ಪ್ರಗತಿಪರ ರೈತ ಬಿ.ಎಸ್.ರಘುನಾಥ್‍ರವರ 75ನೇ ವಾರ್ಷಿಕೋತ್ಸವ

ಹಿರಿಯೂರು:ಅ.10-ಗ್ರಾಮೀಣ ಪ್ರದೇಶದ ಒಬ್ಬ ಸಾಮಾನ್ಯ ರೈತನ ಮಗನಾಗಿ ಹುಟ್ಟಿ ಕೃಷಿ ಕ್ಷೇತ್ರದಲ್ಲಿ ಹೊಸ ಹೊಸ ಅವಿಷ್ಕಾರ ಗಳನ್ನು ಮಾಡುವ ಮೂಲಕ ಕೃಷಿ ಕ್ಷೇತ್ರದಲ್ಲಿ ಒಬ್ಬ ಪ್ರಗತಿಪರ ರೈತನಾಗಿ ಗುರುತಿಸಿಕೊಂಡಿದ್ದೂ ಅಲ್ಲದೆ ರಾಜಕೀಯ ಕ್ಷೇತ್ರದಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡು ಹರಿಯಬ್ಬೆ ಗ್ರಾಮ ಪಂಚಾಯ್ತಿಯಿಂದ ಚಿತ್ರದುರ್ಗ ಜಿಲ್ಲಾ ಪಂಚಾಯ್ತಿ ಅಧ್ಯಕ್ಷಗಾದಿವರೆಗೆ ಉತ್ತಮ ಆಡಳಿತ ನಡೆಸಿದ ಹರಿಯಬ್ಬೆ ಗ್ರಾಮದ ಬಿ.ಎಸ್.ರಘುನಾಥ್‍ರವರು ಇದೀಗ 75 ವರ್ಷಗಳ ತುಂಬು ಜೀವನ ನಡೆಸಿ 75ನೇ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿರುವುದು ನಿಜಕ್ಕೂ ಅಭಿನಂದನಾರ್ಹ ಸಂಗತಿ ಎಂದು ಅಖಿಲ ಕರ್ನಾಟಕ ಕುಂಚಿಟಿಗರ ಮಹಾಮಂಡಲದ ಅಧ್ಯಕ್ಷ ಕೆ.ಬಸವಾನಂದ್ ಹೇಳಿದರು. ತಾಲ್ಲೂಕಿನ ಹರಿಯಬ್ಬೆ ಗ್ರಾಮದಲ್ಲಿ ಪ್ರಗತಿಪರ ರೈತ ಹಾಗೂ ಚಿತ್ರದುರ್ಗ ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷರಾದ ಬಿ.ಎಸ್.ರಘುನಾಥ್‍ರವರ 75ನೇ ವಾರ್ಷಿಕೋತ್ಸವದÀ ಅಭಿನಂದನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು. ಪತ್ರಕರ್ತರಾದ ಹರಿಯಬ್ಬೆ ಯಂಜಾರಪ್ಪ ಮಾತನಾಡಿ, ನಮ್ಮ ಗ್ರಾಮದ ಕೃಷಿಕುಟುಂಬದಲ್ಲಿ ಜನಿಸಿದ ಬಿ.ಎಸ್.ರಘುನಾಥ್‍ರವರು ಹಸಿರುಕ್ರಾಂತಿ ಹರಿಕಾರರಾಗಿ ಕೃಷಿಕ್ಷೇತ್ರದಲ್ಲಿ ಅವರ ಸಾಧನೆಯನ್ನು ಗಮನಿಸಿದ ಸರ್ಕಾರ ಹಾಗೂ ಸಂಘಸಂಸ್ಥೆಗಳು ರಾಜ್ಯಮಟ್ಟದ ಪರಿಸರಪ್ರಶಸ್ತಿ, ಕೃಷಿಋಷಿಪ್ರಶಸ್ತಿ, ಹಾಗೂ ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಡಾ||ಮರಿಗೌಡ ಹೆಸರಿನ ಉತ್ತಮ ಕೃಷಿಕ ಪ್ರಶಸ್ತಿಗಳನ್ನು ನೀಡಿ ಗೌರವಿಸಿದ್ದಲ್ಲದೆ ಅವರು ಕೃಷಿ ಹಾಗೂ ಅರಣ್ಯ ಕ್ಷೇತ್ರದಲ್ಲಿ ಮಾಡಿರುವ ಸಾಧನೆಯನ್ನು ಗುರುತಿಸಿ ಕೇಂದ್ರÀ ಸರ್ಕಾರದ ಅರಣ್ಯ ಹಾಗೂ ಪರಿಸರ ಖಾತೆ ಸಚಿವರಾದ ಪ್ರಕಾಶ್‍ಜಾವಡೇಕರ್ ಅವರಿಂದ ರಾಷ್ಟ್ರಮಟ್ಟದ “ಮಾದರಿರೈತ” ಪ್ರಶಸ್ತಿ ಗಳಿಸಿರುವುದು ನಮ್ಮ ಹರಿಯಬ್ಬೆ ಗ್ರಾಮ, ಹಿರಿಯೂರು ತಾಲ್ಲೂಕು ಹಾಗೂ ಚಿತ್ರದುರ್ಗ ಜಿಲ್ಲೆಗೆ ಸಂದ ಗೌರವವಾಗಿದೆ ಎಂದರು. ಕಾಂಗ್ರೆಸ್ ಮುಖಂಡರಾದ ಬಿ.ಎಲ್.ಗೌಡ ಮಾತನಾಡಿ, ನಮ್ಮ ಜಿಲ್ಲೆಯ ರೈತರಿಗೆ ಮಾದರಿಯಾಗಿರುವ ಬಿ.ಎಸ್.ರಘುನಾಥ್‍ರವರು ತಮ್ಮ ಶ್ರೀಮತಿ ಯಶೋದಮ್ಮ ಹಾಗೂ ಮಕ್ಕಳು ಮೊಮ್ಮಕ್ಕಳ ಜೊತೆ 75 ವರ್ಷಗಳ ಸಾರ್ಥಕ ಜೀವನ ನಡೆಸಿದ್ದು ಇವರ ಸಾಧನೆ ಹಾಗೂ ನಡೆದು ಬಂದ ಹಾದಿ ನಮ್ಮ ಜಿಲ್ಲೆಯ ರೈತರಿಗಷ್ಟೇ ಅಲ್ಲ ಈ ನಾಡಿನ ರೈತರಿಗೆ ಮಾದರಿಯಾಗಿ ಇವರು ಇನ್ನು ನೂರ್ಕಾಲ ಬಾಳಲಿ ಎಂದು ಶುಭ ಕೋರಿದರು. ಆರಂಭದಲ್ಲಿ ಚಿತ್ರದುರ್ಗ ಶಾಸಕರಾದ ಜಿ.ಹೆಚ್.ತಿಪ್ಪಾರೆಡ್ಡಿ ಸಮಾರಂಭಕ್ಕೆ ಆಗಮಿಸಿ ಬಿ.ಎಸ್.ರಘುನಾಥ್‍ರವರಿಗೆ ಶಾಲು ಹೊದಿಸಿ ಸನ್ಮಾನಿಸಿದರು. ಪತ್ರಕರ್ತರಾದ ಆಲೂರು ಹನುಮಂತರಾಯಪ್ಪ ಸಮಾರಂಭಕ್ಕೆ ಎಲ್ಲರನ್ನು ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕೊನೆಯಲ್ಲಿ ಆರ್.ವಸಂತ್‍ಕುಮಾರ್ ಎಲ್ಲರಿಗೂ ವಂದಿಸಿದರು. ಈ ಕಾರ್ಯಕ್ರಮದಲ್ಲಿ ಒಕ್ಕಲಿಗ ಸಮಾಜದ ಹಿರಿಯ ಮುಖಂಡ ಎಸ್.ಆರ್.ವಿಶ್ವನಾಥ್, ರೈತಸಂಘದ ಅಧ್ಯಕ್ಷ ಕೆ.ಸಿ.ಹೊರಕೇರಪ್ಪ, ಎ.ಪಿ.ಎಂ.ಸಿ ಅಧ್ಯಕ್ಷ ಈರಲಿಂಗೇಗೌಡ, ಜಿ.ಪಂ.ಮಾಜಿ ಅಧ್ಯಕ್ಷ ಜಯಣ್ಣಪಿಲಾಜನಹಳ್ಳಿ, ತಾ.ಪಂ.ಮಾಜಿ ಅಧ್ಯಕ್ಷ ಬಿ.ಹೆಚ್. ವೆಂಕಟೇಶಪ್ಪ, ಡಾ||ನಾಗಣ್ಣ ತುಮಕೂರು, ಡಾ||ಜಿ.ಕೆ.ಜಯರಾಂ ಮಧುಗಿರಿ, ನಿ||ವಾಣ ಜ್ಯತೆರಿಗೆ ಅಧಿಕಾರಿ ಹೆಚ್.ಎಸ್. ವೀರಯ್ಯ, ಗುಂಡಪ್ಪ ಹರಿಯಬ್ಬೆ, ಸಿದ್ದೇಗೌಡ ಬೆಂಗಳೂರು, ಕೃಷ್ಣಮೂರ್ತಿ ಶಿಕಾರಿಪುರ,ಸೇರಿದಂತೆ ಗ್ರಾಮದ ಅನೇಕಮುಖಂಡರು, ಬಂಧು-ಬಳಗದವರು ಹಾಗೂ ಗ್ರಾಮಸ್ಥರು, ಪಾಲ್ಗೊಂಡಿದ್ದರು.

Leave a Comment