ಪ್ರತ್ಯೇಕರಾಜ್ಯ ಬೇಡಿಕೆಗೆ ಬೆಂಬಲ

ಕಲಬುರಗಿ ಆ 1: ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕಾಗಿ ಆಗ್ರಹಿಸಿ ಉತ್ತರ ಕರ್ನಾಟಕ ಹೋರಾಟ ಸಮಿತಿ ನಡೆಸುತ್ತಿರುವ ಹೋರಾಟಕ್ಕೆ,ತನ್ನಬೆಂಬಲ ಸೂಚಿಸುವದಾಗಿ ಕರುನಾಡ ಹೋರಾಟ ಸಮಿತಿ ತಿಳಿಸಿದೆ.

ನಾಳೆ (ಆ.2) ಹೋರಾಟ ಸಮಿತಿ  ಉತ್ತರ ಕರ್ನಾಟಕ ಬಂದ್‍ಗೆ ಕರೆ ನೀಡಿದ್ದು, ಈ ಸಂದರ್ಭದಲ್ಲಿ ಕರುನಾಡ ಹೋರಾಟ ಸಮಿತಿ ವತಿಯಿಂದ  ಜಿಲ್ಲಾಡಳಿತದ ಮೂಲಕ  ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವದು ಎಂದು ಸಮಿತಿ ಅಧ್ಯಕ್ಷ ಪಾಶಾಮಿಯಾ ಹೀರಾಪುರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ಕೆಲವೊಂದು ಸಂಘಟನೆಗಳು ಸಣ್ಣಪುಟ್ಟ ನೆಪಗಳನ್ನೊಡ್ಡಿ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕೆ ತಮ್ಮ ಬೆಂಬಲವಿಲ್ಲವೆಂದು ತಿಳಿಸಿರುವದು ತೀರಾ ವಿಷಾದನೀಯ ಎಂದರು..

Leave a Comment