ಪ್ರಥಮ ಟೆಸ್ಟ್‌ ಪಂದ್ಯದಲ್ಲಿ ವಿಶಿಷ್ಠ ದಾಖಲೆ ಬರೆದ ರಾಸ್‌ ಟೇಲರ್‌

ವೆಲ್ಲಿಂಗ್ಟನ್‌, ಫೆ 21 -ನ್ಯೂಜಿಲೆಂಡ್ ತಂಡದ ಅನುಭವಿ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ರಾಸ್‌ ಟೇಲರ್‌ ಇಲ್ಲಿನ ಬೇಸಿನ ರಿವರ್‌ ಕ್ರೀಡಾಂಗಣದಲ್ಲಿ ಇಂದಿನಿಂದ ಆರಂಭವಾದ ಭಾರತದ ವಿರುದ್ಧ ಮೊದಲನೇ ಟೆಸ್ಟ್‌ ಪಂದ್ಯದಲ್ಲಿ ವಿಶಿಷ್ಠ ದಾಖಲೆಯೊಂದನ್ನು ಮಾಡಿದ್ದಾರೆ.

ಮೊದಲನೇ ಪಂದ್ಯವಾಡುವ ಮೂಲಕ ರಾಸ್‌ ಟೇಲರ್‌, ಟೆಸ್ಟ್‌, ಏಕದಿನ ಹಾಗೂ ಟಿ20 ಕ್ರಿಕೆಟ್‌ ಎಲ್ಲ ಮೂರು ಮಾದರಿಗಳಲ್ಲಿಯೂ 100 ಅಂತಾರಾಷ್ಟ್ರೀಯ ಪಂದ್ಯಗಳಾಡಿದ ನ್ಯೂಜಿಲೆಂಡ್‌ನ ಮೊದಲ ಆಟಗಾರ ಎಂಬ ಸಾಧನೆಗೆ ಭಾಜನರಾದರು.

ಕಿವೀಸ್‌ ಪರ ಈಗಾಗಲೇ 231 ಏಕದಿನ ಪಂದ್ಯಗಳಾಡಿರುವ ಟೇಲರ್‌, ಕಳೆದ ತಿಂಗಳು ಭಾರತದ ವಿರುದ್ಧ ಐದು ಪಂದ್ಯಗಳ ಟಿ-20 ಸರಣಿಯಲ್ಲಿ ವೃತ್ತಿ ಜೀವನದ 100 ಚುಟುಕು ಪಂದ್ಯಗಳನ್ನು ಪೂರ್ಣಗೊಳಿಸಿದ್ದರು. ನ್ಯೂಜಿಲೆಂಡ್‌ ಪರ ಟೆಸ್ಟ್‌ ಹಾಗೂ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಸಾಧನೆ ಕೂಡ ಇವರ ಹೆಸರಿನಲ್ಲಿದೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ 7,174 ಮತ್ತು ಏಕದಿನ ಕ್ರಿಕೆಟ್‌ನಲ್ಲಿ 8,570 ರನ್‌ ಗಳಿಸಿದ್ದಾರೆ.
100 ಟಿ20 ಪಂದ್ಯಗಳಲ್ಲಿ 1,909 ರನ್‌ ಗಳಿಸಿರುವ ರಾಸ್‌ ಟೇಲರ್‌, ನ್ಯೂಜಿಲೆಂಡ್ ಪರ ಅತಿ ಹೆಚ್ಚು ಚುಟುಕು ಪಂದ್ಯಗಳಾಡಿದ ನಾಲ್ಕನೇ ಆಟಗಾರರಾಗಿದ್ದಾರೆ. 112 ಪಂದ್ಯಗಳಾಡಿರುವ ಡೇನಿಯಲ್‌ ವೆಟ್ಟೋರಿ ಅಗ್ರ ಸ್ಥಾನದಲ್ಲಿದ್ದರೆ, ಇನ್ನುಳಿದ ಸ್ಥಾನಗಳಲ್ಲಿ ಬ್ರೆಂಡನ್‌ ಮೆಕಲಮ್‌ (101) ಹಾಗೂ ಸ್ಟಿಫೆನ್ ಫ್ಲೇಮಿಂಗ್‌ (111) ಇದ್ದಾರೆ.

ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಭಾರತ ತಂಡ ಟೀ ವಿರಾಮದ ವೇಳೆಗೆ 55 ಓವರ್‌ಗಳಿಗೆ ಐದು ವಿಕೆಟ್‌ ನಷ್ಟಕ್ಕೆ 122 ರನ್‌ ಗಳಿಸಿದೆ. ಮಳೆ ಬಂದ ಕಾರಣ ಮೊದಲನೇ ದಿನವನ್ನು ತೀರ್ಪುಗಾರರು ಮುಗಿದರು. ಕ್ರೀಸ್‌ನಲ್ಲಿ ಅಜಿಂಕ್ಯಾ ರಹಾನೆ(38 ರನ್‌) ಹಾಗೂ ರಿಷಭ್‌ ಪಂತ್‌(10) ಇದ್ದಾರೆ.

ಸೀಮಿತ ಓವರ್‌ಗಳ ಮಾದರಿಯಲ್ಲಿ ನ್ಯೂಜಿಲೆಂಡ್‌ ಪರ ಮಿಂಚಿನ ದಾಳಿ ನಡೆಸಿ ಎಲ್ಲರ ಗಮನ ಸೆಳೆದಿದ್ದ ಕೈಲ್‌ ಜಾಮಿಸನ್‌, ಇಂದು ಚೊಚ್ಚಲ ಅಂತಾರಾಷ್ಟ್ರೀಯ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ಈ ಪಂದ್ಯದಲ್ಲಿ ಅವರು ಎಲ್ಲರ ಚಿತ್ತ ತಮ್ಮತ್ತ ಸೆಳೆದರು. ಒಟ್ಟು 14 ಓವರ್‌ ಬೌಲಿಂಗ್‌ ಮಾಡಿದ ಜಾಮಿಸನ್‌, ಎರಡು ಮೆಡಿನ್‌ ಜತೆ 38 ರನ್‌ ನೀಡಿ ಪ್ರಮುಖ ಮೂರು ವಿಕೆಟ್‌ ಕಬಳಿಸಿ ಭಾರತದ ಕುಸಿತಕ್ಕೆ ಕಾರಣರಾದರು. ಚೇತೇಶ್ವರ ಪೂಜಾರ, ವಿರಾಟ್‌ ಕೊಹ್ಲಿ ಹಾಗೂ ಹನುಮ ವಿಹಾರಿ ವಿಕೆಟ್‌ ಪಡೆದಿದ್ದು ವಿಶೇಷವಾಗಿತ್ತು.

Leave a Comment