ಪ್ರತಿಭಟನೆ

ರಾಜ್ಯ ಸಾರಿಗೆ ಸಂಸ್ಥೆ ಬಸ್ ಸಮಯಕ್ಕೆ ಸರಿಯಾಗಿ ಬರದೆ ಇರುವುದನ್ನು ಖಂಡಿಸಿ ತಾಲೂಕಿನ ಸನವಳ್ಳಿ ಗ್ರಾಮದ ವಿದ್ಯಾರ್ಥಿಗಳು ಕೆಲ ಕಾಲ ಬಸ್ ತಡೆದು ಪ್ರತಿಭಟನೆ ನಡೆಸಿದ ಘಟನೆ ಸೋಮವಾರ ನಡೆದಿದೆ. ಸನವಳ್ಳಿ ಭಾಗದಿಂದ ನಿತ್ಯ ನೂರಾರು ವಿದ್ಯಾರ್ಥಿಗಳು ಮುಂಡಗೋಡ ಶಾಲಾ-ಕಾಲೇಜುಗಳಿಗೆ ಬರುತ್ತಾರೆ. ಆದರೆ ಬಂಕಾಪುರ ದಿಂದ ಸನವಳ್ಳಿ ಮಾರ್ಗವಾಗಿ ಮುಂಡಗೋಡ ಗೆ ಬರುವ ಬಸ್ ಸನವಳ್ಳಿ ಗ್ರಾಮಕ್ಕೆ ಬರುವಷ್ಟರಲ್ಲಿ ಬೆಳಗ್ಗೆ 11ಗಂಟೆ ಆಗಿರುತ್ತದೆ. ಇದರಿಂದ ಶಾಲಾ ಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆ ಉಂಟಾಗಿದ್ದು, ಶಾಲೆಗಳಿಗೆ ತಡವಾಗಿ ಹೋಗಬೇಕಾದ ಅನಿವಾರ್ಯತೆ ಬಂದೊದಗಿದೆ. ಆದ್ದರಿಂದ ನಮಗೆ ಬೆಳಗ್ಗೆ 8.30ಕ್ಕೆ ಬಸ್ ಬಿಡುವ ವ್ಯವಸ್ಥೆಯಾಗಬೇಕು. ಅದೇ ರೀತಿ ಸಂಜೆ 5.30ಕ್ಕೆ ಮುಂಡಗೋಡ ನಿಂದ ಬಸ್ ಹೊರಡಬೇಕು ಒತ್ತಾಯಿಸಿದ್ದಾರೆ.   ಒಂದು ವೇಳೆ ಬಸ್ ಬಿಡದೇ ಇದ್ದರೆ ಉಗ್ರ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಸನವಳ್ಳಿ ಗ್ರಾಮಸ್ಥರು ಬಸ್ ನಿಯಂತ್ರಣಾಧಿಕಾರಿಗೆ ಎಚ್ಚರಿಸಿದ್ದಾರೆ.

Leave a Comment