ಪ್ರತ್ಯೇಕ ರಾಜ್ಯಕ್ಕಾಗಿ ವಿಶೇಷ ಸಭೆ

ಬೆಂಗಳೂರು, ಸೆ. ೧- ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯಕ್ಕಾಗಿ ಹೋರಾಟ ನಡೆಸಲು ವಿವಿಧ ಸಂಘಟನೆಗಳ ಸಭೆಯನ್ನು ಇದೇ ತಿಂಗಳ 23 ರಂದು  ಬಾಗಲಕೋಟೆಯಲ್ಲಿ ಕರೆಯಲಾಗಿದೆ ಎಂದು ಉತ್ತರ ಕರ್ನಾಟಕ ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ನಾಗೇಶ್ ಗೋಲ ಶೆಟ್ಟಿ ತಿಳಿಸಿದ್ದಾರೆ.
ಬಾಗಲಕೋಟೆಯ ಚರಂತಿ ಮಠದ ಸಭಾ ಭವನದಲ್ಲಿ ಅಂದು ಬೆಳಿಗ್ಗೆ 11ಕ್ಕೆ ನಡೆಯಲಿರುವ ಸಭೆಯಲ್ಲಿ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕಾಗಿ ಹೋರಾಟ ನಡೆಸುತ್ತಿರುವ ಹಲವು ಸಂಘಟನೆಗಳ ಮುಖಂಡರುಗಳು ಪಾಲ್ಗೊಳ್ಳಲಿದ್ದಾರೆ ಎಂದು ಅವರು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.
ಕರ್ನಾಟಕ ಏಕೀಕರಣವಾಗಿ 63 ವರ್ಷಗಳು ಕಳೆದರೂ ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕಗಳ ನಡುವಿನ ಪ್ರಾದೇಶಿಕ ಅಸಮತೋಲನ ನಿವಾರಣೆ ಆಗಿಲ್ಲ.
ಉತ್ತರ ಕರ್ನಾಟಕದ ಸಹನೆ, ಮೀತಿ ಮೀರಿದೆ, ಸರ್ಕಾರದಿಂದ ಉತ್ತರ ಕನ್ನಡಕ್ಕೆ ಅನ್ಯಾಯವಾಗಿದೆ. ನಮಗೆ ಅಖಂಡತೆಯಲ್ಲಿ ಅಭಿವೃದ್ಧಿ ಯಾಗುತ್ತೇವೆ ಎಂಬ ಭರವಸೆ ಇಲ್ಲ ಎಂದರು.
ಉತ್ತರ ಕರ್ನಾಟಕದ ಹಿಂದುಳಿದಿರುವ 13 ಜಿಲ್ಲೆಗಳ ಅಭಿವೃದ್ಧಿ ಸಾಧ್ಯವಾಗಿಲ್ಲ. ಹೀಗಾಗಿ ಬಾಗಲಕೋಟೆಯಲ್ಲಿ ಸಭೆ ಕರೆದಿದ್ದು, ಸಭೆಯಲ್ಲಿ ನಾಡಿನ ಪ್ರಮುಖ ಮಠಾಧೀಶರು, ಪ್ರಮುಖ ಸಂಘಟನೆಗಳ ಪದಾಧಿಕಾರಿಗಳು, ಭಾಗವಹಿಸಿ ಪ್ರತ್ಯೇಕ ರಾಜ್ಯ ರಚನೆಗಾಗಿ ಮುಂದಿನ ಹೋರಾಟದ ರೂಪು ರೇಷೆ ಸಿದ್ದಪಡಿಸಲಿದ್ದಾರೆ.
ಎಂದರು.
ಪ್ರತ್ಯೇಕ ರಾಜ್ಯಕ್ಕಾಗಿ ಕೋಟಿ ಜನರಿಂದ ಸಹಿ ಅಭಿಪ್ರಾಯ ಸಂಗ್ರಹಿಸುವ ಅಭಿಯಾನ 2 ವರ್ಷಗಳಿಂದ ಪ್ರಾರಂಭವಾಗಿದೆ. ಇದೂವರೆಗೆ 66 ಲಕ್ಷ ಸಹಿ ಸಂಗ್ರಹಿಸಿದ್ದು, 90 ರಷ್ಟು ಜನರು ಪ್ರತ್ಯೇಕತೆಯ ಪರವಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದರು.
ಸುದ್ದಿ ಗೋಷ್ಠಿಯಲ್ಲಿ ಪಾಲಾಕ್ಷ ಬಾಣದ, ಅಮೃತೇಶ್ ಎನ್.ಪಿ, ರವಿ ಪಡಸಲಗಿ, ದೀಪಕ್ ಬೆಟ್ಟಗೇರಿ, ಉಪಸ್ಥಿತರಿದ್ದರು.

Leave a Comment