ಪ್ಯಾರೀಸ್ ಒಪ್ಪಂದ….. ಹಿಮಬಂಡೆ ಹೋಳು

ಅಂಟಾರ್ಟಿಕಾದ ಬೃಹತ್ ಹಿಮಬಂಡೆ ಹೋಳಾಗುವ ಸ್ಥಿತಿ ತಲುಪಿದೆ ಎಂಬ ವರದಿ, ತಾಪಮಾನ ಏರಿಕೆ ತಡೆ ಯುತ್ನದಲ್ಲಿರುವ ರಾಷ್ಟ್ರಗಳಿಗೆ ಎಚ್ಚರಿಕೆಯ ಘಂಟೆಯಾಗಿದೆ.

* ಜೀವರಾಶಿ ಉಳಿಯಲು ಜಾಗತಿಕ ತಾಪಮಾನ ಏರಿಕೆಗೆ ತಡೆಯೊಡ್ಡದೆ ಅನ್ಯಮಾರ್ಗವಿಲ್ಲ ಎಂಬ ಜಾಗತಿಕ ಅರಿವೇ ಪ್ಯಾರೀಸ್ ಹವಾಮಾನ ಒಪ್ಪಂದಕ್ಕೆ ಪ್ರೇರಕ.

* ಒಪ್ಪಂದಕ್ಕೆ 200 ರಾಷ್ಟ್ರಗಳು ಸಹಿಹಾಕಿವೆ. ಆದರೆ ಜಾರಿಯ ಬಗ್ಗೆ ಮೀನಾ-ಮೇಷ ಎಣಿಸುತ್ತಿರುವ ರಾಷ್ಟ್ರಗಳಿಗೆ ಹಿಮಬಂಡೆಗಳು ಕರಗುತ್ತಿರುವುದು, ಅಂಟಾರ್ಟಿಕಾ ಹಿಮಬಂಡೆ ಬಿರುಕು, ಎಚ್ಚರಿಕೆಯ ಘಂಟೆಯಾಗಿದೆ.

* ಭೂಮಿಯ ಮೇಲೆ ಬಿದ್ದ ಬಹುಪಾಲು ಸೂರ್ಯನ ಕಿರಣಗಳನ್ನು ಭೂಮಿ ಹೀರಿಕೊಳ್ಳುತ್ತವೆ. ಉಳಿದ ಕಿರಣಗಳು ಪ್ರತಿಫಲನಗೊಂಡು ಬಾಹ್ಯಾಕಾಶಕ್ಕೆ ಹೊರಟ ಕಿರಣಗಳನ್ನು ಹಸಿರುಮನೆ ಅನಿಲಗಳ ಪದರ ತಡೆದು ಕಿರಣಗಳು ಮತ್ತೆ ಭೂಮಿಗೆ ಕಳುಹಿಸುತ್ತವೆ. ಇದು ಭೂ ಕಾವಾಗಲು ಕಾರಣ. ಹಸಿರುಮನೆ ಅನಿಲಗಳಲ್ಲಿ ಇಂಗಾಲಾವೇ ಪ್ರಮುಖ ಮತ್ತು ಅಪಾಯಕಾರಿ.

ಜಾಗತಿಕ ತಾಪಮಾನದ ಬಿಸಿ ಅಂಟಾರ್ಟಿಕಾದ `ಲಾರ್ಸೆನ್‌ಸಿ ಹೆಸರಿನ ಹಿಮಬಂಡೆಯಲ್ಲಿ ಬಿರುಕು ಮೂಡಿದ್ದು , ಈ ಬಿರುಕು ಮೇಗ ಪಡೆದುಕೊಂಡಿದೆ ಎಂದು ವರದಿಯಾಗಿದೆ. 5-6 ವರ್ಷಗಳ ಹಿಂದೆ ಸುಮಾರು 50 ಮೀಟರ್ ನಷ್ಟಿದ್ದ ಬಿರುಕು ಈಗ 500 ಮೀಟರ್‌ಗೆ ಹಬ್ಬಿದೆ.

ಜಾಗತಿಕ ತಾಪಮಾನ ಏರಿಕೆಯಿಂದ ಹಿಮಬಂಡೆಗಳು ಕರಗುತ್ತಿರುವ ಸುದ್ದಿಗಳು ಬರುತ್ತಿರುವ ಸಂದರ್ಭದಲ್ಲಿಯೇ ಅಂಟಾರ್ಟಿಕಾ ಹಿಮಬಂಡೆ ಬಿರುಕು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಇದು ಹೋಳಾದರೆ ವಿಶಾಲ ಪ್ರದೇಶವನ್ನು ವ್ಯಾಪಿಸಿ ಕೊಳ್ಳುತ್ತದೆ. ಇದರ ಕರುಗುವಿಕೆಯಿಂದ ಸಮುದ್ರ ಮಟ್ಟದಲ್ಲಿ ಏರಿಕೆಯಾಗಿ, ಭೂ ಭಾಗ ಮುಳುಗಡೆಯಾಗುತ್ತದೆ. ತಾಪಮಾನ ಏರಿಕೆಯಿಂದ ಹಿಮಬಂಡೆಗಳು ಕರಗುವುದರ ಜೊತೆಗೆ ಬಿರುಗಾಳಿ, ಭಾರಿ ಮಳೆ, ಪ್ರವಾಹ, ಜೀವ ಪರಿಸರದಲ್ಲಿ ಏರುಪೇರು ಇತ್ಯಾದಿ ಪರಿಣಾಮಗಳು ಎದುರಾಗುತ್ತವೆ.

ತಾಪಮಾನ ಏರಿಕೆಗೆ ಕಾರಣಗಳೇನು ಅದರ ಪ್ರತಿಕೂಲ ಪರಿಣಾಮಗಳು ಏನು ಎಂಬುದು ಗೊತ್ತಿದ್ದರೂ ಅದನ್ನು ತಡೆಯಲು ಸಾಧ್ಯವಾಗದ ಹಿನ್ನೆಲೆಯಲ್ಲಿಯೇ, ತಾಪಮಾನ ಏರಿಕೆ ಚರ್ಚೆ. ಚರ್ಚೆಯ ಮಟ್ಟದಲ್ಲೇ ಉಳಿದಿತ್ತು. ಆದರೆ ಪ್ಯಾರೀಸ್ ಹವಾಮಾನ ಒಪ್ಪಂದ ತಾಪಮಾನ ಏರಿಕೆ ತಡೆಗೆ ಚಾಲನೆ ನೀಡಿದೆ.

ಪ್ಯಾರಿಸ್ ಒಪ್ಪಂದ

ತಾಪಮಾನ ಏರಿಕೆಯನ್ನು ತಡೆಗಟ್ಟಲು ಜಾಗತಿಕವಾಗಿ 200 ರಾಷ್ಟ್ರಗಳು ಪ್ಯಾರೀಸ್‌ನಲ್ಲಿ ಒಪ್ಪಂದಕ್ಕೆ ಬಂದವು. ತಾಪಮಾನ ಏರಿಕೆಯನ್ನು ತಡೆಗಟ್ಟದಿದ್ದರೆ ಉಳಿಗಾಲವಿಲ್ಲ ಎಂಬ ಆತಂಕ ಜಾಗತಿಕವಾಗಿ ಕಾಡಿದ್ದರಿಂದಲೇ ಹಲವು ಬಾರಿ ಈ ಕುರಿತ ಚರ್ಚೆಗಳುನಡೆದು ಅಂತಿಮವಾಗಿ ಪ್ಯಾರೀಸ್‌ನಲ್ಲಿ ನ‌ಡೆದ ಹವಾಮಾನ ಶೃಂಗದಲ್ಲಿ ತಾಪಮಾನ ಏರಿಕೆ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಒಂದು ಒಪ್ಪಂದಕ್ಕೆ ಬರಲಾಯಿತು. ಅಮೆರಿಕಾ, ಚೀನಾ ಈ ಒಪ್ಪಂದಕ್ಕೆ ಸಹಿ ಹಾಕಿರುವುದು ವಿಶೇಷ. ಇದಕ್ಕೆ ಸಹಿಸಿ ಹಾಕಿದ ಅಧ್ಯಕ್ಷ ಬರಾಕ್ ಒಬಾಮಾ ಇದರಿಂದ ಅಮೆರಿಕಾದಲ್ಲಿ ವಿರೋಧವನ್ನು ಎದುರಿಸಿದ್ದರು.

ಕೈಗಾರಿಕಾ ಪೂರ್ವದಲ್ಲಿ ಜಾಗತಿಕ ತಾಪಮಾನ ಎಷ್ಟಿತ್ತೊ, ಅದಕ್ಕಿಂತ 2 ಡಿಗ್ರಿ ಸೆಲ್ಸೀಯಸ್‌ನಷ್ಟು ಮಾತ್ರ ತಾಪಮಾನ ಏರಿಕೆಗೆ ಅವಕಾಶ ಕೊಡಬೇಕು ಎಂಬುದು ಈ ಒಪ್ಪಂದ ಒಟ್ಟಾರೆ ತಿರುಳು. ಭಾರತ ಸೇರಿದಂತೆ 200 ದೇಶಗಳು ಈ ಒಪ್ಪಂದಕ್ಕೆ ಸಹಿ ಹಾಕಿವೆ. ಇದು 2020 ರಿದಂ ಜಾರಿಗೆ ಬರುತ್ತದೆ.

ಸಾಧ್ಯತೆ ಹೇಗೆ?

ಕೈಗಾರಿಕಾ ಕ್ರಾಂತಿಗೆ ಪೂರ್ವದಲ್ಲಿದ್ದ ತಾಪಮಾನ 13.7 ಡಿಗ್ರಿ ಸೆಲ್ಸಿಯಸ್ ಎಂದು ಅಂದಾಜಿಸಲಾಗಿದೆ. ಇದರ ಮೇಲೆ 2 ಡಿಗ್ರಿ ತಾಪಮಾನ ಏರಿಕೆಗೆ ಅವಕಾಶ ಇದೆ. ಆದರೆ ಈಗಾಗಲೇ ಜಾಗತಿಕ ಸರಾಸರಿಯಂತೆ ಒಂದು ಡಿಗ್ರಿ ಸೆಲ್ಸಿಯಸ್ ತಾಪಮಾನ ಏರಿಕೆಯಾಗಿದೆ. ಗುರಿಯ ಮಿತಿಗೆ ಇನ್ನೂ ಉಳಿದಿರುವುದು 1 ಡಿಗ್ರಿ ಸೆಲ್ಸಿಯಸ್ ಮಾತ್ರ!

ಕೈಗಾರಿಕಾಭಿವೃದ್ಧಿ ದೇಶಗಳ ಆರ್ಥಿಕಾಭಿವೃದ್ಧಿಯ ಬಹುಮುಖ್ಯ ಭಾಗ. ಈ ನೀತಿಯನ್ನು ಅಭಿವೃದ್ಧಿ ಹೊಂದಿರುವ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳು ತಮ್ಮ ನೀತಿಯನ್ನಾಗಿಸಿಕೊಂಡಿವೆ. ಭಾರತದಲ್ಲಿಯೂ ಮೇಕ್ ಇನ್ ಇಂಡಿಯಾ ಮೇಡ್ ಇನ್ ಇಂಡಿಯಾ ಇದಕ್ಕೆ ಹೆಚ್ಚಿನ ಒತ್ತು ನೀಡಿದೆ. ಕೈಗಾರಿಕಾ ಅಭಿವೃದ್ಧಿಗೆ ಶಕ್ತಿ ಮೂಲಗಳ ಬಳಕೆ ಅಗತ್ಯ. ಕಲ್ಲಿದ್ದಿಲು, ತೈಲ, ಇತ್ಯಾದಿ ಪಳೆಯುಳಿಕೆ ಇಂಧನಗಳನ್ನು ಉರಿಸಿ ಶಕ್ತಿ ಉತ್ಪಾದನೆ ಮಾಡುವುದನ್ನು ಎಲ್ಲಾ ದೇಶಗಳು ಅನುಸರಿಸಿಕೊಂಡು ಬಂದಿವೆ.

ಇಂಗಾಲಾಮ್ಲ

ತಾಪಮಾನ ಏರಿಕೆಗೆ ಕಾರಣವಾಗಿರುವ ಇಂಗಾಲಾಮ್ಲ ವಾತಾವರಣಕ್ಕೆ ಬಿಡುಗಡೆಯಾಗುವುದೇ ಶಕ್ತಿಮೂಲಗಳನ್ನು ಉರಿಸುವುದರಿಂದ. ಪೆಟ್ರೋಲಿಯಂ ಉತ್ಪನ್ನಗಳು, ಕಲ್ಲಿದ್ದಿಲು ಸಾವಯವ ಘನ ವಸ್ತುಗಳನ್ನು ಉರಿಸುವುದರಿಂದ ಆಗುವ ರಾಸಾಯನಿಕ ಕ್ರಿಯೆಯಲ್ಲಿ ವಾತಾವರಣಕ್ಕೆ ಇಂಗಾಲಾಮ್ಲ ಸೇರ್ಪಡೆಯಾಗುತ್ತದೆ. ಅಪಾಯಕಾರಿ ಇಂಗಾಲಾಮ್ಲ ವಾತಾವರಣಕ್ಕೆ ಸೇರದಿರಲು ಸಿಮೆಂಟ್, ಕಬ್ಬಿಣ, ಉಕ್ಕು ತಯಾರಿಕಾ ಕೈಗಾರಿಕೆಗಳನ್ನು ಮುಚ್ಚಬೇಕು. ತಾಜ್ಯ ದಹನ ರಾಸಾಯನಿಕ ವಸ್ತುಗಳ ಬಳಕೆ ನಿಲ್ಲಬೇಕು. ಇದು ಎಷ್ಟು ಸಾಧ್ಯ?

Leave a Comment