ಪೌರಕಾರ್ಮಿಕರು ಯಾರು ಹಸಿವಿನಿಂದ ಇರಬಾರದು

ಹನೂರು: ಏ.7- ಮಹಾಮಾರಿ ಕೊರೋನಾ ವೈರಸ್‍ನಿಂದ ದೇಶಾದ್ಯಂತ ಲಾಕ್‍ಡೌನ್ ಹಿನ್ನಲೆಯಲ್ಲಿ ಪೌರಕಾರ್ಮಿಕರು ಪಟ್ಟಣದ ಸ್ವಚ್ಚತೆಗೆ ಆದ್ಯತೆ ನೀಡುವುದರ ಜೊತೆಗೆ ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು ಯಾರು ಹಸಿವಿನಿಂದ ಇರಬಾರದು ಎಂದು ಹನೂರು ತಾಲ್ಲೂಕಿನ ಬಿಜೆಪಿ ಪ್ರದಾನ ಕಾರ್ಯದರ್ಶಿ ಮಹಾಲಿಂಗಕಟ್ಟೆ ಸಿದ್ದಪ್ಪ ತಿಳಿಸಿದರು.
ಹನೂರು ಪಟ್ಟಣದಲ್ಲಿ ಸ್ವಚ್ಚತೆ ಮಾಡುತ್ತಿರುವ ಪೌರಕಾರ್ಮಿಕರಿಗೆ ರೇಷನ್ ವಿತರಿಸಿ ಅವರು ಮಾತನಾಡಿ ದೇಶಾದ್ಯಂತ ಕೊರೋನಾ ವೈರಸ್ ವಿರುದ್ದ ಹೋರಾಡುತ್ತಿರುವ ಸೈನಿಕರಂದೇ ಬಿಂಬಿಸುವ ಪೌರಕಾರ್ಮಿಕರು ಪಟ್ಟಣದಲ್ಲಿ ಲಾಕ್‍ಡೌನ್ ಇದ್ದರೂ ಸ್ವಚ್ಚತೆಗೆ ಆದ್ಯತೆ ನೀಡುವುದರ ಮೂಲಕ ಈ ಹಿನ್ನಲೆಯಲ್ಲಿಯಾರೂ ಸಹ ಹಸಿವಿನಿಂದ ಇರಬಾರದುಸದುದ್ದೇಶದಿಂದ ಪ್ರತಿಯೊಬ್ಬರುದಿನ ನಿತ್ಯ ಸ್ವಚ್ಚತೆಗೆ ಆದ್ಯತೆ ನೀಡುವ ಪೌರಕಾರ್ಮಿಕರ ಜೊತೆಗೆ ವೈದ್ಯಾಧಿಕಾರಿಗಳು, ಪೊಲೀಸ್ ಇಲಾಖೆ ಹಾಗೂ ಮಾದ್ಯಮದವರು ಸಹ ತಮ್ಮ ಜೀವನದ ಅಂಗನ್ನು ತೊರೆದು ರಾತ್ರಿ ಹಗಲು ಎನ್ನದೇಕರ್ತವ್ಯ ನಿರ್ವಹಿಸುತ್ತಿರುವ ಕೊರೋನಾ ವೈರಸ್‍ಮಹಾಮಾರಿ ವಿರುದ್ದ ಹೋರಾಡುತ್ತಿರುವ ನಮ್ಮ ಸೈನಿಕರಿಗೆ ಪ್ರತಿಯೊಬ್ಬರು ಸಹಕಾರ ನೀಡುವನಿಟ್ಟಿನಲ್ಲಿ ಮುಂದಾಗಬೇಕು ಪೌರಕಾರ್ಮಿಕರುಯಾವುದೇ ಗಳಿಗೆಯಲ್ಲೂ ಸಹ ತಮ್ಮ ಆರೋಗ್ಯ ದೃಷ್ಠಿಯಿಂದ ಮಾಸ್ಕ್ ಮತ್ತು ಗ್ಲೌಸ್‍ಧರಿಸಿ ಕರ್ತವ್ಯ ನಿರ್ವಹಿಸಬೇಕು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿರಾಜಸ್ವ ನಿರೀಕ್ಷಕ, ಮನಿಯ, ವಾಹನ ಚಾಲಕ ನಿಂಗರಾಜು, ಬಿಜೆಪಿ ಮುಖಂಡರುಗಳಾದ ನಂಜಪ್ಪ, ಪುಟ್ಟರಾಜು, ನಾಗರಾಜು ಇದ್ದರು.

Leave a Comment