ಪ್ರಗತಿಪರ ಚಿಂತಕರಿಗೆ ಸನಾತನ ಸಂಸ್ಥೆ ಟಾರ್ಗೆಟ್

ಶಿವಮೊಗ್ಗ.ಆ.30; ಪತ್ರಕರ್ತೆ ಗೌರಿ ಲಂಕೇಶ್, ಪಾನಸಾರೆ ಮುಂತಾದವರ ವಿಚಾರವಾದಿಗಳನ್ನ ಕೊಲೆ ಮಾಡುತ್ತಿರುವುದು ಸನಾತನ ಧರ್ಮವೆಂದು ಬಿಂಬಿಸಿ ಸನಾತನ ಸಂಸ್ಥೆಯನ್ನ ನಿಷೇಧಿಸಲು ಹುನ್ನಾರ ನಡೆಸಲಾಗುತ್ತಿದೆ ಎಂದು ಹಿಂದೂ ಸಂಘಟನೆಗಳ ಒಕ್ಕೂಟದ ರವಿ ಕಾಮತ್ ತಿಳಿಸಿದರು.
ಅವರು ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಸನಾತನ ಧರ್ಮದ ವಿರುದ್ದ ಇಲ್ಲಿಯವರೆಗೂ ಒಂದೇ ಒಂದು ಸಾಕ್ಷಿಯೂ ಸಿಗದೆ ಇದ್ದರೂ ಸಂಸ್ಥೆಯನ್ನೂ ನಿಷೇಧಿಸುವ ಕುರಿತು ಚಿಂತನೆ ಮಾಡುವುದು ಸಂಸ್ಥೆಯ ವಿರುದ್ದ ನಡೆಯುತ್ತಿರುವ ತೇಜೋವಧೆ. ಧರ್ಮದ ವಿಚಾರದ ಬಗ್ಗೆ ಮಾಹಿತಿ ನೀಡುವ ಮತ್ತು ಜಾಗೃತಿ ಕೆಲಸ ಮಾಡುವ ಉದ್ದೇಶದ ಹಿನ್ನಲೆಯಲ್ಲಿ ಉದ್ಭವಿಸಿರುವ ಸನಾತನ ಸಂಸ್ಥೆಯು ಇಂದು ಬೇರೆಯವರ ಕೆಂಗಣ್ಣಿಗೆ ಗುರಿಯಾಗಿದೆ ಎಂದು ಹೇಳಿದರು.
ಪ್ರಗತಿಪರ ಚಿಂತಕರಿಗೆ ಸನಾತನ ಸಂಸ್ಥೆ ಟಾರ್ಗೆಟ್ ಆಗಿದೆ. ಹಾಗಾಗಿ ಸನಾತನ ಸಂಸ್ಥೆಯ ಮೇಲೆ ಸುಳ್ಳು ಆರೋಪವನ್ನ ಹೋರಿಸುವವರ ಮೇಲೆ ಕಾನೂನು ಕ್ರಮವನ್ನ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಸುದ್ದಿಗೋಷ್ಟಿಯಲ್ಲಿ ಪರಿಸರ ರಮೇಶ್, ವಿಶ್ವನಾಥ್ ಮೊದಲಾದವರು ಉಪಸ್ಥಿತರಿದ್ದರು.

Leave a Comment