ಪ್ಯಾಡ್ ಮ್ಯಾನ್ ಗೆ ಪಾಕ್ ನಿಷೇಧ

ನವದೆಹಲಿ ಫೆ ೧೨- ಬಾಲಿವುಡ್ ನಟ ಅಕ್ಷಯ್ ಕುಮಾರ್ ನಟನೆಯ ” ಪ್ಯಾಡ್ ಮ್ಯಾನ್ ಚಿತ್ರಕ್ಕೆ ಪಾಕಿಸ್ತಾನ ನಿಷೇಧ ಹೇರಿದ ಬೆನ್ನಲ್ಲೆ ಅದನ್ನು ವಿರೋಧಿಸಿ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಪ್ಯಾಡ್ ಮ್ಯಾನ್ ಚಿತ್ರದ ನಿಷೇಧ ಬಗ್ಗೆ ಪಾಕಿಸ್ತಾನ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿರುವುದು ದೊಡ್ಡ ಸುದ್ಧಿಯಾಗಿದೆ. ಅಗ್ಗದ ದರದ ಸ್ಯಾನಿಟರ್ ಪ್ಯಾಡ್ ತಯಾರಿಸುವ ಯುವಕನ ಸುತ್ತ ನಡೆಯುವ ಈ ಚಿತ್ರ ಮಹಿಳೆಯರ ಮೂಲಭೂತ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುತ್ತದೆ. ಇಂತಹ ಉತ್ತಮ ಚಿತ್ರವನ್ನು ನಿಷೇಧಿಸುವ ಪಾಕ್ ಸರ್ಕಾರದ ನಡೆ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಚರ್ಚೆ ಕೂಡ ನಡೆದಿದೆ.
ಐ ಸಪೋರ್ಟ್ ಪ್ಯಾಡ್ ಮ್ಯಾನ್ ಎಂಬ ಹ್ಯಾಶ್ ಟ್ಯಾಗ್‌ನೊಂದಿಗೆ ಜಾಲ ತಾಣಗಳಲ್ಲಿ ಪಾಕ್ ಸರ್ಕಾರಕ್ಕೆ ಛೀಮಾರಿ ಹಾಕಲಾಗಿದೆ.

Leave a Comment