ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ

ರಾಯಚೂರು.ಜ.20-ಸಂವಿಧಾನದ ಜಾತ್ಯತೀತ ಮೂಲತತ್ವಗಳ ಮತ್ತು ದೇಶದ ಶೇ. 70 ರಷ್ಟು ಜನವಿರೋಧಿ ಸಿಎಎ, ಎನ್ ಅರ್‌ಪಿ, ಎನ್ಅರ್‌ಸಿ ತಿದ್ದುಪಡಿಗಳನ್ನು ರದ್ದುಪಡಿಸುವಂತೆ ಆಗ್ರಹಿಸಿ ಜಿಲ್ಲಾ ನ್ಯಾಯವಾದಿಗಳ ಹೋರಾಟ ಸಮಿತಿ ಜಿಲ್ಲಾ ಘಟಕದ ವತಿಯಿಂದ ಪ್ರತಿಭಟನೆ ಮಾಡಲಾಯಿತು .
ನಗರದ ಡಾ.ಬಿ.ಆರ್ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ಮಾಡುತ್ತಾ ಪೌರತ್ವ ತಿದ್ದುಪಡಿ ಕಾಯ್ದೆ, ರಾಷ್ಟ್ರೀಯ ಪೌರತ್ವ ನೋಂದಣಿ ತಿದ್ದುಪಡಿ ಕಾಯ್ದೆಗಳು ಸಂವಿಧಾನದ ಜಾತ್ಯತೀತ ಮೂಲತತ್ವಗಳು ಮತ್ತು ಪರಿಚ್ಛೇದ ೧೪ ಸಮಾನತೆಯು ಉಲ್ಲಂಘನೆಯಾಗಿರುವುದರಿಂದ ನಾಗರಿಕರ ಮನಸ್ಸಿನಲ್ಲಿ ಕಳವಳವನ್ನು ಉಂಟು ಮಾಡಿದೆ.
ಬಾಂಗ್ಲಾದೇಶ ಪಾಕಿಸ್ತಾನ ಅಪಘಾನಿಸ್ತಾನ ದೇಶಗಳಲ್ಲಿ ಧಾರ್ಮಿಕ ಕಿರುಕುಳಕ್ಕೆ ಗುರಿಯಾದ ಕಾರಣ 2014ರ ಡಿಸೆಂಬರ್ 31ರ ಮುಂಚೆ ಭಾರತಕ್ಕೆ ವಲಸೆ ಬಂದಿರುವ ಮುಸ್ಲಿಮರನ್ನು ವರತುಪಡಿಸಿ ಹಿಂದೂ, ಬೌದ್ಧ, ಜೈನ, ಪಾರ್ಸಿ ಮತ್ತು ಕ್ರೈಸ್ತರಿಗೆ ಮುಸ್ಲಿಮರನ್ನು ಹೊರತುಪಡಿಸಿ ಭಾರತದ ವೃತ್ತ ನೀಡುವುದು ಭಾರತ ಪಡೆಯಲು ವಲಸಿಗರು ಭಾರತದಲ್ಲಿ ಹನ್ನೊಂದು ವರ್ಷಗಳ ಬದಲಿಗೆ ಕನಿಷ್ಠ ಆರು ವರ್ಷದಲ್ಲಿ ಸೇರಬೇಕೆಂಬ ನಿಯಮವಿದೆ. ಆದರೆ ಈ ರಾಷ್ಟ್ರಗಳಲ್ಲಿ ದೌರ್ಜನ್ಯಕ್ಕೆ ಗುರಿಯಾದವರು ಕೇವಲ ಧಾರ್ಮಿಕ ಕಾರಣಗಳಿಗಾಗಿ ಅಲ್ಲದೆ ರಾಜಕೀಯ ಭಾಷೆಯಿಂದಲೇ ಎಲ್ಲಿ ದೌರ್ಜನಕ್ಕೆ ಗುರಿಯಾಗಿ ಭಾರತದಲ್ಲಿ ವಲಸಿಗರನ್ನು ಬದುಕುತ್ತಿದ್ದಾರೆ.
ದೇಶವು ಆರ್ಥಿಕ ಹಿಂಜರಿತದಿಂದ 40 ವರ್ಷಗಳ ಹಿಂದಕ್ಕೆ ಹೋಗಿದ್ದನ್ನು ಜನರು ಪ್ರಶ್ನಿಸಲಾಗದ ಅಂತಹ ಧಾರ್ಮಿಕ ಉದ್ಯಾನ ನಕಲಿ ದೇಶಭಕ್ತಿ ನಂತರ ಭಾಗವಾಗಿ ಬಿಜೆಪಿ ಕೇಂದ್ರ ಸರ್ಕಾರವು ಜಾರಿಗೊಳಿಸಿರುವ ಪೌರತ್ವ ಕಾಯ್ದೆ ತಿದ್ದುಪಡಿ 2019ರ ಪೌರತ್ವ ಜನಸಂಖ್ಯೆ ನೊಂದಣಿ 2020 ತಿದ್ದುಪಡಿಗಳನ್ನು ಕೂಡಲೇ ಹಿಂಪಡೆಯಬೇಕೆಂದು ಹಾಗೂ ಭಾರತ ಕಾಯ್ದೆ 1955 ರಲ್ಲಿನ ರಾಷ್ಟ್ರೀಯ ಗುರುತಿನ ಕಾರ್ಡುಗಳ ಜಾರಿಗೆ ಸಂಬಂಧಿಸಿದಂತೆ ನಿಯಮ 15 ಎ ಗಳನ್ನು ರದ್ದು ಮಾಡಬೇಕು, ವಿದೇಶಿಯರ ತಿದ್ದುಪಡಿ ಆರ್ಡರ್ 2019ನ್ನು ಹಿಂಪಡೆಯಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ವಕೀಲರಾದ ಎಸ್ ಮಾರಪ್ಪ,‌‌ಅರ್. ಗೌಸ್ ಪಾಶ, ಕರುಣಾಕರ್ ಕೆ,ಎನ್.ವಾಹಿದ್ ಪಟೇಲ್ ,ಎಎಂ ಅಲಿಖಾನ್, ಎಂ,ಡಿ ಅಬ್ದುಲ್ ವಾಜೀದ್, ಶಿವಕುಮಾರ್ ಮ್ಯಾಗಳಮನಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Leave a Comment