ಪ್ರಧಮ ಬಾರಿಗೆ ಮತದಾನ ಮಾಡಿದವರಿಗೆ ಶೇ 50 ರಷ್ಟು ರಿಯಾಯಿತಿ

ಮೈಸೂರು. ಏ. 15. ಈ ತಿಂಗಳ 18 ರಂದು ನೆಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಪ್ರಧಮ ಬಾರಿಗೆ ಮತದಾನ ಮಾಡಿದವರಿಗೆ ಮೈಸೂರಿನಲ್ಲಿರುವ ಹೋಟೆಲ್‍ಗಳಲ್ಲಿ ತಿಂಡಿಗಳು. ಹಾಗೂ ಉಟೋಪಚಾರದ ದರದಲ್ಲಿ ಶೇ 50 ರಷ್ಟು ರಿಯಾಯಿತಿ ನೀಡಲಾಗುವುದೆಂದು ಮೈಸೂರು ಜಿಲ್ಲಾ ಹೋಟೆಲ್ ಮಾಲೀಕರ ಸಂಘ, ಹೋಟೆಲ್ ಮಾಲೀಕರ ಸಂಘದ ಧರ್ಮದತ್ತಿ (ರಿ), ಇವುಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಯಲ್ಲಿ ಮೈಸೂರು ಜಿಲ್ಲಾ ಹೋಟೆಲ್ ಮಾಲೀಕರ ಸಂಘ ಅಧ್ಯಕ್ಷ ಸಿ. ನಾರಾಯಣಗೌಡ ತಿಳಿಸಿದರು.
ಅವರು ಇಂದು ಬೆಳಿಗ್ಗೆ ಮಾತನಾಡಿ ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಕಡ್ಡಾಯವಾಗಿ ಮತದಾನ ಮಾಡುವಂತೆ ಯುವಕ-ಯುವತಿಯರಿಗೆ ಅರಿವು ಮೂಡಿಸುವ ಸಲುವಾಗಿ ಹೋಟೆಲ್ ಮಾಲೀಕರ ಸಂಘದ ವತಿಯಿಂದ ವಿವಿಧ ರೀತಿಯ ರಿಯಾಯಿತಿ ನೀಡಲಾಗಿದೆ ಇದೇ ಪ್ರಥಮ ಬಾರಿಗೆ ಮತದಾನದಲ್ಲಿ ಪಾಲ್ಗೊಂಡ ಯುವಕ-ಯುವತಿಯರು ಮತದಾನದ ಗುರುತನ್ನು ತೋರಿಸಿ, 18 ವರ್ಷ ತುಂಬಿರುವ ಬಗ್ಗೆ ವಯಿಸ್ಸಿನ ಧೃಢೀಕರಣ ಪತ್ರದ ಜೆರಾಕ್ಸ್ ಪ್ರತಿಯನ್ನು ಹೋಟೆಲ್‍ಗಳಿಗೆ ಸಲ್ಲಿಸಿ ಈ ಮೇಲಿನ ರಿಯಾಯಿತಿ ಪಡೆಯ ಬಹುದಾಗಿದೆ ಎಂದರು
ಇದೇ ರೀತಿ 60 ವರ್ಷಕ್ಕೆ ಮೇಲ್ಪಟ್ಟ ಹಿರಿಯ ನಾಗರೀರ ದಂಪತಿಗಳಿಗೆ ಚುನಾವಣಾ ದಿನಾಂಕದಂದು (ಏಪ್ರಿಲ್ 18) ಒಂದು ದಿನ ನಗರದ ಕೆಲವು ವಸತಿ ಗೃಹಗಳಲ್ಲಿ ಶೇ 50 ರಷ್ಟು ರಿಯಾಯಿತಿ ನೀಡಲಾಗುವುದು
ಹೊರಗಿನ ಪ್ರವಾಸಿಗರಿಗೆ ವಸತಿಗೃಹಗಳನ್ನು ನೀಡುವ ಸಂಧರ್ಭದಲ್ಲಿ ವಸತಿ ಗೃಹಗಳ ಸ್ವಾಗತಕಾರರು ಮತದಾನ ಮಾಡಿರುವ ಬಗ್ಗೆ ಖಚಿತ ಪಡಿಸಿಕೊಂಡ ನಂತರವೇ ವಸತಿ ಗೃಹಗಳನ್ನು ನೀಡುವಂತೆ ವಸತಿಗೃಹಗಳ ಮಾಲೀಕರಿಗೆ ಸಂಘದಿಂದ ನಿರ್ದೇಶನ ನೀಡಲಾಗಿದೆ ಎಂದು ಹೇಳಿದರು.
ಹೋಟೆಲ್‍ಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರಿಗೆ ಅತಿ ಹೆಚ್ಚು ಮತದಾನ ಮಾಡಿಸಿದ 3 ಹೋಟೆಲ್ ಗಳಿಗೆ ಈ ತಿಂಗಳ 30 ರಂದು ಸನ್ಮಾನಿಸಲಾಗುವುದೆಂದು ನಾರಾಯಣಗೌಡ ತಿಳಿಸಿದರು.
ಈ ಗಾಗಲೇ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಭಿತ್ತಿಪತ್ರ, ಪೋಸ್ಟರ್ ಗಳನ್ನು ಎಲ್ಲಾ ಹೋಟೆಲ್ ಮಾಲೀಕರುಗಳಿಗೆ ಈಗಾಗಲೇ ವಿತರಿಸಲಾಗಿದೆ. ಹಾಗೂ ಮತದಾನದ ದಿನ (ಏ.18) ನೌಕರರಿಗೆ ಮತದಾನ ಮಾಡಲು ಅನುವು ಮಾಡಿಕೊಡಲಾಗಿದೆ ಎಂದು ಹೇಳಿದ ನಾರಾಯಣಗೌಡ ಕೆಲವು ಹೋಟೆಲ್‍ಗಳಲ್ಲಿ ಎಲ್ಲಾ ಸಾಮಾನ್ಯ ಗ್ರಾಹಕರಿಗೂ ಶೇ 20ರಿಂದ 30ರಷ್ಟು ವಿನಾಯಿತಿ ದರದಲ್ಲಿ ರಿಯಾಯಿತಿ ನೀಡಲಾಗುವುದೆಂದರು .
ಇದೇ ಸಂಧರ್ಭದಲ್ಲಿ ಅವರು ಹೋಟೆಲ್ ಮಾಲೀಕರ ಸಂಘ ಹಾಗೂ ಹೋಟೆಲ್ ಮಾಲೀಕರ ಸಂಘದ ಧರ್ಮದತ್ತಿ ಇವುಗಳ ಸಂಬಂಧಿಸಿದಂತೆ ಅರಿವು ಮೂಡಿಸುವ ಭಿತ್ತಿಪತ್ರಗಳನ್ನು ಬಿಡುಗಡೆ ಮಾಡಿದರು.
ಸುದ್ಧಿ ಗೋಷ್ಠಿಯಲ್ಲಿ ಹೋಟೆಲ್ ಮಾಲೀಕರ ಸಂಘದ ಉಪಾಧ್ಯಕ್ಷ ಗೋಪಾಲಕೃಷ್ಟ, ಹೋಟೆಲ್ ಮಾಲೀಕರ ಸಂಘದ ಧರ್ಮದತ್ತಿಯ ಗೌರವ ಕಾರ್ಯದರ್ಶಿ ಸುಬ್ರಮಣ್ಯ ಆರ್. ತಂತ್ರಿ ಹಾಗೂ ಇನ್ನಿತರರು ಉಪಸಿದರಿದರು.

Leave a Comment