ಪ್ರತ್ಯೇಕ ಅಪಘಾತ : ನಾಲ್ವರ ಸಾವು

 

ಕಲಬುರಗಿ,ಜೂ.13-ಜಿಲ್ಲೆಯಲ್ಲಿ ಸಂಭವಿಸಿದ ಪ್ರತ್ಯೇಕ ರಸ್ತೆ ಅಪಘಾತದಲ್ಲಿ ನಾಲ್ವರು ಮೃತಪಟ್ಟಿದ್ದಾರೆ.

ಹಡಗಿಲ್ ಹಾರುತಿ ಹತ್ತಿರ ಬೈಕ್ ಸ್ಕಿಡ್ಡಾಗಿ ಬಿದ್ದು ತಾಜ್ ನಗರದ ಗಿರೀಶ್ ನರಸಿಂಹಲು ರೆಡ್ಡಿ (35),  ಮದಿಹಾಳ ತಾಂಡಾ ಹತ್ತಿರ ಬೈಕ್ ಗೆ ಸಾರಿಗೆ ಸಂಸ್ಥೆ ಬಸ್ ಡಿಕ್ಕಿ ಹೊಡೆದು ಕುರಕುಂಟಾದ ಶಾಮಕುಮಾರ (26) ನಗರದ ಕೇಂದ್ರ ಕಾರಾಗೃಹ ಹತ್ತಿರ ಬೈಕ್ ಗೆ ಇನ್ನೊಂದು ಬೈಕ್ ಡಿಕ್ಕಿ ಹೊಡೆದು ಜಾವೀದ್, ಹೊನ್ನಕಿರಣಗಿ ಸೀಮಾಂತರದಲ್ಲಿ ಟ್ರ್ಯಾಕ್ಟರ್ ಗೆ ಬೈಕ್ ಡಿಕ್ಕಿ ಹೊಡೆದು ವಿಜಯಕುಮಾರ ಎಂಬುವವರು ಮೃತಪಟ್ಟಿದ್ದಾರೆ.

ಅಫಜಲಪುರ ತಾಲ್ಲೂಕಿನ ಚವಡಾಪುರದ ಪೆಟ್ರೋಲ್ ಪಂಪ್ ನಲ್ಲಿ ಕೆಲಸ ಮಾಡುತ್ತಿದ್ದ ತಾಜ್ ನಗರದ ಗಿರೀಶ್ ನರಸಿಂಹಲು ರೆಡ್ಡಿ ಕೆಲಸ ಮುಗಿಸಿಕೊಂಡು ಬೈಕ್ ಮೇಲೆ ಕಲಬುರಗಿ ಕಡೆಗೆ ಬರುತ್ತಿದ್ದಾಗ ಹಡಗಿಲ್ ಹಾರುತಿ-ಶರಣಶಿಸರಸಗಿ ನಡುವೆ ಬೈಕ್ ಸ್ಕಿಡ್ಡಾಗಿ ಬಿದ್ದು ಗೂಟುಗಲ್ಲಿಗೆ ತಲೆತಾಕಿ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟರೆ, ಸೇಡಂ ರಸ್ತೆಯ ಮುದಿಹಾಳ ತಾಂಡಾ ಹತ್ತಿರ ಬಳ್ಳಾರಿಯಿಂದ ಬೆಂಗಳೂರು ಕಡೆಗೆ ಹೋಗುತ್ತಿದ್ದ ಸಾರಿಗೆ ಸಂಸ್ಥೆ ಬಸ್ ಡಿಕ್ಕಿ ಹೊಡೆದು ಕುರಕುಂಟಾದ ಶಾಮಕುಮಾರ ಎಂಬಾತ ಮೃತಪಟ್ಟಿದ್ದಾನೆ.

ಹೆಂಡತಿಯನ್ನು ಕರೆದುಕೊಂಡು ಬರಲೆಂದು ಜೇವರ್ಗಿಯಿಂದ ಕಲಬುರಗಿ ಕಡೆಗೆ ಬೈಕ್ ಮೇಲೆ ಬರುತ್ತಿದ್ದಾಗ ಕೇಂದ್ರ ಕಾರಾಗೃಹದ ಹತ್ತಿರ ಎದುರಿನಿಂದ ಬರುತ್ತಿದ್ದ ಇನ್ನೊಂದು ಬೈಕ್ ಡಿಕ್ಕಿ ಹೊಡೆದು ಜಾವೀದ್ ಎಂಬಾತ ಮೃತಪಟ್ಟರೆ, ಹೊನ್ನಕಿರಣಗಿ ಗ್ರಾಮದ ಸೀಮಾಂತರದಲ್ಲಿ ಟ್ರ್ಯಾಕ್ಟರ್ ಗೆ ಡಿಕ್ಕಿ ಹೊಡೆದು ವಿಜಯಕುಮಾರ ಎಂಬಾತ ಮೃತಪಟ್ಟಿದ್ದಾನೆ.

ಸಂಚಾರಿ ಪೊಲೀಸ್ ಪೊಲೀಸ್ ಠಾಣೆ-1 ಮತ್ತು 2 ರಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.

Leave a Comment