ಪ್ರಕೃತಿಯೊಂದಿಗೆ ನಮ್ಮ ಮನಸ್ಸು

ದೇಹವನ್ನು ಶುದ್ಧಿಮಾಡುತ್ತಿರುವ ಶಾಂತಿವನಯೋಗ
ಕೆ.ಆರ್.ಪೇಟೆ. ಫೆ.14- ಸದಾಕಾಲ ಒತ್ತಡದಿಂದ ಕಾರ್ಯನಿರ್ವಹಿಸುವ ನಮ್ಮ ಆರೋಗ್ಯವನ್ನು ಯಾವುದೇ ಔಷದಗಳಿಲ್ಲದೆ ಕೇವಲ ಯೋಗ, ಪಥ್ಯದ ಮೂಲಕ ದೈಹಿಕ ಮತ್ತು ಮಾನಸಿಕ ಒತ್ತಡವನ್ನು ಕಡಿಮೆಮಾಡಿ ದೇಹಕ್ಕೆ ನವ ಉಲ್ಲಾಸನೀಡುತ್ತಿರುವ ಧರ್ಮಸ್ಥಳ ಶಾಂತಿವನ ಯೋಗ ಮತ್ತ ಪ್ರಕೃತಿ ಚಿಕಿತ್ಸಾ ಕೇಂದ್ರ.
ನಮಗೆ ಈಗ ಹಣ ಆಸ್ತಿಗಿಂತ ಆರೋಗ್ಯ ಬಹುಮುಖ್ಯವಾಗಿಬೇಕಾಗಿರುವುದು ಆರೋಗ್ಯ ಮತ್ತು ಆತ್ಮ ಸಂತೋಷ ಈ ಈ ಎರಡುನ್ನು ನಮ್ಮಲ್ಲಿ ಹೆಚ್ಚಿಸಲು ಧರ್ಮಸ್ಥಳದ ಮತ್ತು ನೇತ್ರಾವತಿ ನದಿಯ ನಡುವೆ ಸುಂದರ ಪರಿಸರದಲ್ಲಿ ಇರುವ ಇರುವ ಎಸ್.ಡಿ.ಎಂ ಯೋಗ ಮತ್ತು ಪ್ರಕೃತಿ ಚಿಕಿತ್ಸಾಕೇಂದ್ರ ಕಾರ್ಯನಿರ್ವಹಿಸುತ್ತಿದ್ದು, ಪ್ರತಿವರ್ಷ ಸಾವಿರಾರು ಜನರು ಆರೋಗ್ಯವನ್ನು ವೃದ್ಧಿಸಿಕೊಳ್ಳಲು ಇಲ್ಲಿಗೇ ದೇಶ ವಿದೇಶಗಳಿಂದ ಬರುತ್ತಿದ್ದಾರೆ. ಹೆಚ್ಚಾಗಿ ಗೃಹಿಣಿಯರು, ಐ.ಟಿ.ಬಿ.ಟಿ ಕಂಪನಿಗಳಲ್ಲಿ ಹಾಗೂ ಒತ್ತಡದಲ್ಲಿ ಕೆಲಸಮಾಡುತ್ತಿರುವ ಸೇರಿದಂತೆ ಯುವಕರೂ ಸಹ ಹತ್ತುದಿನದ ಕೋರ್ಸಗೆ ಸೇರಿಕೊಂಡು ತಮ್ಮ ದೇಹವನ್ನು ಶುದ್ಧಿಕರಣಮಾಡಿಕೊಳ್ಳುವ ಜೊತೆಗೆ ಹತ್ತು ದಿನದಲ್ಲಿ ಕನಿಷ್ಠಿ 5 ರಿಂದ 10 ಕೆ.ಜಿ ತೂಕವನ್ನು ಕಡಿಮೆಮಾಡಿಕೊಳ್ಳುತ್ತಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಮಾನಸಿಕ ಒತ್ತಡವನ್ನು ಕಡಿಮೆಮಾಡಿಕೊಳ್ಳುವುದರಿಂದ ನಮ್ಮ ದೇಹದ ಆರೋಗ್ಯ ಹೆಚ್ಚುವ ಜೊತೆಗೆ ಮನಸ್ಸು ಉಲ್ಲಾಸಗೊಂಡು ಇನ್ನು ಹೆಚ್ಚುಕಾಲು ಜೀವಿಸಬೇಕು ಎನ್ನು ಆಸೆಯನ್ನು ಶಾಂತಿವನ ಹೆಚ್ಚಿಸುವಂತೆ ಕೆಲಸಮಾಡುತ್ತಿದೆ.
ವಯಸ್ಸಿನ ಅಂತರ ಇಲ್ಲ
ಬಹುತೇಕರು 50 ರಿಂದ 60 ವರ್ಷ ವಯಸ್ಸಾದ ನಂತರ ಆರೋಗ್ಯವನ್ನು ಕಾಪಾಡಿಕೊಳ್ಳಲು ಆಯುರ್ವೆದ ಸೇರಿದಂತೆ ವಿವಿಧ ಚಕಿತ್ಸೆಗೆ ಹೋಗುತ್ತಾರೆ ಎಂದು ಕೆಲವರು ಭಾವಿಸಿದ್ದಾರೆ. ಆದರೆ ಶಾಂತಿವನದಲ್ಲಿ 20 ವರ್ಷದ ವಿದ್ಯಾರ್ಥಿಗಳು ತಮ್ಮ ಒತ್ತಡವನ್ನು ಕಡಿಮೆಮಾಡಿಕೊಳ್ಳುವ ಸಲುವಾಗಿ ಪ್ರತಿ ವರ್ಷ ಇಲ್ಲಿಗೆ ಬಂದು ಹತ್ತುದಿನಗಳ ಕಾಲ ಇದ್ದು ಚಿಕಿತ್ಸೆಪಡೆದುಕೊಳ್ಳುತ್ತಾರೆ. ಇದರ ಜೊತೆಗೆ ಉದ್ಯೋಗಿಗಳು ಮತ್ತು 60 ರಿಂದ 70 ವರ್ಷ ಇಳಿ ವಯಸ್ಸಿನ ವೃದ್ದ ದಂಪತಿಗಳು ಸಹ ಇಲ್ಲಿಗೆ ಬಂದು ಚಿಕಿತ್ಸೆ ಪಡೆದುಕೊಂಡು ತಮ್ಮ ಆಯಸ್ಸನ್ನು ಮತ್ತು ಆರೋಗ್ಯವನ್ನು ಹೆಚ್ಚಿಸಿಕೊಂಡು ಹೋಗುತ್ತಿದ್ದಾರೆ.
ನಗುಮುಗದ ಸೇವೆ
ಶಾಂತಿವನ ಕೇಂದ್ರದ ಪ್ರವೇಶಮಾಡಿದರೆ ನಮಗೆ ಅಲ್ಲಿನ ಸಿಬ್ಬಂದಿಗಳು ಮತ್ತು ವೈಧ್ಯರು ನಗು ಮುಖದೊಂದಿಗೆ ಸ್ವಾಗತಿಸುವಾಗಲೆ ನಮಗೆ ಇಲ್ಲಿ ಆರೋಗ್ಯ ವೃದ್ಧಿಯಾಗುತ್ತದೆ ಎಂಬ ವಿಶ್ವಾಸ ಮೂಡುತ್ತಿದೆ. ಜೊತೆಗೆ ಇಲ್ಲಿನ ಎಲ್ಲಾ ಸಿಬ್ಬಂದಿಗಳು ನಮ್ಮ ಮನೆಯವರಂತೆ ಪ್ರೀತಿ ವಿಶ್ವಾಸದಿಂದ ನಮಗೆ ಸೇವೆ ನೀಡುವುದರಿಂದ ಅವರೂ ನಮ್ಮವರೇ ನಮ್ಮ ಆರೋಗ್ಯ ರಕ್ಷಣೆಗೆ ನಿಂತಿರುವವರು ನಾವು ಈಗಲೂ ನಮ್ಮ ಮನೆಯಲ್ಲಿಯೇ ಇದ್ದೇವೆ ಎಂಬ ಭಾವನೆ ಎಲ್ಲರಿಗೂ ಬರುತ್ತಿದೆ. ಇಲ್ಲಿ ಕಾರ್ಯ ನಿರ್ವಹಿಸುತ್ತಿರುವ 40 ವೈದ್ಯರು 200 ಕ್ಕೂ ಹೆಚ್ಚಿನ ಸಿಬ್ಬಂದಿಗಳು ಸದಾಕಾಲ ಶಾಂತಿವನಕ್ಕೆ ಸೇರುವವರೊಂದಿಗೆ ವಿಶ್ವಾಸದಿಂದ ಇದ್ದು ಜಾಗೃತಿ ವಹಿಸುತ್ತಿದ್ದಾರೆ.
ಸ್ವಚ್ಚ ಸುಂದರ
ಪ್ರಕೃತಿಯ ಸುಂದರ ಪರಿಸದ ಮಡಿಲಲ್ಲಿರುವ ಕೇಂದ್ರವನ್ನು ಸದಾಕಾಲ ಸ್ವಚ್ಚವಾಗಿಟ್ಟುಕೊಂಡಿರುವುದು ಇಲಿನ ವಿಶೇಷವಾಗಿದೆ. ಶೌಚಾಲಯ ಸೇರಿದಂತೆ ಪ್ರತಿಯೊಂದು ವಿಭಾಗವನ್ನು ಸ್ವಚ್ಚವಾಗಿಟ್ಟುಕೊಳ್ಳುವ ಜೊತೆಗೆ ಕೇಂದ್ರ ಒಳಭಾಗ ಮತ್ತು ಸುತ್ತಲು ಇರುವ ಸ್ಥಳಗಳಲ್ಲಿ ಹಚ್ಚಹಸಿರಿನ ಹೊದಿಕೆಯನ್ನು ಹೊದಿಸಿರುವ ಜೊತೆಗೆ ವಿವಿಧ ಬಗೆಯ ಗಿಡ ಮತ್ತು ಮರಗಳನ್ನು ಬೆಳೆಸಿದ್ದು ಇದರ ನಡುವೆ ಒಂದು ಸುತ್ತಿಹಾಕಿದರೆ ಸಾಕು ನಮ್ಮ ಉಸಿರಾಟ ಉತ್ತಮವಾಗಿ ಮನಸ್ಸು ಉಲ್ಲಾಸಗೊಳ್ಳತ್ತದೆ.
ಪೌಷ್ಠಿಕಾಂಷಯುಕ್ತ ಆಹಾರ
ನಾವುಗಳು ಎಣ್ಣೆ ಪದಾರ್ಥಗಳು ಸೇರಿದಂತೆ ಆರೋಗ್ಯವನ್ನು ಹಾಳುಮಾಡುವ ಆಹಾರವನ್ನು ಸೇವನೆಮಾಡುವುದರಿಂದ ದೇಹದಲ್ಲಿ ಬೊಜ್ಜು ಚೆನ್ನಾಗಿ ಬೆಳೆದಿರುತ್ತದೆ. ಇಲ್ಲಿ ನಮ್ಮ ದೇಹಕ್ಕೆ ಯಾವುದೇ ತೊಂದರೆ ನೀಡದ ಆರೋಗ್ಯವನ್ನು ವೃದ್ಧಿಸುವ ಮಜ್ಜಿಗೆ, ಬಾರ್ಲಿಗಂಜಿ, ರಾಗಿಗಂಜಿ, ಹಸಿ ತರಕಾರಿ, ಬೇಯಿಸಿದ ತರಕಾರಿ, ಚಪಾತಿ ಮತ್ತಿತರ ಆಹಾರವನ್ನು ನೀಡುತ್ತಾರೆ. ಈ ಕಾರಣದಿಂದ ನಮ್ಮ ದೇಹ ಬೊಜ್ಜನ್ನು ಕಡಿಮೆಮಾಡಿಕೊಂಡು ನವ ಚೈತನ್ಯವನ್ನು ಪಡೆದುಕೊಳ್ಳುತ್ತಿದೆ.
ಯೋಗ ಮತ್ತು ಪ್ರಕೃತಿ ಚಿಕಿತ್ಸೆ
ಶಾಂತಿವನದಲ್ಲಿ ಯಾವುದೇ ಔಷಧಿಯನ್ನು ನೀಡುವುದಿಲ್ಲ. ಆದರೆ ದಿನಕ್ಕೆ ಎರಡು ಸಾರಿ ಯೋಗವನ್ನು ಮಾಡಿಸುವ ಮೂಲಕ ದೈಹಿಕ ಆರೋಗ್ಯ ಕಾಪಾಡುವ ಜೊತೆಗೆ ಮನಸ್ಸಿನ ಒತ್ತಡವನ್ನು ಕಡಿಮೆಮಾಡಲಾಗುತ್ತದೆ. ಜೊತೆಗೆ ವಮನ ಮತ್ತು ಎನಿಮ ನೀಡುವ ಮೂಲಕ ದೇಹದ ಒಳಭಾಗನ್ನು ಶುದ್ಧಗೊಳಿಸಲಾಗುತ್ತದೆ. ಜೊತೆಗೆ ಜೆ.ಟಿ.ಸಿ.ಸಿ.ಎ, ಮತ್ತಿತರು ನೀರಿನ ಚಿಕಿತ್ಸೆ, ಮಡ್ ಪ್ಯಾಕ್, ಹರಿಶಿಣ ಪ್ಯಾಕ್, ಆಯಿಲ್ ಮಸಾಜ್ ಮಾಡುವ ಮೂಲಕ ದೇಹದ ಹೊರಗಿನ ಬೊಜ್ಜನ್ನು ಕಡಿಮೆಮಾಡಿಸಲಾಗುತ್ತದೆ.
ಒಟ್ಟಾರೆ ಶಾಂತಿವನದಲ್ಲಿರುವ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕೇಂದ್ರ ನಮಗೆ ಕೇವಲ ಹತ್ತು ದಿನಗಳಲ್ಲಿ ಮಾನಸಿಕ ಒತ್ತಡವನ್ನು ಸಂಪೂರ್ಣಕಡಿಮೆ ಮಾಡುವ ಜೊತೆಗೆ ದೈಹಿಕ ಆರೋಗ್ಯವನ್ನು ಕನಿಷ್ಠ ಎರಡು ವರ್ಷಗಳಷ್ಟು ಹಿಂದಕ್ಕೆ ತೆಗೆದುಕೊಂಡು ಆಯುಷನ್ನು ಹೆಚ್ಚಳಮಾಡುತ್ತಿದೆ. ಒಮ್ಮೆ ಇಲ್ಲಿಗೆ ಬಂದರವರು ಮತ್ತೆ ಮತ್ತೆ ಬರುವುದು ಖಚಿತ.

Leave a Comment