ಪೌಷ್ಠಿಕ ಆಹಾರ ಸೇವನೆಯಿಂದ ಉತ್ತಮ ಆರೋಗ್ಯ

ಚಾಮರಾಜನಗರ ಸೆ.10- ಪೌಷ್ಠಿಕ ಆಹಾರಗಳನ್ನು ಸೇವಿಸುವುದರಿಂದ ಆರೋಗ್ಯವು ಉತ್ತಮವಾಗಿರುತ್ತದೆ ಜೊತೆಗೆ ರೋಗಗಳಿಂದ ದೂರವಿರಬಹುದು ಎಂದು ಚಾಮರಾಜನಗರ ಜಿಲ್ಲಾ ಕಾನೂನುಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿಗಳಾದ ಸಿ.ಜಿ. ವಿಶಾಲಾಕ್ಷಿ ತಿಳಿಸಿದರು.
ನಗರದ ಸರ್ಕಾರಿ ಮೆಟ್ರಿಕ್ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಆರೋಗ್ಯ ಮತ್ತು ಕುಟುಂಬ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಸಂಯುಕ್ತಾಶ್ರಯದಲ್ಲಿ ನಡೆದ “ ವಿಶ್ವ ಪೌಷ್ಠಿಕತೆ ವಾರ” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಪ್ರತಿಯೊಬ್ಬ ಮನುಷ್ಯನಿಗೆ ಪೌಷ್ಠಿಕ ಆಹಾರ ಅವಶ್ಯಕ, ಪೌಷ್ಠಿಕ ಅಹಾರವನ್ನು ಸೇವನೆ ಮಾಡುವುದರಿಂದ ಆರೋಗ್ಯವು ಉತ್ತಮ ವಾಗಿರುತ್ತದೆ. ಹದಿಹರೆಯದ ವಯಸ್ಸಿನಲ್ಲಿ ರಕ್ತದಕೊರೆತೆಗಳು ಕಂಡುಬರಲು ಸರಿಯಾದ ಸಮಯದಲ್ಲಿ ಆಹಾರ ಸ್ವೀಕರಿಸದೆ ಇರುವುದೆ ಕಾರಣ, ಸರಿಯಾದ ಸಮಯಕ್ಕೆ ಪೌಷ್ಠಿಕ ಆಹಾರಗಳನ್ನು ಪಡೆದು ಕೊಂಡರೆ ಆರೋಗ್ಯ ವಂತರಾಗಬಹುದು ಎಂದು ತಿಳಿಸಿದರು.
ರಾಜ್ಯ ಸರ್ಕಾರವೂ ಸರ್ಕಾರಿ ವಸತಿ ನಿಲಯಗಳಿಗೆ ಪೌಷ್ಠಿಕ ಆಹಾರಗಳಾದ ರಾಗಿ, ಅಕ್ಕಿ, ಗೋಧಿ, ಮೊಟ್ಟೆ, ಹಾಲು ಇನ್ನು ಮುಂತಾದ ಪದಾರ್ಥಗಳನ್ನು ನೀಡುತ್ತ ಬಂದಿದೆ ವಿದ್ಯಾರ್ಥಿಗಳು ಇಂತಹ ಅಹಾರಗಳನ್ನು ಸೇವಿಸುವುದರಿಂದ ಪೌಷ್ಠಿಕತೆ ಹೆಚ್ಚುತದೆ ಎಂದು ವಿಶಾಲಾಕ್ಷಿ ಅವರು ತಿಳಿಸಿದರು.
ಮೆಡಿಕಲ್‍ಕಾಲೇಜಿನ ಆಸಿಸ್ಟೆಂಟ್ ಪ್ರೊಫೆಸರ್ ಡಾ.ಗಿರೀಶ್ ಮಾತನಾಡಿ ತರಕಾರಿ ಮತ್ತು ಸೊಪ್ಪುಗಳನ್ನು ತಿನ್ನುವುದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಇತ್ತಿಚಿನ ದಿನಗಳಲ್ಲಿ ಆಹಾರದಲ್ಲಿ ಪೌಷ್ಠಿಕ ಆಹಾರಗಳನ್ನು ಕೆಲವರು ಸೇವಿಸದೆ ಇರುವುದು ವಿಷಾದವಾಗುತ್ತದೆ. ಪೌಷ್ಠಿಕ ಅಹಾರಗಳನ್ನು ಸೇವಿಸುವುದರಿಂದ ಮನುಷ್ಯನ ದೇಹದಲ್ಲಿ ಕಬ್ಬಿಣದ ಅಂಶಗಳು ಇರುತ್ತದೆ. ಇದರಿಂದ ಶಕ್ತಿವಂತರಾಗಬಹುದು ಇಂದಿನ ಕಾಲದಲ್ಲಿ ರಾಗಿಮುದ್ದೆ, ಜೋಳದಮುದ್ದೆ, ಗೋಧಿರೋಟ್ಟಿ, ಇನ್ನು ಅಲವಾರು ಪೌಷ್ಠಿಕ ಅಹಾರವನ್ನು ಸೇವನೆ ಮಾಡುತ್ತಿದ್ದರು. ಈಗ ಗೋಬಿಮಂಜರಿ, ನ್ಯೂಡಲ್ಸ್, ಇಂತಹ ಅಹಾರಗಳನ್ನು ಸೇವಿಸುವವರು ಹೆಚ್ಚು ಜನರಿದ್ದಾರೆ ಇದರಿಂದ ಪೌಷ್ಠಿಕಾಂಶ ಸಿಗುವುದಿಲ್ಲ ಎಂದು ತಿಳಿಸಿದರು.
ಪ್ರತಿಯೊಬ್ಬ ವಿದ್ಯಾರ್ಥಿಗಳು ಬೆಳಗ್ಗೆ ಸಮಯಕ್ಕೆ ಸರಿಯಾಗಿ ತಿಂಡಿ ಮತ್ತು ಊಟವನ್ನು ಮಾಡಬೇಕು ಇಲ್ಲದಿದ್ದರೆ ಗ್ಯಾಸ್ರ್ಟ್ಟಿಕ್ ನಿಮ್ಮನ್ನು ಆವರಿಸುತ್ತದೆ ಇದರಿಂದ ಕಾಯಿಲೆಗಳು ಬರುವ ಸಾಧ್ಯತೆ ಇರುತ್ತದೆ. ಪ್ರತಿ ಆರು ತಿಂಗಳಿಗೊಂಮ್ಮೆ ಜಂತುಹುಳು ನಿವಾರಣೆ ಮಾತ್ರೆಯನ್ನು ಸೇವಿಸಬೇಕು. ಎಂದು ತಿಳಿಸಿದರು.
ಜಿಲ್ಲಾ ವಕೀಲ ಸಂಘದ ಅಧ್ಯಕ್ಷರಾದ ಉಮ್ಮತ್ತೂರು ಇಂದುಶೇಖರ್ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು. ಕಾರ್ಯದರ್ಶಿ ಅರ್.ಅರುಣ್‍ಕುಮಾರ್, ಜಂಟಿ ಕಾರ್ಯದರ್ಶಿ ದಲಿತರಾಜು, ಜಿಲ್ಲಾ ಪ್ರಭಾರ ಅರೋಗ್ಯ ಇಲಾಖೆ ಶಿಕ್ಷಣಾಧಿಕಾರಿ ಡಾ. ನಾರಾಯಣಸ್ವಾಮಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕಸ ನಿರ್ದೇಶಕರಾದ ಜಯಕಾಂತ, ಮೇಲ್ವಿಚಾರಕಿ ಶಿಶು ಅಭಿವೃದ್ದಿ ಯೋಜನಾಧಿಕಾರಿ ಶಿವಲೀಲಾ, ವಿದ್ಯಾರ್ಥಿನಿಯಲದ ಮೇಲ್ವಿಚಾರಕಿ ಶಿವಮ್ಮ, ಬಾಲನ್ಯಾಯ ಮಂಡಲಿ ಸದಸ್ಯರಾದ ಟಿ.ಜೆ. ಸುರೇಶ್ ಹಾಗೂ ಇನ್ನು ಮುಂತಾದವರು ಹಾಜರಿದ್ದರು.

Leave a Comment