ಪೋಷಕಾಂಶಗಳ ಆಗರ ಸಿಹಿ ಖರ್ಜೂರ

ಸಿಹಿ ಖರ್ಜೂರವನ್ನು ಇಷ್ಟ ಪಡದವಱ್ಯಾರೂ ಇರಲಾರರು. ಆಬಾಲ ವೃದ್ಧರಾದಿಯಾಗಿ ಸಿಹಿ ಖರ್ಜೂರ ತಿನ್ನಲು ಬಯಸುತ್ತಾರೆ. ಮರುಭೂಮಿಯಲ್ಲಿ ಬೆಳೆಯುವ `ಬಂಗಾರ`ವೆಂದೇ ಪ್ರಸಿದ್ಧಿಯಾಗಿರುವ ಖರ್ಜೂರ, ನಮ್ಮ ಆರೋಗ್ಯ ಸುಧಾರಣೆಯಲ್ಲಿ ಮಹತ್ವದ ಪಾತ್ರ ನಿರ್ವಹಿಸಲಿದೆ.
ಸಿಹಿ ಖರ್ಜೂರ ಎಂದಾಕ್ಷಣ ಬಾಯಲ್ಲಿ ಜೊಲ್ಲು ಉತ್ಪಾದನೆಯಾಗುತ್ತದೆ. ಅಷ್ಟರಮಟ್ಟಿಗೆ ಇದು ರುಚಿಕರ ಮತ್ತು ಎಲ್ಲರೂ ಇಷ್ಟಪಡುವ ಹಣ್ಣಾಗಿದೆ.
ರಂಜಾನ್ ವ್ರತ ಮತ್ತು ಹಬ್ಬದ ಸಂದರ್ಭದಲ್ಲಿ ಖರ್ಜೂರದ ಬಳಕೆ, ವಿತರಣೆ ಹೆಚ್ಚಾಗಿರುತ್ತದೆ. ಮುಸ್ಲಿಂ ಬಾಂಧವರು, ಇತರೆ ಸಮುದಾಯಗಳಲ್ಲಿನ ತಮ್ಮ ಗೆಳೆಯರಿಗೆ, ಆಪ್ತರಿಗೆ ಉಡುಗೊರೆಯಾಗಿ ನೀಡುವುದು ವಾಡಿಕೆ.
ಹಲವು ಬಗೆಯ ಪೌಷ್ಠಿಕಾಂಶಗಳನ್ನು ಹೊಂದಿರುವ ಸಿಹಿ ಖರ್ಜೂರದಲ್ಲಿ ಪ್ರೋಟೀನ್ ಅಂಶಗಳು ಹೇರಳವಾಗಿವೆ. ಹಲವು ಬಗೆ ಸಿಹಿತಿಂಡಿಗಳ ತಯಾರಿಕೆಯಲ್ಲಿ ಖರ್ಜೂರವನ್ನು ಅನಾದಿ ಕಾಲದಿಂದಲೂ ಉಪಯೋಗಿಸಲಾಗುತ್ತಿದೆ.
ದಿನಕ್ಕೆರಡು ಸಿಹಿ ಖರ್ಜೂರ ತಿನ್ನಿ, ಆನಂತರ ಅದರಿಂದ ನಮ್ಮ ಆರೋಗ್ಯ ಸುಧಾರಣೆಗಳನ್ನು ಕಾಣಬಹುದಾಗಿದೆ.
ಸಿಹಿ ಖರ್ಜೂರ ದೇಹದ ಆರೋಗ್ಯ ರಕ್ಷಣೆಯಲ್ಲಿ ಮಹತ್ವ ಹಾಗೂ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಹಾಗೆಯೇ ತ್ವಚೆ ಮತ್ತು ಕೂದಲಿಗೂ ತುಂಬಾ ಲಾಭಕಾರಿಯಾಗಿದೆ.
ಖರ್ಜೂರವನ್ನು ಸೌಂದರ್ಯ ವರ್ಧಕವಾಗಿಯೂ ಹಲವು ರೀತಿಯಲ್ಲಿ ಬಳಸಿಕೊಳ್ಳಲಾಗುತ್ತಿದೆ. ಖರ್ಜೂರ ಬಳಕೆಯಿಂದ ವಯಸ್ಸಾಗುವ ಲಕ್ಷಣಗಳನ್ನು ತಡೆಯಲಿದೆಯಂತೆ, ನೆರಿಗೆ ಹಾಗೂ ಗೆರೆಗಳು ಬೀಳುವ ಚರ್ಮವನ್ನು ಸುಂದರಗೊಳಿಸುವ ಸಾಮರ್ಥ್ಯ ಖರ್ಜೂರದಲ್ಲಿದೆ.
ವಯಸ್ಸಾಗುವ ಲಕ್ಷಣ ತಡೆಯುವಂತಹ ಫೇಸ್ ಪ್ಯಾಕ್ ಮಾಡಬೇಕಾದರೆ, ಕೆಲವು ಖರ್ಜೂರದ ಬೀಜ ತೆಗೆದು, ಅದನ್ನು ರುಬ್ಬಿಕೊಂಡು, ಪೇಸ್ಟ್ ಮಾಡಬೇಕು. ಇದಕ್ಕೆ ಒಂದು ಚಮಚ ಮೊಸರು ಮತ್ತು ಒಂದು ಚಮಚ ಜೇನು ತುಪ್ಪ ಸೇರಿಸಿಕೊಳ್ಳಬೇಕು. ಮಿಶ್ರಣವನ್ನು ಮುಖಕ್ಕೆ ಹಚ್ಚಿಕೊಂಡು ಸ್ವಲ್ಪ ಸಮಯ ಬಿಟ್ಟು ತಣ್ಣೀರಿನಿಂದ ತೊಳೆಯಬೇಕು. ಖರ್ಜೂರದಲ್ಲಿರುವ ವಿಟಮಿನ್ – ಬಿ ಚರ್ಮದ ಕಲೆಗಳನ್ನು ನಿವಾರಿಸಲು ನೆರವಾಗುತ್ತದೆ. ವಿಶೇಷವಾಗಿ- ಗರ್ಭಾವಸ್ಥೆಯಲ್ಲಿ ವಿಟಮಿನ್-ಬಿ ಕೊರತೆಯಾದರೆ, ಕೆಳ ಹೊಟ್ಟೆಯಲ್ಲಿ ಸೆಳೆತದ ಗುರುತುಗಳು ಬೀಳುತ್ತವೆ. ನಿಯಮಿತವಾಗಿ ಖರ್ಜೂರ ತಿನ್ನುವ ಮೂಲಕ ಇಂತಹ ಸಾಧ್ಯತೆಯನ್ನು ತಡೆಯಬಹುದು.
ಕೂದಲು ಉದುರುವ ಸಮಸ್ಯೆಗೂ ಖರ್ಜೂರ ನಿವಾರಣೆ ಮಾಡಲಿದೆ. ವಿಟಮಿನ್ ಕೊರತೆಯಿಂದಾಗಿ ಕೂದಲು ಉದುರುವುದು ಮತ್ತು ಕೂದಲಿನ ಕೋಶಗಳು ದುರ್ಬಲಗೊಳ್ಳಲಿವೆ.
ಖರ್ಜೂರದಲ್ಲಿ ಕಬ್ಬಿನಾಂಶ ಹೇರಳವಾಗಿರುವುದರಿಂದ ಕೂದಲಿನ ಬೆಳವಣಿಗೆಗೆ ಸಹಕಾರಿಯಾಗಲಿದೆ. ಇದರಿಂದ ಕೂದಲು ಉದುರುವುದೂ ಕಡಿಮೆಯಾಗಲಿದೆ.

Leave a Comment