ಪ್ರವಾದಿ ನಿಂದನೆ: ಕ್ರಮಕ್ಕೆ ಆಗ್ರಹ

ಬಂಟ್ವಾಳ, ಜ.೫- ಖಾಸಗಿ ಸುದ್ದಿ ವಾಹಿನಿಯಲ್ಲಿ ಪ್ರವಾದಿ ಮಹಮ್ಮದ್ ನೆಬಿ( ಸ.ಅ.) ರ ಬಗ್ಗೆ ನಿಂದನೆ ಮಾಡಿದ ಅಜಿತ್ ಹನುಮಕ್ಕನವರ ಮೇಲೆ ಸೂಕ್ತ ಕಾನೂನು ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ಪರಂಗಿಪೇಟೆ ಜುಮಾ ಮಸೀದಿಗಳ ಅಧ್ಯಕ್ಷರು ಹಾಗೂ ಸದಸ್ಯರುಗಳ ವತಿಯಿಂದ ಪರಂಗಿಪೇಟೆ ಯಲ್ಲಿ ಖಂಡನಾ ಸಭೆ ನಡೆಸಿ ರಾಜ್ಯ ಗ್ರಹ ಸಚಿವರಿಗೆ ಮನವಿ ಮಾಡಿದರು.
ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪರಂಗಿಪೇಟೆ ಮುಹಿಯ್ಯುದ್ದೀನ್ ಜುಮಾ ಮಸೀದಿ ಯ ಖತೀಬ್ ಅಬ್ಬಾಸ್ ದಾರಿಮಿ ಮಾತನಾಡಿ ಸುವರ್ಣ ಚಾನೆಲ್ ನ ನಿರೂಪಕ ಅಜಿತ್ ಅವರ ಪ್ರೋ.ಭಗವಾನ್ ಬರೆದ ಪುಸ್ತಕ ದ ಬಗ್ಗೆ ನಡೆಸಿದ ಬಹಿರಂಗ ಟಿ.ವಿ.ಚರ್ಚೆಯಲ್ಲಿ ಅನಗತ್ಯವಾಗಿ ವಿಶ್ವ ಪ್ರವಾದಿ ಮಹಮ್ಮದ್ ಅವರ ಬಗ್ಗೆ ಅತ್ಯಂತ ನಿಂದನಾತ್ಮಕವಾಗಿ ಅವಹೇಳನ ಮಾಡಿದ್ದು ನಮ್ಮ ಧಾರ್ಮಿಕ ನಂಬಿಕೆಗೆ ಧಕ್ಕೆಯುಂಟಾಗಿದೆ.ಹಾಗಾಗಿ ಇವರ ಮೇಲೆ ಸೂಕ್ತ ಕಾನೂನುಕ್ರಮ ಕೈಗೊಳ್ಳಲು ಸಭೆಯಲ್ಲಿ ತಿಳಿಸಿದರು.
ಪ್ರಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಎಫ್ ಉಮ್ಮರ್ ಫಾರೂಕ್ ಫರಂಗಿಪೇಟೆ, ಸುವರ್ಣ ಟಿ.ವಿ.ನಿರೂಪಕ ಅವರು ಜಾತಿ ಧರ್ಮ ಗಳ ಹೆಸರಿನಲ್ಲಿ ಜನರ ನ್ನು ವಿಭಜಿಸಿ ಪರಸ್ಪರ ಕಚ್ಚಾಡಿಸಿ ದೇಶದಲ್ಲಿ ಶಾಂತಿ ಹರಡುವುದಕ್ಕಾಗಿ ಉದ್ದೇಶ ಪೂರ್ವಕವಾಗಿ ಪ್ರವಾದಿ ನಿಂದನೆ ಮಾಡಿರುತ್ತಾರೆ ಎಂದು ಆರೋಪ ವ್ಯಕ್ತಪಡಿಸಿದರು.
ಬದ್ರಿಯಾ ಜುಮಾ ಮಸೀದಿ ಅಮೆಮಾರ್ ಖತೀಬ್ ಅಬುಸಾಲಿಹ್ ದಾರಿಮಿ ಮಾತನಾಡಿ ಪ್ರವಾದಿ ನಿಂದನೆ ಮಾಡಿದ ನಿರೂಪಕ ಹಾಗೂ ಅವಕಾಶ ನೀಡಿದ ಚಾನೆಲ್ ನ ವ್ಯವಸ್ಥಾಪಕ ಮೇಲೆ ಕೇಸು ದಾಖಲಿಸಿ ಸೂಕ್ತವಾದ ಕಾನೂನು ಕ್ರಮ ಕೈಗೊಳ್ಳಲು ಪ್ರತಿಭಟನೆಯ ಲ್ಲಿ ವಿನಂತಿ ಸಿದರು.
ಅರಫಾ ಜುಮಾ ಮಸ್ಜಿದ್ ಕುಂಪನಮಜಲು ಖತೀಬ್ ಅಬ್ದುಲ್ ನಾಸೀರ್ ದಾರಿಮಿ ಪ್ರತಿಭಟನೆಯ ಲ್ಲಿ ಭಾಗವಹಿಸಿ ಮಾತನಾಡಿದರು.
ಮುಹಿಯ್ಯುದ್ದೀನ್ ಜುಮಾ ಮಸೀದಿ ಫರಂಗಿಪೇಟೆ ಇದರ ಅಧ್ಯಕ್ಷ ಎಫ್ ಮಹಮ್ಮದ್ ಬಾವ, ಅರಫಾ ಜುಮಾ ಮಸ್ಜಿದ್ ಮಾಜಿ ಅಧ್ಯಕ್ಷ ಹಾಗೂ ತಾಲ್ಲೂಕು ಪಂಚಾಯತ್ ಮಾಜಿ ಸದಸ್ಯ ಅಸೀಫ್ ಇಕ್ಬಾಲ್ ದರ್ಬಾರ್, ಅಲಂಕಾರ್ ಯೂಸುಫ್, ಮಾಜೀದ್ ಫರಂಗಿಪೇಟೆ, ಪುದು ಗ್ರಾಮ ಪಂಚಾಯತ್ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ, ಮಾಜಿ ಉಪಾಧ್ಯಕ್ಷ ಹಾಶೀರ್ ಪೇರಿಮಾರ್, ಮುಸ್ತಫಾ ಮೇಲ್ಮನೆ, ಗ್ರಾ.ಪಂ ಸದಸ್ಯ ಮಹಮ್ಮದ್ ಮೋನು, ಇಕ್ಬಾಲ್ ಸುಜೀರ್, ಝಾಹೀರ್ ಕುಂಪನಮಜಲು, ರಿಯಾಝ್ ಕುಂಪನಮಜಲು, ಬುಖಾರಿ ಕುಂಪನಮಜಲು, ರಪೀಕ್ ಪೇರಿಮಾರ್, ಪೈರೋಜ್ ಫರಂಗಿಪೇಟೆ, ಸಲಾಂ ಮಲ್ಲಿ ಉಪಸ್ಥಿತರಿದ್ದರು

Leave a Comment