ಪ್ರಯೋಗಾತ್ಮಕ ಸಿ-೩

ಕನ್ನಡದಲ್ಲಿ ಇತ್ತೀಚಿನ ದಿನಗಳಲ್ಲಿ ಹೊಸ ಹೊಸ ಪ್ರಯೋಗಗಳಾಗುತ್ತಿವೆ. ಅದರ ಸಾಲಿಗೆ ಮತ್ತೊಂದು ಸೇರ್ಪಡೆ ’ಸಿ೩” ಏನಿದು ಎನ್ನುವ ಕುತೂಹಲ ಸಹಜ. ಒಂದೇ ಪಾತ್ರ, ಒಂದೇ ಕಟ್ಟಡ,ಒಂದೇ ಹಾಡು ಹೀಗೆ ಹಲವು ಪ್ರಯೋಗಗಳಿರುವ ಚಿತ್ರ ಇದು. ಹೀಗಾಗಿ ಒಂದಷ್ಟು ಕುತೂಹಲವನ್ನು ಬಗಲಲ್ಲಿಟ್ಟುಕೊಂಡು ತೆರೆಗೆ ಬರಲು ಸಜ್ಜಾಗಿದೆ.

ಕೃಷ್ಣಕುಮಾರ್ ಬಿ.ಹೊಂಗನೂರು ಚೊಚ್ಚಲ ಬಾರಿಗೆ ನಿರ್ದೇಶನ ಮಾಡಿರುವ ಚಿತ್ರಕ್ಕೆ ಬಿ.ಎಂ ಚೇತನ್ ಬಂಡವಾಳ ಹಾಕಿದ್ದಾರೆ. ಕಿರುತೆರೆಯ ಕಲಾವಿದ ವಿಜಯ್ ಕುಮಾರ್ ನಾಯಕನಾಗಿ ಬಡ್ತಿ ಪಡೆದಿದ್ದು ಐಶ್ವರ್ಯ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

ಚಿತ್ರ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಕಳೆದವಾರ ಚಿತ್ರದ ಸಿಡಿ ಬಿಡುಗಡೆ ಮತ್ತು ಮಾಹಿತಿ ನೀಡಲು ಮಾಧ್ಯಮದ ಮುಂದೆ ತಂಡ ಹಾಜರಾಗಿತ್ತು. ಈ ವೇಳೆ ಮಾತಿಗಿಳಿದ ನಿರ್ದೇಶಕ ಕೃಷ್ಣ, ಭಯ ಮತ್ತು ಧೈರ್ಯ ಬಂದಾಗ ಹೇಗೆಲ್ಲಾ ಮನುಷ್ಯ ವರ್ತಿಸುತ್ತಾನೆ ಎನ್ನುವ ಸುತ್ತಾ ಚಿತ್ರೀಕರಣ ಮಾಡಲಾಗಿದೆ.

ಹೊಸಬರಾಗಿದ್ದರಿಂದ ನಮಗೆ ಯಾರೂ ಬೆಂಬಲ ನೀಡದ ಹಿನ್ನೆಲೆಯಲ್ಲಿ ನಮ್ಮ ಇತಿ ಮಿತಿಯಲ್ಲಿ ಚಿತ್ರ ಮಾಡಿದ್ದೇವೆ. ಚೇತನ್ ನಮಗೆ ಸಹಕಾರಿಯಾದರು. ಒಂದೇ ಕಟ್ಟಡದಲ್ಲಿ ನಡೆಯುವ ಕಥೆ. ಸಿ೩ ಎಂದರೆ ಸಿಸಿಟಿವಿ ಎಂದರ್ಥ. ಒಂದೇ ಪಾತ್ರ. ಈ ನಡುವೆ ನಾಯಕಿ ಬರುತ್ತಾಳೆ. ಆಕೆ ಹೇಗೆ ಬಂದವು ಎನ್ನುವುದು ಚಿತ್ರದ ಕುತೂಹಲ ಎಂದು ಹೇಳಿಕೊಂಡರು ನಿರ್ದೇಶಕರು.

ನಟ ವಿಜಯ್ ಕುಮಾರ್, ಚಿತ್ರದಲ್ಲಿ ಸಣ್ಣ ಪಾತ್ರಕ್ಕಾಗಿ ಸ್ನೇಹಿತರೂ ಆಗಿರುವ ನಿರ್ದೇಶಕ ಕೃಷ್ಣ ಅವರೊಂದಿಗೆ ನಿರ್ಮಾಪಕರ ಹುಡುಕಾಟ ಆರಂಭಿಸಿದೆವು. ಯಾರೂ ಕೂಡ ನಮ್ಮ ಕಥೆಯನ್ನು ಒಪ್ಪಿಕೊಳ್ಳಲಿಲ್ಲ. ಜೊತೆಗೆ ಪಾತ್ರಕ್ಕೆ ಮಾಡಿದ ನಾಯಕ ಸಿಗದಿದ್ದಾಗ ನೀನೇ ನಾಯಕ ಎಂದರು. ಆಗ ನನಗೆ ಅಶ್ಚರ್ಯವಾಯಿತು. ನನ್ನ ಬಳಿ ನಿಭಾಯಿಸಲು ಆಗುತ್ತದೆಯೇ ಎನ್ನುವ ಪ್ರಶ್ನೆ ಮೂಡಿತು. ಆಗ ನಿರ್ದೇಶಕರು ಮತ್ತು ನಿರ್ಮಾಪಕರು ಧೈರ್ಯ ತುಂಬಿ ಮಾಡಿಸಿದ್ದಾರೆ.  ಚಿತ್ರ ಚೆನ್ನಾಗಿ ಮೂಡಿ ಬಂದಿದೆ ಎಲ್ಲರ ಸಹಕಾರ ಬೆಂಬಲಬೇಕು. ೨೯ ರಾತ್ರಿ ಚಿತ್ರೀಕರಣ ಮಾಡಲಾಗಿದೆ. ಬೆಳಗಿನ ವೇಳೆ ಧಾರಾವಾಹಿ, ರಾತ್ರಿಯ ವೇಳೆ ಸಿನಿಮಾ ಚಿತ್ರೀಕರಣ ಮಾಡಿದ್ದೆ ಎಂದು ಹೇಳಿಕೊಂಡರು. ನಾಯಕಿ ಐಶ್ವರ್ಯ, ಒಳ್ಳೆಯ ಪಾತ್ರ ಸಿಕ್ಕಿದೆ.

ಚಿತ್ರದಲ್ಲಿ  ಎರಡೇ  ಪಾತ್ರವಾದರೂ  ಮಹತ್ವವಿದೆ. ಚಿತ್ರ ಎಲ್ಲರಿಗೂ ಇಷ್ಟವಾಗಲಿದೆ  ಎಂದರು.  ಹಾಡು  ಬರೆದಿರುವ  ನಾಗೇಂದ್ರ ಪ್ರಸಾದ್ ಹುಡುಗರ ತುಡಿತ ನೋಡಿ ನಾನು ಜೊತೆಯಗಿದ್ದೇನೆ.ಅಲ್ಲದೆ ಒಂದೇ ಹಾಡಿಗೆ ಧ್ವನಿ ಸುರುಳಿ ಹೊರತರಲಾಗಿದೆ. ಒಳ್ಳೆಯದಾಗಲಿ ಎಂದು ಶುಭ ಹಾರೈಸಿದರು. ನಿರ್ದೇಶಕ ಅಸ್ಕರ್ ಕೃಷ್ಣ ಟ್ರೈಲರ್ ಬಿಡುಗಡೆ  ಮಾಡಿದ ಆಸ್ಕರ್ ಕೃಷ್ಣ  ತಂಡಕ್ಕೆ  ಒಳ್ಳೆಯದಾಗಲಿ ಎಂದು ಹರಸಿ ಹಾರೈಸಿದರು.  ಆದಿಲ್ ಸದಾಫ್ ಚಿತ್ರಕ್ಕೆ ಸಂಗೀತ  ನೀಡಿದ್ದು, ಒಂದು ಹಾಡು ಮಾಡುವುದು ಸವಾಲಾಗಿತ್ತು.ಎಲ್ಲರಿಗೂ ಇಷ್ಟವಾಗಲಿದೆ ಎಂದು ಹೇಳಿಕೊಂಡರು. ಆರ್.ಗಿರಿ ಛಾಯಾಗ್ರಾಹಣ ಚಿತ್ರಕ್ಕಿದೆ. ಚಿತ್ರದಲ್ಲಿ ವಸಂತ್, ನಂಜಪ್ಪ, ಕಾರ್ತಿಕೇಶ್ವರ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Leave a Comment