ಪೌರತ್ವದ ಕಿಚ್ಚು: ಅಂಜುಮನ್ ಧರಣಿ 3ನೇ ದಿನಕ್ಕೆ

ಹುಬ್ಬಳ್ಳಿ,ಜ 22-  ಪೌರತ್ವದ ಕಿಚ್ಚಿನ ರೋಷಾಗ್ನಿಗೆ ಇಡೀ ದೇಶ ಧಗಧಗಿಸುತ್ತಿರುವ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಕೇಂದ್ರದ ಪ್ರಧಾನಿ ಮೋದಿ ಸರ್ಕಾರ ಇನ್ನೂ ತನ್ನ ಹಠಮಾರಿ ಧೋರಣೆಯನ್ನು ಸಡಿಲಿಸುತ್ತಿಲ್ಲ. ಆದರೂ ಇಡೀ ದೇಶದಲ್ಲಿ ಪ್ರತಿಭಟನೆಯ ಕಾವು ದಿನದಿಂದ ದಿನಕ್ಕೆ ಏರುತ್ತಲೇ ಇದೆ ಎಂದು ಹುಬ್ಬಳ್ಳಿಯ ಅಂಜುಮನ್ ಇಸ್ಲಾಂ ಸಂಸ್ಥೆಯ ವತಿಯಿಂದ ಮಿನಿ ವಿಧಾನ ಸೌಧದ ಮುಂಭಾಗದಲ್ಲಿ ಆರಂಭಗೊಂಡ ಸಿಎಎ.ಎನ್.ಆರ್.ಸಿ.ಹಾಗೂ ಎನ್.ಪಿ.ಆರ್.ಕಾಯ್ದೆಯನ್ನು ವಿರೋಧಿಸಿ ಶಾಂತಿಯುತ ಅನಿರ್ಧಿಷ್ಟಾವಧಿಯ ಧರಣಿ ಸತ್ಯಾಗ್ರಹ ಇಂದು ಮೂರನೇ ದಿನಕ್ಕೆ ಕಾಲಿರಿಸಿದೆ.
ಈ ಪ್ರತಿಭಟನೆಯಲ್ಲಿ ಹಮ್ ಚಾಹತೆ ಹೈ ಗಾಂಧೀಜಿವಾಲಿ ಆಜಾದಿ, ಹಮ್ ಚಾಹತೆ ಹೈ ಅಂಬೇಡ್ಕರವಾಲಿ ಆಜಾದಿ, ಹಮ್ ಚಾಹತೆ ಹೈ ನೆಹರೂವಾಲಿ ಆಜಾದಿ, ಹಮ್ ಚಾಹತೆ ಹೈ ಮೌಲಾನಾ ಅಬ್ಲುಲ್ ಕಲಾಂ ಆಜಾದವಾಲಿ ಆಜಾದಿ ಎಂದು ಘೋಷಣೆಗಳನ್ನು ಕೂಗಿ ಸರ್ಕಾರದ ವಿರುದ್ಧ ಪ್ರತಿಭಟಿಸಲಾಯಿತು.
ಗಾರ್ಡನ್‌ಪೇಟ, ಕೋಲಸಾಬ್ದಾ ಕುಂಬಾರ ಓಣಿ, ಪಡದಯ್ಯನ ಹಕ್ಕಲ, ಬಡಾವಣೆಗಳ ನಾಗರಿಕರು ಪ್ರತಿಭಟನೆಯಲ್ಲಿ ಹಾಜರಿದ್ದರು.
ಈ ಸಂದರ್ಭದಲ್ಲಿ ಎಫ್.ಎಚ್. ಜಕ್ಕಪ್ಪನವರ, ಎ.ಎಂ. ಹಿಂಡಸಗೇರಿ, ತಾಜುದ್ದೀನ ಪೀರ ಖಾದರ, ಮೊಹಮ್ಮದ ಯೂಸುಫ ಸವಣೂರ, ಐ.ಜಿ. ಸನದಿ, ಅಲ್ತಾಫ ನವಾಜ ಎಂ. ಕಿತ್ತೂರ, ದಾದಾಹಯಾತ್ ಖೈರಾತಿ, ಎಚ್. ಡಿ.ಪಾಟೀಲ, ಮುಮ್ತಾಜ ಪಠಾಣ, ನೂರ ಕೊಪ್ಪಳ, ಗೌಸೂಫ ಕೊಪ್ಪಳ, ಎ. ಚಿಕ್ಕಬೂಳೆ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Leave a Comment