ಪೋಲಿಯೋ ಲಸಿಕೆ : ಪೂರ್ವಭಾವಿ ಸಭೆ

ರಾಯಚೂರು.ಜ.16- ಪೋಲಿಯೋ ಲಸಿಕೆಯನ್ನು ಪ್ರತಿಯೋಬ್ಬ ಮಗುವಿಗೆ ತಪ್ಪದೆ ಲಸಿಕೆ ಹಾಕಿಸಬೇಕೆಂದು ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ ಅವರು ಹೇಳಿದರು.
ಅವರಿಂದ್ದು ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಜ. 19 ರಂದು ಆಯೋಜಿಸಲಾಗಿದ್ದ ಪೋಲಿಯೋ ಲಸಿಕೆ ಅಭಿಯಾನ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿದವರು ಪ್ರತಿ ಹಳ್ಳಿಗಳಲ್ಲಿ ಪ್ರೌಢ ಶಾಲಾ ವಿದ್ಯಾರ್ಥಿಗಳನ್ನು 5 ಜನರ ಗುಂಪುಗಳನ್ನಾಗಿ ವಿಂಗಡಿಸಿ ಪ್ರೌಢ ಶಾಲಾ ವಿದ್ಯಾರ್ಥಿಗಳನ್ನು ಮನೆ ಮನೆಗೆ ತೆರಳಿ ಮಕ್ಕಳನ್ನು ಕರೆದುಕೊಂಡು ಲಸಿಕೆಯನ್ನು ಹಾಕಿಸಬೇಕು ಇದ್ದರಿಂದ ಶೇ. 100 ರಷ್ಟು ಮಕ್ಕಳಿಗೆ ಪೋಲಿಯೋ ಲಸಿಕೆಯನ್ನು ಹಾಕಿಸಬಹುದಾಗಿದೆ.
ಕಳೆದ ಬಾರಿ ಶೇ.88 ರಷ್ಟು ಪೋಲಿಯೋ ಲಸಿಕೆ ಹಾಕಲಾಗಿತ್ತು ಆದರೆ ಈ ಭಾರೀ ಶೇ.100 ರಷ್ಟು ಪೋಲೀಯೋ ಲಸಿಕೆ ಆಗಬೇಕು. ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ಮಾನ್ವಿ ತಾಲೂಕು ಶೇ.90.61 ಪೋಲಿಯೋ ಕವರೇಜ್ ಮಾಡಲಾಗಿತ್ತು. ಆದರೆ ಈ ಭಾರೀ ಜಿಲ್ಲೆಯ ಎಲ್ಲಾ ತಾಲೂಕಿನಲ್ಲಿ ಶೇ.100 ರಷ್ಟು ಪೋಲಿಯೋ ಲಸಿಕೆಯನ್ನು ಹಾಕಿಸಬೇಕು.
ದೇವದುರ್ಗ ತಾಲೂಕಿನಲ್ಲಿ ತಾಂಡಗಳು ಹೆಚ್ಚಿರುವುದರಿಂದ ಪ್ರತಿಯೊಂದು ತಾಂಡಗಳಿಗೆ ತೆರಳಿ ಮಕ್ಕಳಿಗೆ ಲಸಿಕೆಯನ್ನು ಹಾಕಿಸುವ ಕಾರ್ಯ ಮಾಡಬೇಕೆಂದರು.
ಈ ಸಂದರ್ಭದಲ್ಲಿ ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಸುರೇಂದ್ರಬಾಬು ಸೇರಿದಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Comment