ಪ್ರತಿಭೆ ಪ್ರದರ್ಶಿಸಲು ಪಂತ್‌ಗೆ ಉತ್ತಮ ಅವಕಾಶ- ಕೊಹ್ಲಿ

 

ಲಾಡರ್ ಹಿಲ್, ಆ ೩- ಇಂದಿನಿಂದ ನಡೆಯಲಿರುವ ವಿಂಡೀಸ್ ಪ್ರವಾಸದಲ್ಲಿ ಮಾಜಿ ನಾಯಕ ಹಾಗೂ ವಿಕೆಟ್ ಕೀಪರ್ ಎಂ.ಎಸ್.ಧೋನಿ ಅವರು ಅನುಪಸ್ಥಿತಿಯಲ್ಲಿ ಯುವ ವಿಕೆಟ್ ಕೀಪರ್ ರಿಷಭ್ ಪಂತ್‌ಗೆ ತನ್ನ ಪ್ರತಿಭೆ ಪ್ರದರ್ಶಿಸಲು ಉತ್ತಮ ಅವಕಾಶ ಲಭ್ಯವಾಗಿದೆ ಎಂದು ನಾಯಕ ವಿರಾಟ್ ಕೊಹ್ಲಿ ಅಭಿಪ್ರಾಯಪಟ್ಟಿದ್ದಾರೆ.

ಫ್ಲೋರಿಡಾದಲ್ಲಿ ನಡೆಯುವ ವೆಸ್ಟ್ ಇಂಡೀಸ್ ವಿರುದ್ಧ ಮೊದಲ ಟಿ ೨೦ ಪಂದ್ಯಕ್ಕೆ ಸಜ್ಜು ಆಗುತ್ತಿರುವ ಟೀಂ ಇಂಡಿಯಾಕ್ಕೆ ಧೋನಿ ಅಲಭ್ಯದಿಂದಾಗಿ ದೊಡ್ಡ ನಷ್ಟವಾದರೂ ಆ ನಷ್ಟವನ್ನು ತುಂಬಲು ರಿಷಬ್ ಪಂತ್‌ಗೆ ಒಳ್ಳೆ ಅವಕಾಶ ದೊರೆತಿದೆ. ವಿಂಡೀಸ್ ಪ್ರವಾಸದಲ್ಲಿ ತನ್ನ ಪ್ರತಿಭೆ ಪ್ರದರ್ಶಿಸಲು ಅವರಿಗೆ ಉತ್ತಮ ಅವಕಾಶ ದೊರೆಯಲಿದೆ ಎಂದು ಹೇಳಿದ್ದಾರೆ

ಧೋನಿ ಅಲಭ್ಯತೆಯ ಲಾಭವನ್ನು ಪಂತ್ ಪಡೆದುಕೊಳ್ಳಬೇಕಾಗಿದೆ. ಪಂತ್ ಪ್ರತಿಭೆ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ, ಪರಿಸ್ಥಿತಿಗೆ ತಕ್ಕಂತೆ ಅವರು ಆಡಲಿದ್ದಾರೆ ಎಂದು ಟೀಂ ಇಂಡಿಯಾ ಆಶಿಸಿದೆ. ಎಂ.ಎಸ್.ಧೋನಿಯ ಅನುಭವ ಯಾವಾಗಲೂ ತಂಡಕ್ಕೆ ಮಹತ್ವದ್ದು, ಹಾರ್ದಿಕ್ ಪಾಂಡ್ಯ ಕೂಡ ವಿಶ್ರಾಂತಿ ಪಡೆಯುತ್ತಿರುವುದರಿಂದ ಯುವ ಕ್ರಿಕೆಟಿಗರಿಗೆ ಇದೊಂದು ಉತ್ತಮ ಅವಕಾಶ ಎಂದು ಕೊಹ್ಲಿ ಹೇಳಿದ್ದಾರೆ.

Leave a Comment