ಪೌರಕರ್ಮಿಕರಿಗೆ ಅಭಿನಂದನೆ

ಮೈಸೂರು.ಫೆ.28. ಪೋದಾರ್ ಇಂಟರ್ ನ್ಯಾಶನಲ್ ಸ್ಕೂಲ್ ವತಿಯಿಂದ ನಗರದ ಸ್ವಚ್ಛತೆಗೆ ಕಾರಣರಾದ ಪೌರಕರ್ಮಿಕರನ್ನು ಅಭಿನಂದಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಅಕ್ಕನ ಬಳಗದ ಬಳಿ ಇರುವ ವಲಯ ಕಛೇರಿಯ ಬಳಿ ಶಾಲೆಯ ವಿದ್ಯಾರ್ಥಿಗಳು ಆಗಮಿಸಿ ಪೌರಕರ್ಮಿಕರನ್ನು ಅಭಿನಂದಿಸಿ, ಕೃತಜ್ಞತೆ ಸಲ್ಲಿಸಿದರು. ಪೌರಕರ್ಮಿಕರ ಕಾರಣಕ್ಕಾಗಿಯೇ ಇಂದು ಮೈಸೂರು ನಗರವು ಸ್ವಚ್ಛತೆಯ ನಗರವೆಂದು ಗುರುತಿಸಿಕೊಳ್ಳಲು ಸಾಧ್ಯವಾಗಿದ್ದು, ಪೌರಕರ್ಮಿಕರಿಗೆ ಹೊರೆಯಾಗದಂತೆ ಮನೆಯಲ್ಲಿಯೇ ಒಣಕಸ, ಹಸಿಕಸ, ಇ-ತ್ಯಾಜ್ಯಗಳನ್ನು ಬೇರ್ಪಡಿಸಿ ಸಾರ್ವಜನಿಕರು ನೀಡಿದಲ್ಲಿ ಅವರಿಗೆ ಇನ್ನೂ ಹೆಚ್ಚಿನ ಅನುಕೂಲವಾಗಲಿದೆ ಎಂದು ವಿದ್ಯಾರ್ಥಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿದರು. ಎಲ್ಲೆಂದರಲ್ಲಿ ಕಸ ಬಿಸಾಡದೆ ನಿಗದಿಪಡಿಸಿದ ಸ್ಥಳಗಳಲ್ಲಿಯೇ ಹಾಕಿ ನಗರದ ಸ್ವಚ್ಛತೆ ಕಾಪಾಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಇದೇ ವೇಳೆ ತಾವೇ ತಯಾರಿಸಿದ ಹೂಗುಚ್ಛಗಳನ್ನು, ಗ್ರಿಟಿಂಗ್ ಕಾರ್ಡ್ಸ್ ಗಳನ್ನು ಪೌರಕಾರ್ಮಿಕರಿಗೆ ನೀಡಿ ಅಭಿನಂದಿಸಿದರು. ಪೌರಕಾರ್ಮಿಕರು ಕೂಡ ನಮ್ಮಲ್ಲಿ ಒಬ್ಬರು. ಅವರನ್ನು ಬೇರೆಯಾಗಿ ನೋಡಬಾರದು. ಅವರಿಂದಲೇ ಇಂದು ಸ್ವಚ್ಛತೆ ಕಾಯ್ದುಕೊಳ್ಳಲು ಸಾಧ್ಯವಾಗಿದೆ ಎಂದರು.
ಈ ಸಂದರ್ಭ ಪೌರಕಾರ್ಮಿಕರ ಅಧ್ಯಕ್ಷರಾದ ಮಾರಾ, ದೊರೆ, ಆರೋಗ್ಯಾಧಿಕಾರಿ ಜಯಂತ್, ಶಿಕ್ಷಕರಾದ ಸೌಮ್ಯಾ, ಸುಷ್ಮಾ ಮತ್ತಿತರರು ಉಸಪ್ಥಿತರಿದ್ದರು.

Leave a Comment