ಪ್ರವಾಸಿ ತಾಣಗಳಲ್ಲಿ ಭದ್ರತಾ ಕ್ರಮಗಳನ್ನು ಪರಿಶೀಲಿಸಲು ಮೈಸೂರಿಗೆ ಎನ್‍ಎಸ್ ಜಿ ಆಗಮನ

ಮೈಸೂರು, ಜ 20- ಪ್ರವಾಸಿ ಕೇಂದ್ರವಾದ ಅರಮನೆ ನಗರಿಯಲ್ಲಿ ಭದ್ರತಾ ಕ್ರಮಗಳನ್ನು ಪರಿಶೀಲಿಸಲು ಹಾಗೂ ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸನ್ನದ್ಧತೆ ಬಲಪಡಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಭದ್ರತಾ ಪಡೆ(ಎನ್‍ಎಸ್ ಜಿ)ಯ 100 ಸದಸ್ಯರ ತಂಡ ಸೋಮವಾರ ನಗರಕ್ಕೆ ಆಗಮಿಸಿದೆ.

ಮೈಸೂರು ಅರಮನೆಯ ವಾರ್ಷಿಕ ನಿರ್ವಹಣೆ ಕಾರ್ಯವನ್ನು ಸೋಮವಾರ ಕೈಗೆತ್ತಿಕೊಳ್ಳಲಾಗಿದ್ದು, ಅರಮನೆಯ ಭದ್ರತೆ ಹೆಚ್ಚಿಸಲು ಎನ್‍ಎಸ್ ಜಿ ಸಲಹೆಗಳು ಮತ್ತು ಸೂಚನೆಗಳನ್ನು ನೀಡುವ ಸಾಧ್ಯತೆ ಇದೆ. ಎನ್‍ಎಸ್ ಜಿ ಕಮಾಂಡೋಗಳು ಮೈಸೂರು ವಿಮಾನ ನಿಲ್ದಾಣಕ್ಕೂ ಭೇಟಿ ನೀಡುವ ಸಾಧ್ಯತೆ ಇದೆ.

ಎರಡು ದಿನಗಳ ಹಿಂದೆ ಕಮಾಂಡೋಗಳ ತಂಡ ಮೈಸೂರು ತಲುಪಿದ್ದು ಅರಮನೆ ಮಂಡಳಿಯ ಇಂಜನಿಯರುಗಳೊಂದಿಗೆ ಸಂವಾದ ನಡೆಸಿವೆ ಎಂದು ಅರಮನೆ ಮಂಡಳಿ ಮೂಲಗಳು ತಿಳಿಸಿವೆ.

ಭಯೋತ್ಪಾದಕ ಚಟುವಟಿಕೆಗಳು ಎದುರಾದರೆ ಅವನ್ನು ತಡೆಯಲು ಕೆಲ ಪ್ರಮುಖ ಸರ್ಕಾರಿ ಇಲಾಖೆಗಳ ಅಧಿಕಾರಿಗಳು ಮತ್ತು ಸರ್ಕಾರಿ ಇಲಾಖೆಗಳು ಹಾಗೂ ಸ್ಥಳೀಯ ಆಡಳಿತಕ್ಕೆ ತರಬೇತಿ ನೀಡಲು ಎನ್‍ಎಸ್ ಜಿ ಕಮಾಂಡೊ ತಂಡ ಮೈಸೂರಿನಲ್ಲಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

 

Leave a Comment