ಪ್ರತ್ಯೇಕ ಅಪಘಾತ ಇಬ್ಬರು ಸಾವು

ಬೆಂಗಳೂರು,ಜ.೧೨- ಎರಡು ಪ್ರತ್ಯೇಕ ಅಪಘಾತದಲ್ಲಿ ಯುವಕರಿಬ್ಬರು ಸಾವನ್ನಪ್ಪಿ ಇಬ್ಬರು ಗಾಯಗೊಂಡಿರುವ  ದುರ್ಘಟನೆ ಜಿಲ್ಲೆಯ ಕನಕಪುರ ತಾಲೂಕಿನಲ್ಲಿ ನಡೆದಿದೆ.

ಕೋಡಿಹಳ್ಳಿಯ ಗುರುರಾಜ್ (೨೧)  ದೊಡ್ಡ ಆಲಹಳ್ಳಿಯ ಕಿರಣ್ (೨೫) ಮೃತಪಟ್ಟವರು,  ಬೈಂಡಿಂಗ್ ಕೆಲಸ ಮಾಡುತ್ತಿದ್ದ ಗುರುರಾಜ್ ಕೋಡಿಹಳ್ಳಿಯಿಂದ ಕೆಲಸಕ್ಕೆ ಬೈಕಿನಲ್ಲಿ ತೆರಳುತ್ತಿದ್ದಾಗ  ಕನಕಪುರ ತಾಲೂಕಿನ ಟಿ.ಬೇಕುಪ್ಪೆ ವೃತ್ತದ ಬಳಿ ಹಿಂಬದಿಯಿಂದ ಬಂದ  ಟ್ರಾಕ್ಟರ್ ಡಿಕ್ಕಿ ಹೊಡೆದಿದೆ.

ಕೆಳಗೆಬಿದ್ದು ತಲೆಗೆ ಗಂಭೀರವಾಗಿ ಗಾಯಗೊಂಡಿದ್ದ  ಗುರುರಾಜ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.ಹಿಂಬದಿ ಸವಾರ ಸುರೇಶ್ ಗಾಯಗೊಂಡಿದ್ದು, ಆತನನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆ ಸಂಬಂಧ ಕನಕಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಲಾರಿ ಡಿಕ್ಕಿ ಸಾವು
ಕನಕಪುರದ ಮೆಳೆಕೋಟೆ ಬಳಿ ಲಾರಿ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ದೊಡ್ಡ ಆಲಹಳ್ಳಿಯ ನಿವಾಸಿ ಕಿರಣ್ ಮೃತಪಟ್ಟಿದ್ದಾನೆ. ಇಲ್ಲೂ ಕೂಡ ಹಿಂಬದಿ ಸವಾರ ಗೋವಿಂದರಾಜ್ ಗಾಯಗೊಂಡಿದ್ದು, ಆತನನ್ನು ಕನಕಪುರ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.ಘಟನೆಯ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಕನಕಪುರ ಸಂಚಾರ ಪೊಲೀಸರು ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Comment