ಪ್ರತಾಪ್ ಸಿಂಹರಿಂದ ನೀತಿ ಸಂಹಿತೆ ಉಲ್ಲಂಘನೆ

@12bc = ಅನರ್ಹಕ್ಕೆ ಕೆ.ಎಸ್.ಶಿವರಾಮು ಆಗ್ರಹ
ಮೈಸೂರು, ಮಾ.14 : ಪಕ್ಷದ ಚಿನ್ಹೆ ಹಾಗೂ ಮುಖಂಡರ ಭಾವಚಿತ್ರವಿರುವ ಬುಕ್ ಲೆಟ್ ಅನ್ನು ಅನಧಿಕೃತವಾಗಿ ಮುದ್ರಿಸಿ ವಿತರಿಸುವ ಮೂಲಕ ಸಂಸದ ಪ್ರತಾಪ್ ಸಿಂಹ ಅವರು ಚುನಾವಣಾ ನೀತಿ ಸಂಹಿತೆಯನ್ನು ಸ್ಪಷ್ಟವಾಗಿ ಉಲ್ಲಂಘಿಸಿದ್ದು ಆದ್ದರಿಂದ ಅವರನ್ನು ಅನರ್ಹಗೊಳಿಸಬೇಕೆಂದು ಚುನಾವಣಾ ಆಯೋಗವನ್ನು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ ರಾಜ್ಯಾಧ್ಯಕ್ಷ ಕೆ.ಎಸ್.ಶಿವರಾಮು ಒತ್ತಾಯಿಸಿದರು.
ಅನಧಿಕೃತವಾಗಿ ಮುದ್ರಣಗೊಂಡಿರುವ ಬುಕ್ ಲೆಟ್ ಗಳನ್ನು ಪ್ರದರ್ಶಿಸಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪ್ರತಾಪ್ ಸಿಂಹ ಅವರು ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮಾ.11ರಂದು 50 ಸಾವಿರ ಬುಕ್ ಲೇಟ್ ಮಾಡಿ ವಿವಿಧ ಅಂಚೆ ಕಚೇರಿಗಳ ಮೂಲಕ ಪೋಸ್ಟ್ ಮನ್ ಗಳನ್ನು ಬಳಸಿಕೊಂಡು ವಿತರಿಸಿರುವುದು ಚುನಾವಣಾ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ದೂರಿದರು.
ತಮ್ಮ ಪ್ರಭಾವದಿಂದ ಕ್ಷೇತ್ರದಲ್ಲಿ ಹಿಡಿತ ಸಾಧಿಸಿರುವ ಪ್ರತಾಪ್ ಸಿಂಹರಿಂದ ಪಾರದರ್ಶಕ ಚುನಾವಣಾ ಸಾಧ್ಯದ ಸ್ಥಿತಿ ಕ್ಷೇತ್ರದಲ್ಲಿ ಸೃಷ್ಟಿಯಾಗಿದೆ, ನೀತಿ ಸಂಹಿತೆ ಜಾರಿಯಲ್ಲಿದ್ದರು ಸಹ, ತನ್ನ ವ್ಯಾಪ್ತಿಯ ಸರ್ಕಾರಿ ಕಚೇರಿಗಳನ್ನು ಕೇಂದ್ರ ಸರ್ಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಸುದ್ದಿಗೋಷ್ಠಿಯಲ್ಲಿ ದೂರಿದರು.
ಆದ್ದರಿಂದ ಅನಧಿಕೃತವಾಗಿ ಪಕ್ಷದ ಬುಕ್ ಲೆಟ್ ಗಳನ್ನು ವಿತರಿಸಿದ ಮೈಸೂರು ವಿಭಾಗದ ಸೂಪರಿಂಟೆಂಡ್ ಆಫ್ ಪೋಸ್ಟ್ ಅಂಡ್ ಟೆಲಿಗ್ರಾಫ್ ಇವರನ್ನು ಅಮಾನತ್ತುಗೊಳಿಸಬೇಕು ಎಂದು ಒತ್ತಾಯಿಸಿದರು.
ಮುಖಂಡರಾದ ಮಹೇಶ್ ಗೌಡ, ಕಾಡನಹಳ್ಳಿ ಡಿಸ್ವಾಮಿ ಗೌಡ, ಕೆ.ಸತೀಶ್ ಕುಮಾರ್, ಜಾಕೀರ್ ಹುಸೇನ್, ಪ್ರಸನ್ನ ದೊಡ್ಡುಂಡಿ ಗೋಷ್ಠಿಯಲ್ಲಿ ಇದ್ದರು.

Leave a Comment