ಪೋಷಕರು ಬೈದಿದ್ದಕ್ಕೆ ವಿದ್ಯಾರ್ಥಿ ನೇಣಿಗೆ ಶರಣು

ತುಮಕೂರು, ಫೆ. ೧೮- ಶಾಲೆಗೆ ಮೊಬೈಲ್ ತೆಗೆದುಕೊಂಡು ಹೋಗಿದ್ದೀಯಾ ಎಂದು ಪೋಷಕರು ಬೈದಿದ್ದಕ್ಕೆ ಮನನೊಂದ ವಿದ್ಯಾರ್ಥಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಶಿರಾಗೇಟ್‌ನಲ್ಲಿ ನಡೆದಿದೆ.

ಸುಮಿತ್ (14) ನೇಣು ಹಾಕಿಕೊಂಡಿರುವ ದುರ್ದೈವಿ ವಿದ್ಯಾರ್ಥಿ. ಈತ ಕಾಳಿದಾಸ ಶಾಲೆಯಲ್ಲಿ 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾನೆ. ಶಾಲೆಗೆ ಮೊಬೈಲ್ ತೆಗೆದುಕೊಂಡು ಹೋಗಿದ್ದೀಯಾ ಎಂದು ಪೋಷಕರು ಬೈದಿದ್ದಕ್ಕೆ ಮನೆಯಲ್ಲಿ ಫ್ಯಾನ್‌ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಈ ಸಂಬಂಧ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Leave a Comment