿ ಭಕ್ತಾದಿಗಳಿಂದ ಸಂಗ್ರಹಿಸಿದ ದವಸ ಧಾನ್ಯಗಳನ್ನು ನೆರೆ ಸಂತ್ರಸ್ಥರಿಗೆ ನೀಡಲಾಗುವುದು. 20 ಕ್ವಿಂಟಲ್ ಅಕ್ಕಿ, 1 ಕ್ವಿಂಟಲ್ ಬೇಳೆ, 1 ಕ್ವಿಂಟಲ್ ಬೆಲ್ಲ, 4 ಟಿನ್ ಎಣ್ಣೆ, ಬಟ್ಟೆಯ ಸಾಮಗ್ರಿಗಳನ್ನು ಇಂದು ಸಂಜೆ ದೇವಸ್ಥಾನದ ಕಮಿಟಿಯವರು ಉತ್ತರ ಕರ್ನಾಟಕದ ನೆರೆ ಪೀಡಿತ ಪ್ರದೇಶಗಳಿಗೆ ತೆರಳಿ ಸಂತ್ರಸ್ಥರಿಗೆ ನೀಡಲಾಗುವುದು ಎಂದು ತಿಳಿಸಿದರು. ಸುದ್ದಿಗೋಷ್ಟಿಯಲ್ಲಿ ಕಮಿಟಿಯ ಅಧ್ಯಕ್ಷ ಜಿ.ಶಿವಕುಮಾರ್, ಉಪಾಧ್ಯಕ್ಷರಾದ ಪ್ರಭು ಕುಮಾರ್ ದನ್ನೂರು, ಕರಿಬಸಪ್ಪ ಕಸವಾಳ, ಬಸವರಾಜ ಸ್ಟುಡಿಯೋ, ರಘುಬಡಗಿ, ರೇವಣಸಿದ್ದಪ್ಪ, ಆರ್.ರಾಮನಗೌಡ ಸೇರಿದಂತೆ ಮತ್ತಿತರರಿದ್ದರು.

Leave a Comment