ಪೋಲಿಸ್,ಆರೋಗ್ಯ ಇಲಾಖೆಯ ಸಿಬ್ಬಂದಿಗೆ ಮಧ್ಯಾಹ್ನದ ಊಟ

ಮೈಸೂರು. ಮಾ.27- ಕರೋನ ರೋಗದ ಹೆಮ್ಮಾರಿಯ ಭೀತಿಯು ದಿನದಿಂದ ದಿನಕ್ಕೆ ಮನುಷ್ಯನ ಭೀತಿ ಹೆಚ್ಚಿಸುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅಗತ್ಯ ಕ್ರಮಗಳನ್ನು ಕೈಗೊಂಡಿವೆ.‌ ಆದರೆ ಸ್ಥಳೀಯರಾಗಿ ನಾವೂ ಕೂಡ ಮಾನವೀಯ ಮೌಲ್ಯಗಳ ಅರಿತು ನಮ್ಮೆಲ್ಲರ ಹಿತ,ಆರೋಗ್ಯ, ಸಂರಕ್ಷಕರಾಗಿ ಹಗಲಿರುಳು ಶ್ರಮಿಸುತ್ತಿರುವ ಪೋಲೀಸ್ ಇಲಾಖೆ,ವೈದ್ಯಕೀಯ ರಂಗಕ್ಕೆ ನಾವೆಷ್ಟೂ ಕೃತಜ್ಞತೆ ಸಲ್ಲಿಸಿದರೂ ಅದು ಅಲ್ಪವಾಗುತ್ತದೆ. ಇದಕ್ಕೆ ಸಹಕಾರಿಯಾಗುವಂತೆ ನಾವು ನಮ್ಮಿಂದಾಗುವ ಸಹಕಾರಗಳನ್ನು ಇಂದಿನ ಸ್ಥಿತಿ ಗತಿಗೆ ಅನುಗುಣವಾಗಿ ಉಚಿತ ಆಹಾರ ಪೂರೈಕೆಯನ್ನು ಮಾಡಿದರೆ ನಮಗೊಂದು ಸಾರ್ಥಕತೆ ದೊರೆಯುತ್ತದೆಂದು ನೆನೆದು ಮೈಸೂರಿನ ಪೋಲಿಸ್ ಠಾಣೆಗಳು ಮತ್ತು ಆರೋಗ್ಯ ಇಲಾಖೆಯಲ್ಲಿರುವ ಸಿಬ್ಬಂದಿಗೆ ಮಧ್ಯಾಹ್ನದ ಊಟ ಸರಬರಾಜು ಮಾಡುವ ಕಾರ್ಯಕ್ರಮವನ್ನು ಶ್ರೀ ಕೇಟರರ್ಸ್, ರಾಕೇಶ್ ಮತ್ತು ನಾಗೇಶ್ ರವರುಗಳ ಸಹಭಾಗಿತ್ವದಲ್ಲಿ ಹಮ್ಮಿಕೊಂಡಿರುತ್ತದೆ.

Leave a Comment