ಪ್ರತಿಭೆಗೆ ಜಾತಿ-ಮತದ ಹಂಗಿಲ್ಲ: ಎಂ.ಪಿ.ಲತಾ

ಹರಪನಹಳ್ಳಿ.ಸೆ.1; ತಾಯಿ ಮತ್ತು ಶಿಕ್ಷಕರು ಮಾತ್ರ ಮಕ್ಕಳಲ್ಲಿನ ಪ್ರತಿಭೆ, ಸಾಧನೆ ಗುರುತಿಸಲು ಸಾಧ್ಯ. ಪ್ರತಿಭೆ ಯಾರ ಸ್ವತ್ತಲ್ಲ. ಇದಕ್ಕೆ ಜಾತಿ, ಮತದ ಹಂಗಿಲ್ಲ. ಸೂಪ್ತ ಪ್ರತಿಭೆ ಗುರುತಿಸಲು ಇಂಥ ವೇದಿಕೆಗಳು ನೆರವಾಗುತ್ತವೆ ಎಂದು ಕೆಪಿಸಿಸಿ ರಾಜ್ಯ ಮಹಿಳಾ ಕಾರ್ಯದರ್ಶಿ ಎಂ.ಪಿ.ಲತಾ ಮಲ್ಲಿಕಾರ್ಜುನ್ ಹೇಳಿದರು. ತಾಲೂಕಿನ ಚೆನ್ನಹಳ್ಳಿ ತಾಂಡದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಾರ್ವನಿಕ ಶಿಕ್ಷಣ ಇಲಾಖೆ ಹಾಗೂ ಸಮೂಹ ಸಂಪನ್ಮೂಲ ಕೇಂದ್ರ ಸಹಯೋಗದಲ್ಲಿ ಗೋವೇರಹಳ್ಳಿ  ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.  ವಿದ್ಯಾರ್ಥಿಗಳು ಸದಾ ಕ್ರಿಯಾಶೀಲರಾಗಿರಲು ಪಠ್ಯದ ಜತೆಗೆ ಪಠ್ಯೇತರ ಚಟುವಟಿಗಳು ಅವಶ್ಯ. ಹಿಂದೆ ವಿದ್ಯಾರ್ಥಿಗಳು ಮನೆ, ಜಮೀನು ಕೆಲಸಗಳಲ್ಲಿ ಪಾಲಕರಿಗೆ ನೆರವಾಗುತ್ತಾ ಶಿಕ್ಷಣ ಪೂರೈಸುತ್ತಿದ್ದರು. ಹೀಗಾಗಿ ದೈಹಿಕ, ಮಾನಸಿಕವಾಗಿ ಸದೃಢರಾಗಿದ್ದರು. ಇಂದಿನ ಆಧುನಿಕ ಬದುಕಿನಲ್ಲಿ ಮಕ್ಕಳು ಟಿವಿ, ಮೊಬೈಲ್‍ಗೆ ಸೀಮಿತವಾಗಿದ್ದಾರೆ. ಆದ್ದರಿಂದ ಪಾಲಕರು ಮಕ್ಕಳನ್ನು ಜಾನಪದ ಕಲೆ, ಸಂಗೀತ, ನೃತ್ಯ ಅಭ್ಯಾಸಕ್ಕೆ ಸೇರಿಸಬೇಕು ಎಂದರು. ಈ ಸಂದರ್ಭದಲ್ಲಿ ಜಿ.ಪಂ ಸದಸ್ಯ ಹೆಚ್.ಬಿ.ಪರಶುರಾಮಪ್ಪ, ಹಾರಕನಾಳು ಗ್ರಾ.ಪಂ ಅಧ್ಯಕ್ಷೆ ಸಾವಿತ್ರಿಬಾಯಿ ಶಶಿಕುಮಾರನಾಯ್ಕ, ತಾ.ಪಂ ಸದಸ್ಯೆ ಲಕ್ಷ್ಮೀಬಾಯಿ, ಉಪಾಧ್ಯಕ್ಷ ಭೋವಿ ನಾಗರಾಜ್, ಮುಖಂಡರಾದ ಸಿ.ಸಿ.ರಾಮಚಂದ್ರ, ಜಯಮಾಲತೇಶ್, ಸಿಆರ್‍ಪಿ ನಾಗರಾಜ್, ಸೋಮನಾಥ್, ಬೋಜ್ಯಾನಾಯ್ಕ, ಶಶಿಕುಮಾರನಾಯ್ಕ, ಸೋನಿಬಾಯಿ, ಕೊಟ್ರೇಶನಾಯ್ಕ, ಸುಶೀಲಾಬಾಯಿ, ತಿಪ್ಪೇಶನಾಯ್ಕ, ಪ್ರವೀಣ್, ಭಾಷಾಸಾಬ್, ಹಟ್ಟಿಗೌಡ ಮಂಜ್ಯನಾಯ್ಕ, ವಿಶ್ವನಾಥ್ ಇತರರು ಉಪಸ್ಥಿತರಿದ್ದರು.

Leave a Comment