ಪೌರ ಕಾರ್ಮಿಕರಿಗೆ 17 ಸಾವಿರ ರೂ. ವೇತನ : ಜಾರ್ಜ್ ಭರವಸೆ

ಬೆಂಗಳೂರು, ಜೂ. ೧೯: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿರುವ ಪೌರಕಾರ್ಮಿಕರಿಗೆ ಕನಿಷ್ಠ ೧೭ ಸಾವಿರ ರೂ.ವೇತನ ನೀಡಲು ಸರ್ಕಾರ ಉದ್ದೇಶಿಸಿದ್ದು, ಈ ಸಂಬಂಧ ನಾಳೆ(ಮಂಗಳವಾರ) ಸಭೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಬೆಂಗಳೂರು ನಗರಾಭಿವದ್ಧಿ ಸಚಿವ ಕೆ.ಜೆ. ಜಾರ್ಜ್ ತಿಳಿಸಿದ್ದಾರೆ.

ಸಣ್ಣ ವಿಚಾರದಲ್ಲೂ ಬಿಜೆಪಿ ರಾಜಕೀಯ
ಶಾಸಕರ ಬೆಂಬಲಿಗರಿಂದ ಬಿಬಿಎಂಪಿ ಸದಸ್ಯೆ ಮೇಲೆ ಹಲ್ಲೆ ಆರೋಪಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್, ಇದು ಸಣ್ಣ ವಿಚಾರ ಮಾತುಕತೆ ನಡೆಸಿಕೊಂಡು ಬಗೆಹರಿಸಿಕೊಳ್ಳುತ್ತೇವೆ. ಇದರಲ್ಲೂ ಬಿಜೆಪಿ ರಾಜಕೀಯ ಮಾಡುತ್ತಿರುವುದು ಸರಿಯಲ್ಲ ಎಂದು ಕಿಡಿಕಾರಿದರು.
ಈ ಬಗ್ಗೆ ಬಿಜೆಪಿ ಪ್ರತಿಭಟನೆ ನಡೆಸಲಿದೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ಇದೆಲ್ಲಾ ಸಣ್ಣ ವಿಷಯ, ನಾವೇ ಬಗೆಹರಿಸಿಕೊಳ್ಳಲು ಮುಂದಾಗಿzವೆ ಎಂದರು. ಬಳಿಕ ಮೇಯರ್ ಜಿ.ಪದ್ಮಾವತಿ ಮಾತನಾಡಿ, ಪಾಲಿಕೆ ಸದಸ್ಯೆ ಮಂಜುಳಾ ನಾರಾಯಣಸ್ವಾಮಿ ಸೇರಿ ಮೂವರಿಗೆ ಪತ್ರ ಬರೆಯಲಾಗಿದೆ. ಆದರೆ, ಇದುವರೆಗೂ ಏಕೆ ಉತ್ತರಿಸಿಲ್ಲ ? ಎಂದು ಪ್ರಶ್ನಿಸಿದರು.

ಗಾಂಧಿನಗರದ ನ್ಯಾಷನಲ್ ಮಾರ್ಕೆಟ್ ವಾಣಿಜ್ಯ ಸಂಕೀರ್ಣದಲ್ಲಿ ಬಿಬಿಎಂಪಿ ವತಿಯಿಂದ ಮುಖ್ಯಮಂತ್ರಿಯವರ  ನಗರೋತ್ಥಾನ ಯೋಜನೆಯಡಿಯಲ್ಲಿ ಸ್ವಚ್ಛ ಮತ್ತು ಆರೋಗ್ಯಕರ ನಗರಕ್ಕಾಗಿ ‘ಜೋಡಿ ಕಸದ ಡಬ್ಬಗಳ ಅಳವಡಿಕೆ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಗರದ ಸ್ವಚ್ಛತೆಗೆ ಪೌರ ಕಾರ್ಮಿಕರ ಶ್ರಮವೇ ಕಾರಣ. ಆದರೆ, ಗುತ್ತಿಗೆ ಆಧಾರದಲ್ಲಿ ಅವರಿಗೆ ೫ ಸಾವಿರ ರೂಪಾಯಿ ಮಾತ್ರ ಮಾಸಿಕ ವೇತನ ನೀಡಲಾಗುತ್ತಿದೆ. ಈ ಬಗ್ಗೆ  ಸಚಿವರಾದ ಎಚ್. ಆಂಜನೇಯ ಹಾಗೂ ಈಶ್ವರ ಖಂಡ್ರೆ ಅವರೊಂದಿಗೆ ಸಭೆ ನಡೆಸಲಾಗಿದೆ. ಇನ್ನೂ ಸಚಿವ ಸಂಪುಟ ಸಭೆಯಲ್ಲೂ ಕನಿಷ್ಠ ವೇತನ ನೀಡಲು ಒಪ್ಪಿಗೆ ದೊರೆತಿದೆ. ಹೀಗಾಗಿ, ನಾಳಿದ್ದು ಆದೇಶ ಹೊರಡಿಸುವ ವಿಶ್ವಾಸ ವ್ಯಕ್ತಪಡಿಸಿದರು.

ನಗರದ ಹೊರವಲಯದಲ್ಲಿ ಕಸ ಸುರಿಯುತ್ತಿರುವುದರಿಂದ ಕೆಟ್ಟ ವಾಸನೆ ಬರುತ್ತಿದೆ ಎನ್ನುವ ದೂರುಗಳು ಬಂದಿವೆ.ಹೀಗಾಗಿ, ಕೃಷಿ ಇಲಾಖೆಯ ಸಹಯೋಗದೊಂದಿಗೆ ಈ ಸಮಸ್ಯೆ ಬಗೆಹರಿಸಲಾಗುವುದು. ಇನ್ನೂ ಏಳು ಕಡೆ ಕಾಂಪೂಸ್ಟ್ ಘಟಕ ಪ್ರಾರಂಭಿಸಲಾಗುವುದು ಎಂದ ಅವರು, ಕೆಲ ಕಡೆ ಆರ್‌ಡಿಎಫ್ ಬರುತ್ತಿರುವ ಕಾರಣ ಇದರಿಂದ ವಿದ್ಯುತ್ ಶಕ್ತಿ ಉತ್ಪಾದಿಸಲು ಜರ್ಮನ್ ದೇಶದ ಕಂಪನಿಯೊಂದು ಮುಂದಾಗಿದೆ ಎಂದರು.

ಬಿಬಿಎಂಪಿ ಮೇಯರ್ ಜಿ.ಪದ್ಮಾವತಿ ಮಾತನಾಡಿ, ಮುಖ್ಯಮಂತ್ರಿಗಳ ಪ್ರಸ್ತುತ ಸಾಲಿನ ನಗರೋತ್ಥಾನ ಯೋಜನೆಯಲ್ಲಿ ೨,೨೩೨ ಬೀದಿ ಕಸ ಸಂಗ್ರಹಿಸುವ ಜೋಡಿ ಡಬ್ಬಗಳನ್ನು ಖರೀದಿಸಿ ಅಳವಡಿಸಲು ೪೧೫.೬೬ ಲಕ್ಷ ಅನುದಾನ ಮೀಸಲಿಟ್ಟಿದೇವೆ. ಇದನ್ನು ಜನಸಂದಣಿ ಪ್ರದೇಶಗಳಲ್ಲಿ, ವಾಣಿಜ್ಯ, ಮಾರುಕm, ಕೊಳಚೆ, ಮುಖ್ಯರಸ್ತೆ, ಪಾದಚಾರಿ ರಸ್ತೆಗಳಲ್ಲಿ ಉಪಯೋಗಿಸಲಾಗುವುದೆಂದರು.

ಗಾಂಧೀನಗರ ವಿಧಾನಸಭಾ ಕ್ಷೇತ್ರದ ಶಾಸಕ ದಿನೇಶ್‌ಗುಂಡೂರಾವ್ ಮಾತನಾಡಿ, ಬೆಂಗಳೂರಿನಲ್ಲಿಯೇ ಅತಿ ಹೆಚ್ಚು ಜನ ಇರುವ ಪ್ರದೇಶ ಎಂದರೆ ಅದು ಗಾಂಧೀನಗರ. ಇನ್ನೂ ಪಾಲಿಕೆಯಿಂದ ಕಸದ ಡಬ್ಬಗಳನ್ನು ಅಳವಡಿಕೆ ಮಾಡುತ್ತೀರುವುದು ಒಳ್ಳೆಯ ಬೆಳವಣಿಗೆ.ಇದರಿಂದ ಸಾರ್ವಜನಿಕರಿಗೆ ಕಸ ಎಲ್ಲಿ ಹಾಕಬೇಕು ಎನ್ನುವ ಕಿರಿಕಿರಿ ದೂರವಾಗಲಿದೆ.

ಕಾರ್ಯಕ್ರಮದಲ್ಲಿ ಉಪಮೇಯರ್ ಎಂ.ಆನಂದ್, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಆನಂದ್‌ಕುಮಾರ್, ಆಡಳಿತ ಪಕ್ಷದ ನಾಯಕ ಮುಹಮ್ಮದ್ ರಿಜ್ವಾನ್ ನವಾಬ್, ಸದಸ್ಯರಾದ ಲತಾಕುಮಾರ್ ರಾಥೋಡ್, ಆರ್.ರಮಿಳಾ ಉಮಾಶಂಕರ್,  ಹೇಮಲತಾ, ರಾಧಾ ವೆಂಕಟೇಶ್, ಪಾಲಿಕೆ ಆಯುಕ್ತ ಮಂಜುನಾಥ್ ಪ್ರಸಾದ್, ಅಧಿಕಾರಿಗಳಾದ ವಿಜಯ್, ಸರ್ಫರಾಜ್ ಖಾನ್ ಸೇರಿ ಪ್ರಮುಖರು ಹಾಜರಿದ್ದರು.

ಅಯ್ಯೋ..ನನಗೆ ಗೊತ್ತೆ ಇರಲಿಲ್ಲ..!
ನನ್ನದೇ ವಿಧಾನಸಭಾ ಕ್ಷೇತ್ರದಲ್ಲಿ ಬಿಬಿಎಂಪಿ ವತಿಯಿಂದ ನಡೆಯುತ್ತಿರುವ ಕಸ ಸಂಗ್ರಹಿಸುವ ಜೋಡಿ ಡಬ್ಬ ವಿತರಣೆ ಕಾರ್ಯಕ್ರಮಕ್ಕೆ ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಬರುತ್ತಿರುವುದು ಗೊತ್ತೇ ಇರಲಿಲ್ಲ. ಈ ಬಗ್ಗೆ ನೀವು ಯಾಕೆ ಮಾಹಿತಿ ನೀಡಿಲ್ಲ ? ಎಂದು ಬಿಬಿಎಂಪಿ ಅಧಿಕಾರಿ ಸರ್ಫರಾಜ್ ಖಾನ್ ಅವರನ್ನು ದಿನೇಶ್ ಗುಂಡೂರಾವ್ ತರಾಟೆಗೆ ತೆಗೆದುಕೊಂಡರು. ಬಳಿಕ ವೇದಿಕೆಯಲ್ಲಿ ನಾನು ತಡವಾಗಿ ಬಂದಿzನೆ. ಜಾರ್ಜ್ ಅವರಿಗೆ ಕ್ಷಮೆ ಕೋರುತ್ತೇನೆ ಎಂದರು.

Leave a Comment