ಪ್ರಕರಣ ದಾಖಲಾದ 34 ವರ್ಷಗಳ ನಂತರ ಆರೋಪಿ ಬಂಧನ!

ಬೆಳಗಾವಿ, ಡಿ 6- ಅಕ್ರಮ ಶ್ರೀಗಂಧ ಮಾರಾಟ ಪ್ರಕರಣದಲ್ಲಿ ಆರೋಪಿಯಾಗಿದ್ದಾತನನ್ನು ಪ್ರಕರಣ ದಾಖಲಾದ 34 ವರ್ಷಗಳ ನಂತರ ಪೊಲೀಸರು ಬಂಧಿಸಿದ  ಘಟನೆ ಜಿಲ್ಲೆಯ ಕಿತ್ತೂರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಚಂದ್ರಕಾಂತ ಲಕ್ಷ್ಮಣ ಸೂರ್ಯವಂಶಿ (61) ಎಂಬಾತನೇ ಬಂಧಿತ ಆರೋಪಿ. 1984 ರಲ್ಲಿ ಈತ ಅಕ್ರಮ ಶ್ರೀಗಂಧ ಮಾರಾಟ ಪ್ರಕರಣದಲ್ಲಿ ಆರೋಪಿತನಾಗಿದ್ದ.
ಈತನ ವಿರುದ್ಧ ಬೈಲಹೊಂಗಲ ನ್ಯಾಯಾಲಯ ವಾರಂಟ್ ಹೊರಡಿಸಿತ್ತು.
ಮಹಾರಾಷ್ಟ್ರದ ಸಾಂಗ್ಲಿಯ ಮಿಲ್ ಒಂದರಲ್ಲಿ ಕೆಲಸಕ್ಕಿದ್ದ ಈತನನ್ನು ನಿನ್ನೆ ರಾತ್ರಿ ಕೆಲಸದಿಂದ ಮರಳುವ ವೇಳೆಯಲ್ಲಿ ಕಿತ್ತೂರ ಠಾಣೆ ಪೊಲೀಸರು ಬಂಧಿಸಿ ಕರೆತಂದು ನ್ಯಾಯಾಲಯದೆದುರು ಹಾಜರುಪಡಿಸಿದ್ದಾರೆ.

Leave a Comment