ಪ್ರತಿಮೆ ಧ್ವಂಸ-ಎಐಡಿಎಸ್‌ಓ ಖಂಡನೆ

ರಾಯಚೂರು.ಮೆ.೧೬- ಕಲ್ಕಕತ್ತದಲ್ಲಿ ಇತ್ತೀಚೆಗೆ ಮಹಾನ್ ಈಶ್ವರ ಚಂದ್ರ ವಿದ್ಯಾಸಾಗರ ಅವರ ಪ್ರತಿಮೆಯನ್ನು ಕೆಡುವಿದ ದುಷ್ಕರ್ಮಿಗಳ ಕೃತ್ಯವನ್ನು ಖಂಡಿಸಿ ಎಐಡಿಎಸ್‌ಓ ಮತ್ತು ಎ.ಎಮ್.ಎಸ್.ಎಸ್‌ನ ನೇತೃತ್ವದಲ್ಲಿ ಜಿಲ್ಲಾ ಪದಾಧಿಕಾರಿಗಳು ನಗರಸಭೆ ಮುಂದೆ ಪ್ರತಿಭಟನೆ ನಡೆಸಿದರು.
ದೇಶದಲ್ಲಿ ಇತ್ತೀಚೆಗೆ ಅನೇಕ ಮಹಾತ್ಮರ ಪ್ರತಿಮೆಗಳನ್ನು ಧ್ವಂಸ ಗೊಳಿಸಿ ಸಂಭ್ರಮಿಸುವಂತಹ ಕಿಡಿಗೇಡಿಗಳ ಪಡೆಯೊಂದು ಹುಟ್ಟಿಕೊಂಡಿದೆ. ಮಹಾತ್ಮರ ಪ್ರತಿಮೆಗಳನ್ನು ಕೆಡುವ ಬಹುದೆ ಹೊರತು ಅವರ ವಿಚಾರಗಳನ್ನು ಕೆಡವಲು ಸಾಧ್ಯವಿಲ್ಲ ಎಂದು ಹೇಳಿದರು. ಆದರೆ ಇತ್ತೀಚಿನ ಕೆಲವು ರಾಜಕೀಯ ಪಕ್ಷಗಳ ನಡೆಯನ್ನು ಗಮನಿಸಿದರೆ ದೇಶಕ್ಕೆ ಮತ್ತು ಕಾನೂನಿಗೆ ವಿರುದ್ದವಾಗಿ ನಡೆದುಕೊಳ್ಳುತ್ತಿರುವು ಅತ್ಯಂತ ಅಪಾಯಕಾರಿ ಬೆಳವಣಿಗೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಪ್ರತಿಮ ಮಹಾನ್ ಸಾಧಕರಾದ ಲೆನಿನ್, ಪೆರಿಯರ್, ಅಂಬೇಡ್ಕರ್ ರಂತಹ ಮಹಾತ್ಮರ ಪ್ರತಿಮೆಗಳನ್ನು ಧ್ವಂಸಗೊಳಿಸಿದ ಕಿಡಿಗೇಡಿಗಳು ಮುಂದಿನ ದಿನಮಾನಗಳಲ್ಲಿ ರಾಜ್ಯದಲ್ಲಿರುವ ಬಸವಣ್ಣ, ಕುವೇಂಪು ಅವರ ಪ್ರತಿಮೆಗಳನ್ನು ಕೆಡುವದೆ ಬಿಡುತ್ತಾರೆಯೇ ಎಂದು ಕಿಡಿಗೇಡಿಗಳ ವಿರುದ್ದ ಗುಡುಗಿದರು.
ಆದ್ದರಿಂದ ಇಂಥಾಗ ಘಟನೆಗಳು ದೇಶದಲ್ಲಿ ಮರುಕಳಿಸದಂತೆ ಶೀಘ್ರವಾಗಿ ದೇಶದಲ್ಲಿ ಕಠಿಣ ಕಾನೂನು ಕ್ರಮವನ್ನು ಸರ್ಕಾರ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಎಐಡಿಎಸ್‌ಓ ಮತ್ತು ಎ.ಎಮ್.ಎಸ್.ಎಸ್‌ನ ಪದಾಧಿಕಾರಿಗಳು, ವಿದ್ಯಾರ್ಥಿಗಳು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

Leave a Comment