ಪ್ರತಿಷ್ಠಿತ ಸಾಹು ಪುರಸ್ಕಾರ್ ಗೆ  ಅಣ್ಣಾ ಹಜಾರೆ   ಆಯ್ಕೆ

ಕೊಲ್ಹಾಪುರ್ ಜೂ 13-  ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಹಾಗೂ  ಗಾಂಧಿವಾದಿ  ಅಣ್ಣಾ ಹಜಾರೆ ಅವರಿಗೆ  ಶ್ರೀ ಸಾಹು ಛತ್ರಪತಿ ಸ್ಮಾರಕ ಟ್ರಸ್ಟ್ (ಎಸ್ ಎಸ್ ಸಿ ಎಂ ಟಿ)  ಪ್ರಸಕ್ತ ವರ್ಷದ ಪ್ರತಿಷ್ಠಿತ ರಾಜಶ್ರೀ ಸಾಹು ಪುರಸ್ಕಾರ್   ಪ್ರಶಸ್ತಿಗೆ  ಆಯ್ಕೆ ಮಾಡಲಾಗಿದೆ.

ಎಸ್ ಎಸ್ ಸಿ ಎಂ ಟಿ  ಅಧ್ಯಕ್ಷರೂ ಆಗಿರುವ  ಜಿಲ್ಲಾಧಿಕಾರಿ ದೌಲತ್ ದೇಸಾಯಿ  ಬುಧವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ  ಈ ವಿಷಯ ಪ್ರಕಟಿಸಿದ್ದಾರೆ.  ಪ್ರಶಸ್ತಿ  ಒಂದು ಲಕ್ಷ ರೂಪಾಯಿ ನಗದು,  ಸ್ಮರಣಿಕೆ  ಪ್ರಶಸ್ತಿ ಪತ್ರ ಒಳಗೊಂಡಿದೆ.

ರಾಲೇಗಾನ್ ಸಿದ್ಧಿ  ಗ್ರಾಮದಲ್ಲಿ   ಸ್ವಚ್ಛತೆ,  ಜಲ ನಿರ್ವಹಣೆ ಹಾಗೂ ಸಾಮಾಜಿಕ ಸಾಮರಸ್ಯಕ್ಕಾಗಿ   ಶ್ರಮಿಸಿರುವ ಹಜಾರೆ  ಅವರಿಗೆ  ಸಾಮಾಜಿಕ ಹಾಗೂ ಸಹಕಾರ ವಲಯದಲ್ಲಿ ನೀಡಿರುವ   ಕೊಡುಗೆಯನ್ನು   ಗುರುತಿಸಿ ಪ್ರಶಸ್ತಿ ನೀಡಲಾಗಿದೆ

ಮಾಹಿತಿ ಹಕ್ಕು ಕಾಯ್ದೆಗಾಗಿ ಫಲಪ್ರದ ಹೋರಾಟ ನಡೆಸಿದ್ದ ಅಣ್ಣಾ ಹಜಾರೆ, ಈ ಕುರಿತು ಕೃತಿಯೊಂದನ್ನು ರಚಿಸಿದ್ದಾರೆ. ಇವರ ಹೋರಾಟದ ಫಲವಾಗಿ ಡಾ. ಮನಮೋಹನ್ ಸಿಂಗ್ ನೇತೃತ್ವದ ಅಂದಿನ ಯುಪಿಎ  ಸರ್ಕಾರ  ಮಾಹಿತಿ ಹಕ್ಕು ಕಾಯ್ದೆ ಅಂಗೀಕರಿಸಿ  ದೇಶಾದ್ಯಂತ ಜಾರಿಗೊಳಿಸಿತ್ತು.

ಭ್ರಷ್ಟಚಾರದ ವಿರುದ್ದ  ಹಲವು ಚಳುವಳಿಗಳನ್ನು ಆಯೋಜಿಸಿದ್ದ  ಅಣ್ಣ ಹಜಾರೆ  16 ಬಾರಿ ಉಪವಾಸ ಸತ್ಯಾಗ್ರಹ ನಡೆಸಿದ್ದರು, 13 ಬಾರಿ ರಾಜ್ಯ ಸರ್ಕಾರದ ವಿರುದ್ದ , ಮೂರು ಬಾರಿ ಕೇಂದ್ರ ಸರ್ಕಾರದ ವಿರುದ್ದ  ಉಪವಾಸ ಸತ್ಯಾಗ್ರಹ ನಡೆಸಿದ್ದರು.

ಲೋಕಸಭೆಯಲ್ಲಿ ಜನಲೋಕಪಾಲ್ ವಿಧೇಯಕ ಅಂಗೀಕರಿಸಬೇಕೆಂದು  ಕಳೆದ ಎರಡು ಬಾರಿ ಉಪವಾಸ ಮುಷ್ಕರ ನಡೆಸಿದ್ದರು.

 

Leave a Comment