ಪ್ರತ್ಯೇಕ ನಿಗಮ ಸ್ಥಾಪನೆಗೆ ಒತ್ತಾಯಿಸಿ-ಸವಿತ ಸಮಾಜ ಪ್ರತಿಭಟನೆ

ಹೊಸಪೇಟೆ.ಡಿ.5 ಸವಿತಾ ಸಮಾಜಕ್ಕೆ ಪ್ರತ್ಯೇಕ ಅಭಿವೃದ್ಧಿ ನಿಗಮ ಮಂಡಳಿ ಸ್ಥಾಪನೆ, ಜಾತಿ ನಿಂದನೆ ಕಾನೂನು ಜಾರಿ ಹಾಗೂ ಸವಿತ ಸಮಾಜವನ್ನು ಎಸ್.ಟಿ.ಪಂಗಡಕ್ಕೆ ಸೇರಿಸುವಂತೆ ಒತ್ತಾಯಿಸಿ, ಸ್ಥಳೀಯ ರೋಟರಿ ವೃತ್ತದಲ್ಲಿಂದು ಸವಿತಾ ಸಮಾಜದ ಬಂಧುಗಳು ಬೃಹತ್ ಪ್ರತಿಭಟನೆ ನಡೆಸಿದರು.

ಹೊಸಪೇಟೆ ತಾಲೂಕು ಸವಿತಾ ಸಮಾಜದ ವತಿಯಿಂದ ಸ್ಥಳೀಯ ರಾಣಿಪೇಟೆಯಿಂದ ಮೆರವಣಿಗೆ ಮೂಲಕ ತೆರಳಿದ ಸವಿತಾ ಸಮಾಜದ ಬಂಧುಗಳು, ಪ್ರಮುಖ ರಸ್ತೆಗಳ ಮೂಲಕ ರೋಟರಿ ವೃತ್ತಕ್ಕೆ ತೆರಳಿ ರೋಟರಿ ವೃತ್ತದಲ್ಲಿ ಮಾನವ ಸರಪಳಿ ರಚಿಸುವ ಮೂಲಕ ಬೃಹತ್ ಪ್ರತಿಭಟನೆ ನಡೆಸಿದರು.

ಸವಿತಾ ಸಮಾಜದ ಅಭಿವೃದ್ಧಿ ದೃಷ್ಟಿಯಿಂದ ಸವಿತಾ ಸಮಾಜಕ್ಕೆ ಪ್ರತ್ಯೇಕ ಅಭಿವೃದ್ಧಿ ನಿಗಮ ಮಂಡಳಿ ಸ್ಥಾಪಿಸಬೇಕು. ಸವಿತಾ ಸಮಾಜವನ್ನು ಪರಿಶಿಷ್ಟ ಜಾತಿ ಅಥಾವ ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು. ಹಜಾಮ ಎಂಬ ಪದವನ್ನು ನಿಷೇಧ ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ನಂತರ ಬೇಡಿಕೆಗಳ ಮನವಿಪತ್ರವನ್ನು ತಹಶೀಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಸಲ್ಲಿಸಿದರು. ಪ್ರತಿಭಟನೆ ಹಿನ್ನಲೆಯಲ್ಲಿ ಕೆಲ ಕಾಲ ಸಂಚಾರ ವ್ಯವಸ್ಥೆ ಅಸ್ತವ್ಯಸ್ಥವಾಗಿತ್ತು.

ಪ್ರತಿಭಟನೆಯಲ್ಲಿ ಸವಿತಾ ಸಮಾಜದ ರಾಜ್ಯ ಉಫಾಧ್ಯಕ್ಷ ಹಾಗೂ ನಗರಸಭೆ ಸದಸ್ಯ ರೂಪೇಶ್ ಕುಮಾರ್, ಸವಿತಾ ಸಮಾಜದ ತಾಲೂಕು ಅದ್ಯಕ್ಷ ನಾಗರಾಜ, ನಗರ ಘಟಕದ ಅಧ್ಯಕ್ಷ ಡಾ.ವೆಂಕಟೇಶ್, ಜಿಲ್ಲಾ ಪ್ರತಿನಿಧಿ ಡಿ.ಶ್ರೀನಿವಾಸ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಸವಿತಾ ಸಮಾಜದ ಬಂಧುಗಳು ಭಾಗವಹಿಸಿದ್ದರು.

ಯಾವುದೇ ಅಹಿತರ ಘಟನೆ ನಡೆಯದಂತೆ ನಗರ ಠಾಣೆ ಪೊಲೀಸರು ಸೂಕ್ತ ಬಂದೋ ಬಸ್ತ್ ಎರ್ಪಡಿಸಿದ್ದರು.

Leave a Comment