ಪ್ರಗತಿ ಸಾಧಿಸಿದಷ್ಟೇ ಒತ್ತಡ ಜೀವನದ ಸ್ಥಿತಿ ಇದೆ

ದಾವಣಗೆರೆ ಅ.10; ಆಧುನಿಕ ಯುಗದಲ್ಲಿ ನಾವು ಎಷ್ಟು ಪ್ರಗತಿ ಸಾಧಿಸಿದ್ದೇವೆಯೋ, ಅಷ್ಟೇ ಒತ್ತಡದ
ಲ್ಲಿ ಕೆಲಸ ಮಾಡುವ ಪರಿಸ್ಥಿತಿ ಇದೆ. ದಿಂದ ನಾವು ಮಾನಸಿಕ ಖಿನ್ನತೆಗೆ ಒಳಗಾಗುತ್ತೀದ್ದೇವೆ. ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಜಿ.ಅಂಬಾದಾಸ್ ಕುಲಕರ್ಣಿ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜೆ.ಜೆ.ಎಂ. ವೈದ್ಯಕೀಯ ಮಹಾವಿದ್ಯಾಲಯದ ಮನೋವೈದ್ಯಕೀಯ ವಿಭಾಗ, ಜಿಲ್ಲಾ ಮನೋವೈದ್ಯಕೀಯ ವಿಭಾಗ, ಜಿಲ್ಲಾ ಚಿಗಟೇರಿ ಆಸ್ಪತ್ರೆ, ದಿ ಅಸೋಸಿಯೇಷನ್ ಆಫ್ ಪೀಪಲ್‍ವಿತ್ ಡಿಸೆಬಿಲಿಟಿ ಆರ್ಗನೈಜೇಶನ್ ದಾವಣಗೆರೆ ಇವರ ಸಂಯುಕ್ತಾಶ್ರಯದಲ್ಲಿ ಜೆ.ಜೆ.ಎಂ. ವೈದ್ಯಕೀಯ ಮಹಾವಿದ್ಯಾಲಯದ ಲೈಬ್ರರಿ ಹಾಲ್‍ನಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು. ನಾವು ಮಾಡುವ ಕೆಲಸದಲ್ಲಿ ಸರಿಯಾದ ನಿಷ್ಠೆ, ವೇಳಾಪಟ್ಟಿ ಹಾಕಿಕೊಂಡು ಕೆಲಸ ಮಾಡಿದರೆ ಮಾನಸಿಕ ಖಿನ್ನತೆಯಿಂದ ದೂರವಾಗಬಹುದು. ಇಂದು ವಿದ್ಯಾವಂತ ಜನರಲ್ಲೇ ಮಾನಸಿಕ ಖಿನ್ನತೆ ಎಂಬುದು ಹೆಚ್ಚಾಗಿದೆ. ಇದಕ್ಕೆ ಅನೇಕ ಕಾರಣಗಳಿವೆ. ಈ ರೀತಿಯ ಮಾನಸಿಕ ಖಿನ್ನತೆಯನ್ನು ವಾಕಿಂಗ್, ಯೋಗ ಮತ್ತು ಧ್ಯಾನ ಮಾಡುವುದರ ಮೂಲಕ ದೂರ ಮಾಡಬಹುದು. ನಾವು ಮಾಡುವ ಕೆಲಸದಲ್ಲಿ ನಂಬಿಕೆ ಮತ್ತು ಶ್ರದ್ದೆ ಇರಬೇಕು. ನಮ್ಮಲಿರುವ ಜ್ಞಾನವನ್ನು ಸಕ್ರಮವಾಗಿ ಉಪಯೋಗಿಸಿ ಕೊಂಡರೆ ಮಾನಸಿಕ ಖಿನ್ನತೆಯಿಂದ ದೂರವಾಗಬಹುದೆಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಜೆ.ಜೆ.ಎಂ. ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಎಸ್.ಬಿ.ಮುರುಗೇಶ್ ಮಾತನಾಡಿ, ದೈಹಿಕ ಆರೋಗ್ಯದಂತೆ ಮಾನಸಿಕ ಆರೋಗ್ಯವು ಮುಖ್ಯ. ಮಾನಸಿಕ ಆರೋಗ್ಯವು ದೈಹಿಕ ಆರೋಗ್ಯದ ಮೇಲೆ ಪೆಟ್ಟು ನೀಡುತ್ತದೆ. ಮಾನಸಿಕ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಎಲ್ಲಾರೊಂದಿಗೆ ಸ್ನೇಹಮಯವಾಗಿರಬೇಕು. ಜೀವನದ  ಆದರ್ಶ, ಮೌಲ್ಯ, ನೀತಿ, ನಿಯಮಗಳಿಗೆ ನಿಷ್ಠರಾಗಿ ಜೀವನ ಸಾಗಿಸಬೇಕು.
ಆಧುನಿಕ ಜೀವನ ಶೈಲಿ ಮತ್ತು ಜೀವನ ವೇಗದ ಫಲವಾಗಿ 2020 ರ ವೇಳೆಗೆ ಮಾನಸಿಕ ಆರೋಗ್ಯದ ಸಮಸ್ಯೆಗಳು ಹೆಚ್ಚಾಗುವ ಸಂಭವಗಳಿವೆ. ವಿಶ್ವದ್ಯಾಂತ 8 ಲಕ್ಷ ಜನರು ಮತ್ತು ಭಾರತದಲ್ಲಿ 1.33 ಲಕ್ಷ ಜನರು (17%) ಜನರು ಆತ್ಮಹತ್ಯೆಯನ್ನು ಮಾಡಿಕೊಳ್ಳುತ್ತಿದ್ದಾರೆ. ಮಾನಸಿಕ ಆರೋಗ್ಯದ ಸಮಸ್ಯೆಗಳು ವಿಶ್ವದ್ಯಾಂತ ಎಲ್ಲಾರ ಮೇಲೆ ಪ್ರಭಾವ ಬೀರುತ್ತಿವೆ. ಆದ್ದರಿಂದ ವಿಶ್ವ ಮಾನಸಿಕ ಆರೋಗ್ಯ ದಿನಚಾರಣೆಯು ಎಲ್ಲರಲ್ಲಿ ಮಾನಸಿಕ ಆರೋಗ್ಯದ ಬಗ್ಗೆ ಅರಿವು ಮೂಡಿಸುವ ಜಾಗೃತಿ ಹೆಚ್ಚಿಸುವಲ್ಲಿ ಪ್ರಾಮುಖ್ಯತೆ ಪಡೆದಿವೆ ಎಂದರು. ಶಾರೀರಕ್ಕೆ ವ್ಯಾಯಮ ಅವಶ್ಯಕ ಬಿಡುವಿನ ವೇಳೆಯನ್ನು ಸದುಪಯೋಗ ಮಾಡಿಕೊಂಡು ಪ್ರಶಾಂತಯುತ ಜೀವನ ನಡೆಸಿ ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶ ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರಭು ಎನ್. ಬಡಿಗೇರ್,  ವಕೀಲರ ಸಂಘದ ಅಧ್ಯಕ್ಷ ಎನ್.ಟಿ.ಮಂಜುನಾಥ್, ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಎಲ್.ಎಚ್.ಅರುಣ್‍ಕುಮಾರ್, ಮನೋವೈದ್ಯ ಡಾ.ಹೆಚ್.ನಾಗರಾಜ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಡಿಹೆಚ್‍ಓ ಡಾ. ಹೆಚ್.ಎಸ್. ರಾಘವೇಂದ್ರಸ್ವಾಮಿ, ಜಿಲ್ಲಾ ಮಾನಸಿಕ ಕಾರ್ಯಕ್ರಮದ ಅಧಿಕಾರಿ ಡಾ.ಪಿ.ಡಿ.ಮುರುಳೀಧರ್, ಡಾ.ಸಿ.ವೈ.ಸುದರ್ಶನ್, ಡಾ.ಗಂಗಂ ಸಿದ್ಧಾರೆಡ್ಡಿ, ಎಸ್.ರವಿ ಇತರರು ಉಪಸ್ಥಿತರಿದ್ದರು.

Leave a Comment