ಪ್ರಯೋಗಶೀಲತೆಯ ಸ್ಪರ್ಶ ಬೇಕಿದೆ

ಹರಪನಹಳ್ಳಿ.ಮಾ.13- ಆಚಾರವಂತರೂ ಬಸವಣ್ಣನವರ ಪ್ರಯೋಗಶೀಲತೆಯನ್ನು ಅಜ್ಞಾನದಿಂದ ಮೂಲೆಗುಂಪು ಮಾಡಿದರು. ಪ್ರಜ್ಞಾವಂತರೆಸಿನಿಕೊಂಡವರು ಕೂಡ ಪ್ರಯೋಗಶೀಲತೆಯ ಸ್ಪರ್ಶ ಮಾಡುತ್ತಿಲ್ಲ. ಪುಸ್ತಕ, ಬರೆಯುತ್ತಾರೆ ಆದರೆ ಪ್ರಯೋಗಶೀಲತೆ ಮರೆಯುತ್ತಿದ್ದಾರೆ ಎಂದು ಚಿತ್ರದುರ್ಗ ಮುರುಘಾ ಮಠದ ಪೀಠಾಧ್ಯಕ್ಷ ಡಾ.ಶಿವಮೂರ್ತಿ ಮುರುಘಾ ಶರಣರು ತಿಳಿಸಿದರು. ಪಟ್ಟಣದ ಪೃಥ್ವಿ ರಂಗ ಶಾಲೆಯಲ್ಲಿ ಶರಣರ ಚಾವಡಿ ಉದ್ಘಾಟನಾ ಸಮಾರಂಭದ ಸಾನಿಧ್ಯವಹಿಸಿ ಮಾತನಾಡಿದ ಅವರು, ಕೆಲವೊಂದು ದೇವಸ್ಥಾನಗಳಲ್ಲಿ ಮನುಷ್ಯರನ್ನು ಅರೆಬೆತ್ತಲೆಗೊಳಿಸುವ ಮೂಲಕ ಅಸ್ಪøಶ್ಯತೆ ಕಾಣಬಹುದಾಗಿದೆ. ಗರ್ಭಗುಡಿ ಸಂಸ್ಕøತಿ ಇದೆಯೋ ಅಲ್ಲಿ ಮಡಿವಂತಿಕೆ ಜೀವಂತಿಕೆಯಾಗಿರುತ್ತದೆ. ಆಚಾರ ಎಂದಕ್ಷಣವೇ ಅಲ್ಲಿ ಮಡಿವಂತಕೆ ಇರುತ್ತದೆ. ಮಡಿವಂತಿಕೆಯಲ್ಲಿ ಯಾವುದನ್ನು ಆಚರಿಸಬೇಕು, ಬೇಡ ಎನುವ ವಿವೇಚನೆಯೂ ಕೂಡ ಇರುವುದಿಲ್ಲ ಎಂದರು. ಆಚಾರ ಲಿಂಗದಲ್ಲಿ ಆರ್ಚನೆ, ಆರಾಧನೆ, ಅನುಸಂಧಾನ ಅಡಕವಾಗಿರುತ್ತದೆ. ಮಡಿವಂತಿಕೆ ಹೊರತುಪಡಿಸಿ ಬಸವವಾದಿ ಶರಣರು ಸೈದ್ದಾಂತಿಕವಾಗಿರುವ ಕ್ರಮವನ್ನು ಅನುಷ್ಠಾನಗೊಳಿಸಿದರು. ಸೈದ್ದಾಂತಿಕ ತಾತ್ವತಿಕ ಅನುಷ್ಠಾನವನ್ನು ಬಿಟ್ಟು ಆಚರಣೆಯುಕ್ತವಾದ ಅನುಷ್ಠಾನವನ್ನು ಕೆಲವೊಂದು ಮಠಾಧೀಶರು ಪ್ರಾರಂಭಿಸಿದರು ಎಂದು ತಿಳಿಸಿದರು. ಕಾರ್ಯಕ್ರಮ ಉದ್ಘಾಟಿಸಿದ ನವದೆಹಲಿ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಕಲಾ ಮತ್ತು ಸೌಂದರ್ಯಶಾಸ್ತ್ರ ಮುಖ್ಯಸ್ಥ ಡಾ.ಎಚ್.ಎಸ್.ಶಿವಪ್ರಕಾಶ್ ಮಾತನಾಡಿ, ಜಗತ್ತಿನಲ್ಲಿ ದೊಡ್ಡ ಕೆಲಸಗಳು ಸಣ್ಣದಾಗಿ ಶುರುವಾಗುತ್ತವೆ. ಶರಣರ ಚಾವಡಿಯೂ ಕೂಡ ದೊಡ್ಡ ಮಟ್ಟದಲ್ಲಿ ಚಿಂತನೆ, ತತ್ವಗಳನ್ನು ಮುಟ್ಟಿಸುವಲ್ಲಿ ಮುಂದಿನ ದಿನಗಳಲ್ಲಿ ಪ್ರಮುಖ ಪಾತ್ರವಹಿಸಲಿದೆ ಎಂದು ಹೇಳಿದರು. ದಾವಣಗೆರೆ ವಿರಕ್ತಮಠ ಪ್ರಭುದೇವ ಸ್ವಾಮೀಜಿ ಮಾತನಾಡಿ, 12ನೇ ಶತಮಾನದಂತೆ ಅಧುನಿಕ ಯುಗದಲ್ಲಿಯೂ ಹಿಂದುಳಿದ ಸಮುದಾಯಗಳಿಗೆ ಗುರುಗಳನ್ನು ನೀಡುವ ಮೂಲಕ ಹಿಂದುಳಿದ ಸಮಾಜಗಳಿಗೆ ಗುರು ಮತ್ತು ಗುರಿಯನ್ನು ಮುರುಘಾ ಶರಣರು ತೋರಿದ್ದಾರೆ ಎಂದರು.
ಕೆಪಿಸಿಸಿ ಸದಸ್ಯ ಕೋಡಿಹಳ್ಳಿ ಭೀಮಪ್ಪ ಮಾತನಾಡಿ, ಬಸವಾದಿ ಶರಣರ ಸಮಾನತೆ ಕನಸು ಸಕಾರಗೊಳಿಸುವ ಉದ್ದೇಶದಿಂದ ಶರಣರ ಚಾವಡಿ ಆರಂಭಗೊಂಡಿದೆ. ಪ್ರಜಾಪ್ರಭುತ್ವದ ವ್ಯವಸ್ಥೆ ಪರಿಕಲ್ಪನೆ ಕೊಟ್ಟವರು ಬಸವಣ್ಣ. ಹಾಗಾಗಿ ಎಲ್ಲಾ ರಾಜಕಾರಣಿಗಳಿಗೆ ಮಾದರಿಯಾಗಬೇಕಿದೆ ಎಂದು ಹೇಳಿದರು.
ಮಲ್ಲೂರಹಟ್ಟಿ ತಿಪ್ಪೇರುದ್ರ ಮಠದ ತಿಪ್ಪೇರುದ್ರ ಸ್ವಾಮೀಜಿ, ಹಿರಿಯ ಪತ್ರಕರ್ತ ಗುಡಿಹಳ್ಳಿ ನಾಗರಾಜ್, ರಂಗಕರ್ಮಿ ಬಿ.ಪರುಶುರಾಮ ಮಾತನಾಡಿದರು. ವೀರಶೈವ ಮಹಾಸಭಾದ ಅಧ್ಯಕ್ಷ ಎಂ.ರಾಜಶೇಖರ್, ಸಹಕಾರಿ ಬ್ಯಾಂಕ್ ರಾಜ್ಯ ನಿರ್ದೇಶಕ ಜಿ.ನಂಜನಗೌಡ, ಮುಖಂಡರಾದ ವೈ.ದೇವೇಂದ್ರಪ್ಪ, ರಂಗಕರ್ಮಿ ಪೂಜಾರ ಚಂದ್ರಪ್ಪ, ಯರಬಳ್ಳಿ ಉಮಾಪತಿ, ಪುಣಬಗಟ್ಟಿ ನಿಂಗಪ್ಪ, ಅಲ್ಮರಸೀಕೆರೆ ರಾಜಪ್ಪ, ಈಶ್ವರನಾಯ್ಕ ಮತ್ತಿತರರು ಉಪಸ್ಥಿತರಿದ್ದರು.

Leave a Comment