ಪ್ರಗತಿ ಪರಿಶೀಲನಾ ಸಭೆ ನಿಗದಿಗೆ ಒತ್ತಾಯ

ರಾಯಚೂರು.ಫೆ.17- ನಗರದ ಕೊಳಗೇರಿಗಳ ಸ್ಥಿತಿಗತಿ ಕುರಿತು ಶೀಘ್ರವೇ ಪ್ರಗತಿ ಪರಿಶೀಲನಾ ಸಭೆಗೆ ದಿನಾಂಕ ನಿಗದಿಪಡಿಸುವಂತೆ ರಾಯಚೂರು ಸ್ಲಂ ನಿವಾಸಿಗಳ ಕ್ರಿಯಾವೇದಿಕೆ ಒತ್ತಾಯಿಸಿದೆ.

ಈ ಕುರಿತು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ನಗರದಲ್ಲಿ ಘೋಷಿತ ಹಾಗೂ ಅಘೋಷಿತ ಕೊಳಗೇರಿ ಸೇರಿ ಸುಮಾರು 56 ಸ್ಲಂ ಬಡಾವಣೆಗಳಿಗೆ ದೀನ ದಲಿತ, ಅಲೆಮಾರಿ ಬಡ ಕುಟುಂಬಗಳು ಕನಿಷ್ಟ ಸೌಲಭ್ಯ ಮರಿಚಿಕಿಯಂತಾದ ಸ್ಥಳದಲ್ಲಿ ಆಶ್ರಯ ಪಡೆದಿದ್ದಾರೆ. ಸ್ಲಂಗಳಿಗೆ ಮೂಲ ಸೌಕರ್ಯ ಸೇರಿ ಬದುಕುವ ಹಕ್ಕು ಕುರಿತು ಜಿಲ್ಲಾಡಳಿತ ಪ್ರಸ್ತುತವರೆಗೆ ಸ್ಲಂ ಜನತೆ-ಅಧಿಕಾರಿಗಳ ಸಮ್ಮುಖದಲ್ಲಿ ಸ್ಥಿತಿಗತಿ ಬಗ್ಗೆ ಸಭೆ ಕರೆಯದೆ ನಿರ್ಲಕ್ಷಿಸಿರುವುದು ಖೇದಕರ. ಸ್ಲಂ ಕಾಯ್ದೆಯ ಸ್ಲಂ ನೀತಿ 2016 ರನ್ವಯ 90 ದಿನಗಳಲ್ಲಿ ಅಘೋಷಿತ ಸ್ಲಂ ಘೋಷಿಸಿ ರಾಜೀವ್ ಗಾಂಧಿ ವಸತಿ ನಿಲಯ ನಿಯಮಿತ ಆದೇಶದನ್ವಯ ಪಟ್ಟಣದಲ್ಲಿ ನೆಲೆಯೂರಿರುವ ನಿವೇಶನ ರಹಿತರಿಗೆ ಸರಕಾರಿ, ಖಾಸಗಿ ಸ್ವಾಮ್ಯಕ್ಕೆ ಸೇರಿದ ಭೂಮಿಯನ್ನು ಖರೀದಿಸಿ, ನಿವೇಶನ ರಹಿತರಿಗೆ ವಸತಿ ಹಂಚಿಕೆ ಮಾಡಬೇಕು.

ಸ್ಲಂಗಳಲ್ಲಿ ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯ ನಿರ್ಮಿಸಿ, ಜ್ಯೋತಿ ಕಾಲೋನಿ ಸ್ಲಂನಿವಾಸಿಗಳಿಗೆ ಹಕ್ಕು ಪತ್ರ ವಿತರಣೆಗೆ ಮರು ಪ್ರಸ್ತಾವನೆ ಸಲ್ಲಿಸಿ, ಅಸಡ್ಡೆ ಮುಂದುವರೆಸಿರುವ ಯುಡಿಸಿ ಸಿಬ್ಬಂದಿ ರಮೇಶ್ ಅವರನ್ನು ಸೇವೆಯಿಂದ ಅಮಾನತುಗೊಳಿಸುವಂತೆ ಆಗ್ರಹಿಸಲಾಯಿತು. ಕ್ರಿಯಾ ವೇದಿಕೆಯ ಅಧ್ಯಕ್ಷ ಜನಾರ್ಧನ್ ಹಳ್ಳಿಬೆಂಚಿ, ಎಸ್.ಕೆ.ನಾಗರಾಜ, ಆಂಜಿನೇಯ್ಯ, ಕೆ.ಪಿ.ಅನೀಲಕುಮಾರ, ಬಸವರಾಜ ಹೊಸೂರು ಇನ್ನಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave a Comment