ಪ್ರತ್ಯೇಕ ಲಿಂಗಾಯತ ಧರ್ಮ ಶಿಫಾರಸ್ಸಿಗೆ ಅಸಮಾಧಾನ; ನಾಳೆ ಪ್ರತಿಭಟನೆ

ದಾವಣಗೆರೆ.ಮಾ.13; ಪ್ರತ್ಯೇಕ ಲಿಂಗಾಯತ ಧರ್ಮದ ವರದಿಯನ್ನು ಯಾವುದೇ ಕಾರಣಕ್ಕೆ ಅಂಗೀಕಾರ ಮಾಡಿ, ಕೇಂದ್ರಕ್ಕೆ ಶಿಫಾರಸ್ಸು ಮಾಡಬಾರದು ಎಂದು ಆಗ್ರಹಿಸಿ ನಾಳೆ ಮಾ.14ರಂದು ಬೆಳಿಗ್ಗೆ 10.30ಕ್ಕೆ ನಗರದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀಕ್ಷೇತ್ರ ಆವರಗೊಳ್ಳದ ಓಂಕಾರ ಶಿವಾಚಾರ್ಯ ಸ್ವಾಮಿ, ಕಂಬಾಳಿಮಠ ಗಂಗಾಧರ ಸ್ವಾಮಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 10.30ಕ್ಕೆ ಶ್ರೀಶೈಲ ಮಠದಿಂದ ರೇಣುಕಾ ಮಂದಿರ, ಅಕ್ಕಮಹಾದೇವಿ ರಸ್ತೆ, ಕೆ.ಬಿ.ವೃತ್ತ, ಜಯದೇವ ಸರ್ಕಲ್, ಗಾಂಧಿ ಸರ್ಕಲ್ ಮಾರ್ಗವಾಗಿ ಉಪವಿಭಾಗಾಧಿಕಾರಿ ಕಚೇರಿಗೆ ತೆರಳಿ ಮನವಿ ಅರ್ಪಿಸಲಾಗುತ್ತದೆ. ಗಾಂಧಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಲಾಗುತ್ತದೆ. ವೀರಶೈವ ಲಿಂಗಾಯತ ಎರಡೂ ಒಂದೇ ಆಗಿವೆ. ಈ ಜನರನ್ನು ಒಡೆದು ಆಳುವ ನೀತಿಯನ್ನು ಸರಕಾರ ಮಾಡುತ್ತಿದೆ. ಪ್ರತ್ಯೇಕ ಧರ್ಮದಿಂದಾಗಿ ಯಾವುದೇ ಲಾಭ ಇಲ್ಲ. ರಾಜಕೀಯ ಮೇಲಾಟಕ್ಕಾಗಿ ಪ್ರತ್ಯೇಕ ಧರ್ಮದ ಮಾನ್ಯತೆಗೆ ಸರಕಾರ ಮುಂದಾಗಿದೆ ಎಂದು ಆರೋಪಿಸಿದರು.
ಪ್ರತ್ಯೇಕ ಧರ್ಮ ಮಾನ್ಯತೆಯಿಂದಾಗಿ ಕೆಲವು ಸಂಸ್ಥೆಗಳಿಗೆ ಲಾಭವಾಗಬಹುದು. ಆದರೆ ಸಾಮಾನ್ಯ ಜನರಿಗೆ ಇದರಿಂದ ಲಾಭ ಇಲ್ಲ. ಈಗಾಗಲೇ 3ಬಿ, 2ಎ ಮೀಸಲಾತಿಯೂ ಕೈ ತಪ್ಪಲಿದೆ. ಯಾವುದೇ ಚಿಂತನೆ ಇಲ್ಲದೆ ಕೆಲವರು ಪ್ರತ್ಯೇಕ ಧರ್ಮಕ್ಕಾಗಿ ಆಗ್ರಹ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಪತ್ರಿಕಾಗೋಷ್ಠಿಯಲ್ಲಿ ವೀರಶೈವ ಲಿಂಗಾಯತ ಸಮಾಜದ ಮುಖಂಡರಾದ ಬಳ್ಳಾರಿ ರೇವಣ್ಣ, ಹಾಲಸ್ವಾಮಿ, ವೀರಯ್ಯ, ಕರಿಬಸಣ್ಣ, ಬನಯ್ಯ, ಸಿದ್ದೇಶ್ ಕೋಟ್ಯಾಳ್, ಗೌಡರ ಕರಿಬಸಯ್ಯ ಬಸಾಪೂರ, ವೀರೇಶ್, ವಾಗೀಶ್, ಹರೀಶ್ ಪಾಟೀಲ್, ಚಂದ್ರಶೇಖರ್, ಆರ್.ಟಿ ಪ್ರಶಾಂತ ಸೇರಿದಂತೆ ಮತ್ತಿತರು ಪಾಲ್ಗೊಂಡಿದ್ದರು.

Leave a Comment