ಪ್ರಭಾವಿಗಳಿಂದ ವೃದ್ಧೆಯೋರ್ವರ ಜಾಗ ಅತಿಕ್ರಮಣ : ಕೋರ್ಟ್ ಆದೇಶಕ್ಕೂ ಕ್ಯಾರೇ ಎನ್ನುತ್ತಿಲ್ಲ ವೃದ್ಧೆ ಅಳಲು

ಮೈಸೂರು,ಜ.11:- ವೃದ್ಧೆಯೋರ್ವರ ಜಾಗವನ್ನು ಅತಿಕ್ರಮಿಸಿ ಪ್ರಭಾವಿಗಳು ಮನೆ ನಿರ್ಮಾಣ ಮಾಡಿದ ಘಟನೆ ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆಯಲ್ಲಿ ನಡೆದಿದ್ದು, ಮನೆ ತೆರವಿಗೆ ಕೋರ್ಟ್ ಆದೇಶ ನೀಡಿದರೂ ಕ್ಯಾರೇ ಎನ್ನುತ್ತಿಲ್ಲವಂತೆ.
ಎಚ್.ಡಿ.ಕೋಟೆಯ ಸರ್ವೇ ನಂಬರ್ 37ರ ಯರಹಳ್ಳಿಯಲ್ಲಿ 1.22ಎಕರೆಯಲ್ಲಿ ನಾಗಮ್ಮ ಎಂಬವರ ಜಾಗದಲ್ಲಿ ಅಕ್ರಮವಾಗಿ 8 ಮನೆಗಳನ್ನು ಪ್ರಭಾವಿಗಳು ನಿರ್ಮಿಸಿದ್ದು, ಈ ಕುರಿತು ನಾಗಮ್ಮ ಅವರು ಕೇಳಿದಕ್ಕೆ ಅವರನ್ನೇ ಹೊಡೆದು ರಿಂಗ್‌ ರೋಡ್‌ನಲ್ಲಿ ಹಾಕಿದ್ದರಂತೆ. ಸ್ಥಳೀಯ ಹೋರಾಟಗಾರರು ವೃದ್ಧೆಯ ರಕ್ಷಣೆಗೆ ನಿಂತಿದ್ದಾರೆ. ಅಕ್ರಮ ಮನೆ ತೆರವಿಗೆ ಕೋರ್ಟ್ ಆದೇಶ ಕೊಟ್ಟರು ಅವರು ಮಾತ್ರ ಡೋಂಟ್ ಕೇರ್ ಎನ್ನುತ್ತಿದ್ದಾರಂತೆ.
ಗ್ರಾಮ ಪಂಚಾಯತ್ ವತಿಯಿಂದ ನೀಡಲಾದ ಸಾಲು ಸಾಲು ನೋಟಿಸ್‌ಗೂ ಭಯ ಇಲ್ಲ. ಅಕ್ರಮ ಅಂತ ಗೊತ್ತಿದ್ದರೂ ಮತ್ತೇ ಹೊಸ ಮನೆಗಳನ್ನು ನಿರ್ಮಿಸುತ್ತಿದ್ದಾರೆ. ಅಕ್ರಮದಲ್ಲಿ ಸ್ಥಳೀಯ ಅಧಿಕಾರಿಗಳು ಶಾಮೀಲಾಗಿದ್ದಾರೆಂಬ ಆರೋಪ ಕೇಳಿ ಬಂದಿದೆ. ಅಕ್ರಮದ ಬಗ್ಗೆ ಗೊತ್ತಿದ್ದರೂ ನಿಷ್ಠಾವಂತ ಅಧಿಕಾರಿಗಳು ಸುಮ್ಮನಿದ್ದಾರೆ. ಮೈಸೂರಿನಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಮಾತಿಗೂ ಬೆಲೆ ಇಲ್ಲದಂತಾಗಿದೆ. ಅಕ್ರಮದ ಬಗ್ಗೆ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗಳ ಮುಖ್ಯ ಕಾರ್ಯದರ್ಶಿಗಳು ಪತ್ರ ಬರೆದಿದ್ದು, ಅವರ ಮಾತಿಗೂ ಪ್ರಭಾವಿಗಳು ಜಗ್ಗುತ್ತಿಲ್ಲ ಎನ್ನಲಾಗಿದೆ. ಎಚ್.ಡಿ.ಕೋಟೆಯಲ್ಲಿ ಭಾರೀ ಅಕ್ರಮ ನಡೆಯುತ್ತಿದ್ದು, ಅಕ್ರಮದ ಜಾಡು ಸಿಕ್ಕಿದ್ದೇ ತಡ ಕಡತಗಳು ಪುರಸಭೆಗೆ ಶಿಫ್ಟ್ ಆಗಿವೆ. ಗ್ರಾ.ಪಂಚಾಯತ್ ನಿಂದ ಪುರಸಭೆಯ ಮುಖ್ಯಾಧಿಕಾರಿಗಳಿಗೆ ಫೈಲ್ ಬಂದಿದೆ. ಸರ್ವೇ ನಂಬರ್ 37 ಪುರಸಭೆಗೆ ಬರುವ ಹಿನ್ನಲೆಯಲ್ಲಿ ಪುರಸಭೆಯ ಮುಖ್ಯಾಧಿಕಾರಿ ವಿಜಯ್ ಕುಮಾರ್ ಅವರ ಬಳಿ ಫೈಲ್ ರವಾನೆಯಾಗಿದೆ ಎನ್ನಲಾಗಿದೆ.

Leave a Comment