ಪ್ರಕೃತಿ ವಿಕೋಪ ಪರಿಹಾರ ಕೇಂದ್ರಗಳಿಗೆ ತೆರಳಿ ಅಗತ್ಯ ವಸ್ತುಗಳ ವಿತರಣೆ

ಮಂಗಳೂರು, ಆ.೧೪- ದ.ಕ ಜಿಲ್ಲೆಯಲ್ಲಿ ಸುಮಾರು ೪೫ ವರ್ಷಗಳ ಹಿಂದೆ ನಡೆದ ಸ್ವರೂಪದಲ್ಲಿ ಪ್ರಕೃತಿ ವಿಕೋಪದಿಂದ ಹಾಗು ಅತಿಯಾದ ಮಳೆಯಿಂದ ಮನೆ ಕಳೆದುಕೊಂಡು ಗಂಜಿ ಕೇಂದ್ರದಲ್ಲಿ ವಾಸಿಸುತ್ತಿರುವ ನಿರಾಶ್ರಿತ ಕೇಂದ್ರಗಳಿಗೆ ತೆರಳಿ ಅಗತ್ಯ ವಸ್ತುಗಳಾದ ತರಕಾರಿ, ಸಾಬೂನು, ಟೂತ್ ಪೇಸ್ಟ್, ಎಣ್ಣೆ ಮುಂತಾದ ದಿನಬಳಕೆಯ ಸಾಮಾನುಗಳನ್ನು ಬೆಳ್ತಂಗಡಿ ತಾಲೂಕಿನ ಕಿಲ್ಲೂರು ಸರಕಾರಿ ಶಾಲೆ, ಇಂದಬೆಟ್ಟು ದೇವನಾರಿ ಶಾಲೆ, ಕಾಜೂರು, ಕುಕ್ಕಾವು ಸರಕಾರಿ ಶಾಲೆ, ಚಾರ್ಮಾಡಿ ಕೊಳಂಬೆ ದೇವಸ್ಥಾನದ ಗಂಜಿ ಕೇಂದ್ರಗಳಿಗೆ ತೆರಳಿ ನಿರಾಶ್ರಿತರ ಕ್ಷೇಮ ವಿಚಾರಿಸಿದರು. ಅಗತ್ಯ ವಸ್ತುಗಳನ್ನು ಪೂರೈಸಿದರು.
ಈ ಸಂಧರ್ಭದಲ್ಲಿ ನಿರಾಶ್ರಿತರಿಗೆ ಉಂಟಾದ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನಕ್ಕೆ ತಂದು ಹೆಚ್ಚಿನ ಪರಿಹಾರ ಹಾಗು ಸಾಮಾಜಿಕ ಭದ್ರತೆಯ ಕಾರ್ಯಕ್ರಮ ಕೈಗೊಳ್ಳುವುದಾಗಿ, ಅಲ್ಲದೆ ಕೊಡಗು ಮಾದರಿಯ ಪರಿಹಾರ ಕಾರ್ಯಗಳನ್ನು ಜಾರಿಗೊಳಿಸುವುದಾಗಿ ಐವನ್ ಡಿಸೋಜರವರು ಭರವಸೆ ನೀಡಿದರು.

Leave a Comment